• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓದುಗರ ಓಲೆ : ನಮ್ಮ ಊರು ಬಿಡೋದಂದ್ರೆ ರಿಸ್ಕ್ ತಗೊಂಡ ಹಾಗೆ

By Prasad
|

1. ಅಮೆರಿಕಾಕ್ಕೆ ಬರಬೇಡಿ ಅನ್ನೋ ಸಂಪೂರ್ಣ ಅಧಿಕಾರ ಅಮೆರಿಕಾದ ಜನತೆಗೆ, ಜನತೆಯಿಂದ ಚುನಾಯಿಸಲ್ಪಟ್ಟ ಅಧ್ಯಕ್ಷರಿಗೆ ಇದೆ. ಅದೇನೂ ನಮ್ಮ ತವರುಮನೆಯಲ್ಲ ನಮ್ಮ ಹಕ್ಕು ಚಲಾಯಿಸೋದಕ್ಕೆ.

2. ಅಧ್ಯಕ್ಷ ಟ್ರಂಪ್‌ ಪ್ರಸ್ತಾವಿಸಿರುವ ವಲಸೆ ನೀತಿಗೂ ನಿಮ್ಮ ಮಗನ ಸಾವಿಗೂ ಯಾವುದೇ ಸಂಬಂಧವಿಲ್ಲ. ಹೊರಗಿನವರನ್ನು ಗುರಿಯಾಗಿಸಿರುವ ಹಿಂಸಾಚಾರ ಇದೇ ಮೊದಲನೆಯದಲ್ಲ, ಕೊನೆಯದೂ ಅಲ್ಲ. ಒಬಾಮಾ, ಬುಷ್ ಹೀಗೆ ಹಿಂದಿನ ಅವಧಿಗಳಲ್ಲೂ ಭಾರತೀಯರ ಮೇಲೆ ಹಲ್ಲೆಗಳಾಗಿವೆ. ಈ ಬಾರಿ ಮಾತ್ರ ಮಾಧ್ಯಮದವರೆಲ್ಲರೂ ಸೇರಿ ಟ್ರಂಪ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ.

3. ನಮ್ಮ ಊರು ನಮಗೆ. ಒಮ್ಮೆ ನಮ್ಮೂರಿನಿಂದ ಹೊರಬರುವ ನಿರ್ಧಾರ ತೆಗೆದುಕೊಳ್ಳೋದೆಂದರೆ (ಅಮೆರಿಕಾ, ಆಸ್ಟ್ರೇಲಿಯಾ, ಯೂರೋಪ್ ಯಾವುದೇ ಆಗಲಿ) ನಮ್ಮ ಭವಿಷ್ಯದ ಮೇಲೆ ರಿಸ್ಕ್ ತೆಗೆದುಕೊಂಡ ಹಾಗೆಯೇ. [ನೀನ್ಯಾವೋನಯ್ಯ ಅಮೆರಿಕಾಕ್ಕೆ ಬರಬೇಡ ಅಂತ ಹೇಳೋಕೆ?]

ಶಿವಾಜಿ ಗೋಖಲೆ

***

ಡಬ್ಬಿಂಗ್ ಇಂದ ಕನ್ನಡ ಭಾಷಾ ಅಭಿಮಾನ ಹೆಚ್ಚಾಗುತ್ತೆ. ತಮಿಳು, ತೆಲುಗಿನಲ್ಲಿ ಸಿನಿಮಾ ನೋಡೋ ಬದಲು ನಮ್ಮ ಮಾತೃ ಭಾಷೆನಲ್ಲಿ ಸಿನಿಮಾ ನೋಡಬಹುದು. ಕನ್ನಡ, ಕರ್ನಾಟಕ ಅಂದರೆ ಬರಿ ಚಲನಚಿತ್ರ ಸಂಘದ ಆಸ್ತಿ ಅಲ್ಲ. ಇದು ಪ್ರತಿಯೊಬ್ಬ ಕನ್ನಡಿಗನ ಹಕ್ಕು. ಇಲ್ಲೇ ಯಾರ್ದೋ ಫ್ಯಾಮಿಲಿಗೋಸ್ಕರ ಅಥವಾ ನಿರ್ಮಾಕರಿಗೆ, ಕಾರ್ಮಿಕರಿಗೋಸ್ಕರ ಇಡೀ ರಾಜ್ಯದ ಜನತೆಗೆ ಮೋಸ ಆಗ್ತಿದೆ.

