• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓದುಗರ ಓಲೆ : ಆಸಕ್ತಿ ಕೆರಳಿಸುವ ಕೆಲ ಪತ್ರಗಳು

By Prasad
|

ಬರೆಯುವವರಿಗಿಂತ ಸುದ್ದಿಯನ್ನು ಓದುವವರೇ ಹೆಚ್ಚು ಜ್ಞಾನವಂತರು ಎಂಬುದು ಮಾಧ್ಯಮ ವಲಯದಲ್ಲಿ ಚಾಲ್ತಿಯಲ್ಲಿರುವ ಮಾತು. ಚಿಂತನೆಗೆ ಹಚ್ಚುವಂಥ ಅವರ ಕೆಲವು ಅಭಿಪ್ರಾಯಗಳು ಸಮಾಜಕ್ಕೆ ದಾರಿದೀಪವಾಗಿರುತ್ತವೆ. ತೂಕಡಿಸುತ್ತಿದ್ದರೆ ಎಚ್ಚರಿಸುವಂಥ, ತಪ್ಪಿದರೆ ಚಾಟಿ ಬೀಸುವಂಥ ಕಾಮೆಂಟುಗಳಿಗೆ ಇಲ್ಲಿ ಸದಾ ಸ್ವಾಗತ.

ಆಸಕ್ತಿ ಹುಟ್ಟಿಸುವಂಥ, ಮನಬಿಚ್ಚಿ ಹೇಳಿದಂಥ ಕೆಲವು ಆಯ್ದ ಕಾಮೆಂಟುಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಕೆಲವರು ಆಂಗ್ಲ ಭಾಷೆಯಲ್ಲಿ ಅತ್ಯಂತ ಪ್ರಬುದ್ಧವಾಗಿ ಬರೆದಿರುತ್ತಾರಾದರೂ, ಕನ್ನಡವನ್ನೇ ಪ್ರೋತ್ಸಾಹಿಸುವ ದೃಷ್ಟಿಯಿಂದ ಕನ್ನಡದಲ್ಲಿಯೇ ಬರೆದ ಕೆಲ ಅಭಿಪ್ರಾಯಗಳನ್ನು ಹೆಕ್ಕಿ ನೀಡಿದ್ದೇವೆ. ಸಾಧ್ಯವಾದಷ್ಟೂ ಕನ್ನಡದಲ್ಲಿಯೇ ಬರೆಯಿರಿ ಎಂಬುದು ನಮ್ಮ ಕಳಕಳಿಯ ಮನವಿ ಕೂಡ.

ಹಾಕುವ ಬಟ್ಟೆ ಮಾನ ಹರಾಜು ಹಾಕದಿರಲಿ

ಮಿ.ರೋಜರ್ ದಟ್ ನೀವು ಮನೆಯಲ್ಲಿ ಯಾವ ಬಟ್ಟೆ ಹಾಕ್ಕೊಳ್ತೀರೋ ನನಗೆ ಗೊತ್ತಿಲ್ಲ. ಇಲ್ಲಿ ಪ್ರಶ್ನೆ ಏನೆಂದರೆ ನಮ್ಮ ಸಂಸ್ಕೃತಿ ಹಾಳಾಗಬಾರದು ಅಷ್ಟೇ. ಇಲ್ಲಿ ಬರೀ ಟೂ ಫೀಸ್ ಲೆಕ್ಕಕ್ಕೆ ಬರಲ್ಲ ಮಕ್ಕಳ ಬಟ್ಟೆ ಮಾತು ಎಲ್ಲ ಸೇರಿ ತಂದೆ ತಾಯಿಯ ಯೋಗ್ಯತೆ ಅವರ ಸಂಸ್ಕೃತಿ ಅವರು ಹೇಗೆ ಬದುಕುತ್ತಿದ್ದಾರೆ ಅನ್ನೋದನ್ನು ತೋರಿಸುತ್ತೆ. ಇಷ್ಟ ಬಂದ ಬಟ್ಟೆ ಹಾಕಿಕೊಳ್ಳಲಿ ಬೇಡ ಎನ್ನಲ್ಲ ಆದರೆ ಆ ಬಟ್ಟೆ ಅವರ ಮಾನ ಹರಾಜು ಹಾಕದ ಹಾಗೆ ಇರಲಿ ಅಷ್ಟೇ. ಎಂಜಾಯ್ ಮಾಡಕ್ಕೆ ಪಬ್ಲಿಕ್ ಪ್ಲೇಸ್ ಬೇಡ ನಾಲ್ಕು ಗೋಡೆ ಮಧ್ಯೆ ಸಾಕು ಅನ್ಕೋತೀನಿ.