ಡಬ್ಬಿಂಗ್ ಬೇಡ ಅನ್ನೋರು, ನಾಯಕಿಯರು, ಗಾಯಕರು ಎಲ್ಲರನ್ನು ಬೇರೆ ರಾಜ್ಯದಿಂದ ಏಕೆ ಕರಿಸ್ತೀರಾ? ರಿಮೇಕ್ ಸಿನಿಮಾ ಯಾಕೆ ಮಾಡ್ತೀರಾ? ನೀವು ಬೀದಿ ಪಾಲಾಗ್ತೀರಾ ಅಂದ್ರೆ ಬೇರೆ ಕೆಲಸ ಹುಡುಕಿ ಬದುಕಿ. ಕನ್ನಡ ಸಿನಿಮಾ ರಂಗದಲ್ಲಿ ಅದು ಎಷ್ಟು ಜನ ಕೆಲಸ ಮಾಡ್ತಿದಾರೆ? ಅಬ್ಬಬ್ಬಾ ಅಂದ್ರೆ 10 ಲಕ್ಷದ ಒಳ್ಗಡೆನೆ. ಅದಕ್ಕೋಸ್ಕರ 5.9 ಕೋಟಿ ಜನರಿಗೆ ಡಬ್ಬಿಂಗ್ ವಿರೋಧ ಮಾಡ್ತೀರಾ? ನಮ್ಮಗೆ ನಮ್ಮ ಇಷ್ಟವಾದ ಮನರಂಜನೆ ಕಾರ್ಯಕ್ರಮನ ಕನ್ನಡದಲ್ಲಿ ನೋಡೋ ಹಕ್ಕು ಇದೆ. ಡಬ್ಬಿಂಗ್ ಬೇಕೇ ಬೇಕು. [ಡಬ್ಬಿಂಗ್ ವಿರುದ್ಧ ದನಿಯೆತ್ತಿದ ಜಗ್ಗೇಶ್, ವಾಟಾಳ್ ನಾಗರಾಜ್]

ಮಹೇಶ್

***

ಎಲ್ಲಿ ಹೋದರೂ ಸಾವ೯ಜನಿಕರ ತೆರಿಗೆ ಹಣ ತಾನೆ ಬೇಕಾಗಿರೋದು! ಒಂದು ಕೋಟಿ ಬಂಗಲೆ ಇಲ್ಲಾಂದರೆ ಜನಸೇವೆ ಮಾಡೋಕೆ ಆಗಲ್ವೇ? ಆ ಒಂದು ಕೋಟಿ ಹಣಾನ, ರಸ್ತೆ ಮಾಡೋಕೊ, ಗಿಡಮರ ಬೆಳೆಸೋಕೂ, ಕೆರೆಗಳ ಹೂಳು ತೆಗೆದು ಅಭಿವೃದ್ದಿ ಮಾಡೋಕೊ ಖಚು೯ ಮಾಡಿದರೆ ಜನಕ್ಕೆ ನೆಮ್ಮದಿ. ಸದ್ಯ ನಮ್ಮ(ಕನಾ೯ಟಕ) ರಾಜ್ಯದಲ್ಲಿ ಈ ಯೋಚನೆ ಬರದೇ ಇರೋದು ನಮ್ಮ ಪುಣ್ಯ! [ಸರಕಾರದ ಹಣದಲ್ಲಿ ತೆಲಂಗಾಣ ಶಾಸಕರಿಗೆ ಕೋಟಿ ವೆಚ್ಚದ ಗೃಹಕಚೇರಿ]