ನಿಮಗೆ ಒಂದು ಚಿಕ್ಕ ಸ್ಟೋರಿ ಹೇಳ್ತೀನಿ... ಒಂದು ಬೀಚಲ್ಲಿ ಒಂದು ಹುಡುಗಿ ಬಿಕಿನಿ ಹಾಕ್ಕೊಂಡು ಮಲಗಿರ್ತಾಳೆ ಅವಳ ಮೊಲೆಗಳ ಸೈಜ್ ನೋಡಿ ಒಬ್ಬ ವಾವ್ ವಾಟ್ ಎ ಬೂಬ್ಸ್ ಎಂದ. ಅದನ್ನು ನೋಡಿ ಅವಳು ಕಿರುಚಿ ಅವನ ಮೇಲೆ ಅಸಭ್ಯ ನಡತೆ ಎಂದು ಕೇಸ್ ಹಾಕಿದರು. ಇಲ್ಲಿ ಅಸಭ್ಯ ರೀತಿಯಲ್ಲಿ ಬಟ್ಟೆ ಹಾಕಿಕೊಂಡ ಹುಡುಗಿ ತಪ್ಪಾ? ಅದನ್ನು ನೋಡಿ ತನಗೆ ಇಷ್ಟ ಬಂದ ಹಾಗೆ ಮಾತನಾಡಿದ(ವಾಕ್ ಸ್ವಾತಂತ್ರ್ಯ) ಆ ವ್ಯಕ್ತಿಯ ತಪ್ಪಾ? [ಗೋವಾದಲ್ಲಿ ಬಿಕಿನಿ ನಿಷೇಧ]

ವೆಂಕಟೇಗೌಡ

***

ದೇಶಪ್ರೇಮಿ ಸೈನಿಕ ಮಂಜುನಾಥರಿಗೆ ಅಭಿನಂದನೆ

ಮಂಜುನಾಥರವರ ಧೈರ್ಯ ಮೆಚ್ಚಬೇಕು ಮತ್ತು ಅವರಿಗೆ ಎಲ್ಲ ದೇಶಪ್ರೇಮಿಗಳ ಪರವಾಗಿ ನನ್ನ ಅಭಿನಂದನೆಗಳು. ನಮ್ಮ ಸೈನ್ಯಕ್ಕೆ ಇಂತಹ ದೇಶಪ್ರೇಮಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಈ ಪ್ರಕರಣ ಸಿಬಿಐ ತನಿಖೆಯಾಗಬೇಕು. ಭ್ರಷ್ಟ ಸೇನಾ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಮೋದಿಯವರು ಇರುವುದರಿಂದ ನ್ಯಾಯ ಸಿಗುವ ಭರವಸೆಯಿಂದಿರಬಹುದು.