ದಶರಥ

***

ಇನ್ಫೋಸಿಸ್ ರೀತಿಯ ಕಂಪನಿಗಳು ಕಡಿಮೆ ಕೊಟೇಷನ್ ಕೊಟ್ಟು ಕಾಂಟ್ರಾಕ್ಟ್ ತೊಗೊಂಡು ಅಲ್ಲೇ ಹುಟ್ಟಿ ಬೆಳೆದ ಜನರಿಗೆ ಅಸಮಾಧಾನ ಉಂಟು ಮಾಡಿದ್ದಾರೆ. ಅದರ ಫಲ ನಾವು ಅನುಭವಿಸುವಂತಾಗಿದೆ. ಈ ಕಂಪನಿಗಳು ಅಲ್ಲಿ ಗಳಿಸಿದ ಮೇಲೆ ಅವರಿಗೂ ಸ್ವಲ್ಪ ತರಬೇತಿ ಕೊಡುವುದು ಒಳ್ಳೆಯದು. [ಅಮೆರಿಕಾ ಶೂಟೌಟ್: ಶ್ರೀನಿವಾಸ್ ಕುಚಿಭೋತ್ಲಾಗೆ ಅಂತಿಮ ವಿದಾಯ]

ರಾಜಾ ರಮೇಶ್

***

"ಗಂಡ ಸತ್ತಮೇಲೆ ಮುಂಡೆಗೆ ಬುದ್ದಿ ಬಂತು" ಅನ್ನೊ ಗಾದೆ ತರ ಇದೆ ಖಾದರ್ ಮಾತು. ಆದರೆ ಪ್ರಯೋಜನ ಏನು? ಗಂಡ ಸತ್ತಾಯಿತಲ್ಲ! ಖಾದರು, ಖದರ್ ಆಗಿ ಅಧಿಕಾರದ ಮದದಿಂದ, ಸಿದ್ದು ಕೃಪಾಕಟಾಕ್ಷದಿಂದ ಬಾಯಿಗೆ ಬಂದಂಗೆಲ್ಲಾ ಮಾತಾಡಿ, ಆಮೇಲೆ ಕಣ್ಣು ತೆರದವ್ನೆ. ಇಷ್ಟಾದರೂ ರಾಜಕೀಯ ಅಂತ ಹೇಳಿ ಜನರ ಮೇಲೆ ಗೂಬೆ ಕೂರ್ಸೋದು ಮಾತ್ರ ಮರೆತಿಲ್ಲ. ಹುಟ್ಟುಗುಣ ಸುಟ್ಟರೂ ಹೋಗಲ್ವಂತೆ! [ಚಪ್ಪಲಿಯಿಂದ ಹೊಡೆಯಬೇಕೆಂದಿದ್ದ ಸಚಿವ ಖಾದರ್ ಕ್ಷಮೆಯಾಚನೆ]

***

ಭಾರತ್ ತಿರುಗಿ ಬಿದ್ದರೆ ಅದನ್ನು ಸೋಲಿಸುವದು ಯಾವ ತಂದಡವರಿಂದಲೂ ಸಾಧ್ಯವಿಲ್ಲ. ಆಸ್ಟ್ರೇಲಿಯಾ ಉತ್ತಮ ತಂಡ .ಆದರೆ ಮುಂದಿನ ಟೆಸ್ಟ್ಗಳಲ್ಲಿ ಭಾರತದ ಸಾಮರ್ಥ್ಯ ನಿಮಗೆ ಗೊತ್ತಾಗಲಿದೆ. ಮುಂದಿನ ಸರಣಿಯಲ್ಲಿ KL ರಾಹುಲ್ ಮತ್ತು ಮುರಳಿ ವಿಜಯ್ ಉತ್ತಮವಾಗಿ ಆಡುವ ವಿಶ್ವಾಸ ನನಗಿದೆ. ಪ್ರತಿ ಪಂದ್ಯದಲ್ಲೂ ತಂಡವು ಕೊಹ್ಲಿಯನ್ನು ಅವಲಂಬಿಸಬಾರದು ಪ್ರತಿಯೊಬ್ಬರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಯಾವ ತಂಡವು ಭಾರತವನ್ನು ಸೋಲಿಸುವುದಿಲ್ಲ. ಇದು ನನ್ ಅನಿಸಿಕೆ.... [ಚಿತ್ರಗಳಲ್ಲಿ : ಬೆಂಗಳೂರಿಗೆ ಬಂದಿಳಿದ ಕೊಹ್ಲಿ ಹಾಗೂ ಸ್ಮಿತ್ ಪಡೆ]

ವಿಠಲ

English summary
Readers of Oneindia Kannada have expressed their views about Kansas Killing, Dubbing controversy, UT Khadar's irresposible statement, India Australia cricket series etc. Please send your comments, responses in Kannada only. Thank you.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more