ಮಂಜುನಾಥ್ ರವರೆ, ನೀವು ಧೃತಿಗೆಡುವ ಅಗತ್ಯವಿಲ್ಲ, ನಾವು ನಿಮ್ಮೊಂದಿಗಿದ್ದೇವೆ. ಕನ್ನಡದ ಕಳಪೆ ಮಾಧ್ಯಮಗಳ ಅಯೋಗ್ಯ ಸುದ್ದಿ ಓದುವವರು ಮತ್ತು ಆಂಕರ್ ಗಳು ದೇಶ ಸೇವೆಯಲ್ಲಿರುವ ಮತ್ತು ಅನ್ನ ಕೊಡುವ ರೈತರನ್ನು ಮೊದಲು ಗೌರವ ಮರ್ಯಾದೆಯಿಂದ ಕಾಣುವುದು ಕಲಿಯಬೇಕು. [ಸೈನಿಕ ಕೆಲಸದಿಂದ ವಜಾ]

ಬೀರ

***

ಧಾರ್ಮಿಕ ನಾಯಕನಿಗೆ ಉತ್ತಮ ವಿದ್ಯಾಭ್ಯಾಸ ಅಗತ್ಯ

ಒಬ್ಬ ಕ್ಯಾಥೋಲಿಕ್ ಕ್ರೈಸ್ತ ಪಾದ್ರಿಯಾಗಬೇಕಾದರೆ 10ನೇ ತರಗತಿ ಮುಗಿದ ನಂತರ ಕನಿಷ್ಠ 9 ವರ್ಷ ಓದಬೇಕು. ಇದರಲ್ಲಿ ಶೈಶಣಿಕ ಅರ್ಹತೆಯಾಗಿ ಕನಿಷ್ಠ ಸ್ನಾತಕೋತ್ತರ ಪದವಿ ಮತ್ತು ಧಾರ್ಮಿಕ ಅರ್ಹತೆಯಾಗಿ ಕನಿಷ್ಠ ದೇವಶಾಸ್ತ್ರ ಮತ್ತು ತತ್ವಶಾಸ್ರ ಮಾಡಿರಲೇ ಬೇಕು. ಇಷ್ಟು ಇಲ್ಲದಿದ್ದರೆ ಅವನಿಗೆ ಪಾದ್ರಿಯಾಗಿ ದೀಕ್ಷೆ ಸಿಗುವುದಿಲ್ಲ.

ಇವಷ್ಟೇ ಅಲ್ಲದೆ ಇನ್ನು ಕೆಲವು ವ್ಯಕ್ತಿಗಳು ಅಗತ್ಯಕ್ಕೆ ಅನುಗುಣವಾಗಿ 15 ರಿಂದ 20 ವರ್ಷಗಳ ತನಕ ಓದುತ್ತಾರೆ. ಅಂದರೆ ಮನೋವಿಜ್ಞಾನ, ಸಮಾಜಸೇವೆಯ ವಿಷಯಗಳನ್ನು ಓದುತ್ತಾರೆ. ಕೆಲವು ಸೂಕ್ತ ವಿಷಯಗಳ ಮೇಲೆ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿಯನ್ನು ಪಡೆಯುವುದು ಉಂಟು.

ಎಲ್ಲ ಧರ್ಮಗಳಲ್ಲಿ ಒಬ್ಬ ಧಾರ್ಮಿಕ ನಾಯಕರು ಹೀಗೆ ಹೆಚ್ಚು ವಿದ್ಯಾಭ್ಯಾಸ ಪಡೆಯುವುದು ಸೂಕ್ತ. ಹೀಗೆ ಮಾಡುವುದರಿಂದ ಅವರು ಕೇವಲ ದೇವರ ಪೂಜೆಯನಷ್ಟೇ ಮಾಡದೆ ಭಕ್ತಾದಿಗಳನ್ನು ತಿದ್ದಲು ಸಲಹಲು ಸಾಧ್ಯ. ಇಂತ ವಿಷಯಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕು. [ಅರ್ಚಕರಿಗೆ ಡಿಪ್ಲೋಮಾ]

ಶಾಸ್ತ್ರೀ

***

ಗುರು ಅನ್ನೋ ಪದ ಭಾಳ ಸಸ್ತಾದೊಳಗ ಸಿಕ್ಕದ

ಈ ಬೆಂಗಳೂರ್ ಮಂದಿಗೆ ಗುರು ಅನ್ನೋ ಪದ ಭಾಳ ಸಸ್ತಾದೊಳಗ ಸಿಕ್ಕದ ಅನಸ್ತದ ನಂಗ. ಹಿಂದ್ ಹೇಳ್ತಿದ್ರು "ಒಂದಕ್ಷರವಂ ಕಲಿಸಿದಾತವಂ ಗುರು" ಅಂತ. ಆದ್ರ ಈವಾಗ ಜ್ಯೋತಿಷ್ಯ ಹೇಳೋರು, ಕಾವಿ ಹಕ್ಕೊಂಡೋರು ಎಲ್ಲರೂ ಗುರುಗಳೇ. ದಯವಿಟ್ಟು ಸ್ವಲ್ಪ ಭಾಷಾ ಜ್ಞಾನ ಜಾಸ್ತಿ ಮಾಡ್ಕೋ ಪಾ ದೋಸ್ತ್, ಅಂತ ನಾ ನನ್ ಸ್ನೇಹಿತನಿಗೆ ಬಸ್ ಸ್ಟಾಪ್ ನ್ಯಾಗ್ ನಿಂತು ಹೇಳಿಕತ್ತಿದ್ದೆ, ಅಷ್ಟ್ರಾಗ ಒಬ್ಬವ ಬಂದು "ಗುರೂ" ಈ ಬಸ್ಸು ವಿಜಯನಗರಕ್ಕೆ ಹೋಗುತ್ತಾ ಅಂತ ಕೇಳ್ ಬಿಟ್ಟ ರೀ! :)

ಲಕ್ಷ್ಮೀನಾರಾಯಣ ಶಾಸ್ತ್ರೀ

***

ಶಿವಣ್ಣ ಹೀನ ಸುಳಿಗಳ ಸಹವಾಸ ಬಿಡಲಿ

ಶಿವಣ್ಣ ತಮ್ಮ ಮನಸ್ಸಿನಲ್ಲಿದ್ದುದನ್ನ ಈಗ ಹೇಳಿದ್ದರೋ ಅಥವಾ ಬಾಲ ಹಿಡಿಯುತ್ತಿದ್ದಾರೋ ಅದಂತೂ ಗೊತ್ತಿಲ್ಲ. ಆದ್ರೆ ಶಿವಣ್ಣ ಯಾಮಾರೋದಕ್ಕೆ ಮೊದಲೇ ಯೋಚಿಸಬೇಕಿತ್ತು. ದೇವೇಗೌಡರ ಸಹವಾಸ ಮಾಡಿದವರ್ಯಾರೂ ಉದ್ಧಾರ ಆಗಿಲ್ಲ, ಆಗೋದು ಇಲ್ಲ ಅಂತ.. ಇದ್ದ ಒಂದಿಷ್ಟು ಮರ್ಯಾದೆಯನ್ನ ಶಿವಮೊಗ್ಗ ಜನತೆಯ ಮುಂದೆ ಹರಾಜು ಹಾಕಿ ಮಧು, ದೇವು ಕುಮ್ಮಿ ಶಿವಣ್ಣನ ಹ್ಯಾಟ್ರಿಕ್ ಹೀರೋ ಇಮೇಜ್ ಗೆ ಕುತ್ತು ತಂದರು. ಇನ್ನು ಮುಂದಾದರೂ ಶಿವಣ್ಣ ಇಂತಹ ಹೀನ ಸುಳಿಗಳ ಸಹವಾಸ ಮಾಡದಿರೋದೆ ಒಳ್ಳೆಯದು. [ಶಿವರಾಜ್ ಎಚ್ಚೆತ್ತುಕೊಳ್ಳಲಿ]

ಅಭಿಮಾನಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Letters to the editor : Oneindia-Kannada has picked few interesting and thought provoking letters/comments written by the readers. Oneindia urges the readers to write only in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more