ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾಗಮ ಯೋಜನೆ ತರದಿರಲಿ ಅಪಾಯ, ಮುಂದೂಡಿಕೆಯೇ ಉಪಾಯ!

By ದಿವ್ಯಶ್ರೀ, ಬೆಂಗಳೂರು
|
Google Oneindia Kannada News

ಇಂದು ರಾಜ್ಯದಲ್ಲಿ ಅಧಿಕವಾಗಿ ವಿರೋಧ ವ್ಯಕ್ತಪಡಿಸಿತ್ತಿರುವ ವಿಷಯ ವೆಂದರೆ ಅದು ವಿದ್ಯಾಗಮ ಯೋಜನೆ. ಇದಕ್ಕೆ ವಠಾರ ಶಾಲೆ ಎಂದು ಕೂಡ ಕರೆಯುತ್ತಾರೆ. ಶಿಕ್ಷಕರೇ ಸ್ವತಃ ಮಕ್ಕಳ ಬಳಿ ಹೋಗಿ ಪಾಠ ಕಲಿಸುವ ವಿಧಾನ ಇದು. ವಿದ್ಯಾಗಮ ಯೋಜನೆ ಕಲಿಕೆ ಉದ್ದೇಶದಿಂದ ನೋಡಿದರೆ ಸರಿ. ಆದರೆ ಜೀವದ ವಿಷಯ ಬಂದರೆ ಯಾವುದು ದೊಡ್ಡದಲ್ಲ.

ಜೀವ ಇದ್ದರೇನೆ ಜೀವನ ಮತ್ತು ವಿದ್ಯೆ ಎಲ್ಲವೂ, ಆದ್ದರಿಂದ ಈ ಯೋಜನೆಯನ್ನು ವಿರೋಧಿಸುವ ಸಂದರ್ಭ ಬಂದಿದೆ. ಸದ್ಯದ ಸ್ಥಿತಿಯಲ್ಲಿ ಕೊರೊನಾ ಸಾಂಕ್ರಾಮಿಕಕ್ಕೆ ಲಸಿಕೆ ಇನ್ನು ಲಭ್ಯ ವಾಗಿಲ್ಲ ಇಂತಹ ಸಮಯದಲ್ಲಿ ವಿದ್ಯಾಗಮ ಜಾರಿ ಮಾಡುವುದು ಸರಿಯಲ್ಲ. ಈ ಯೋಜನೆಗೆ ಪೋಷಕರೇ ಅತಿ ಹೆಚ್ಚು ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ, ಅಷ್ಟೇ ಅಲ್ಲದೆ ಮಕ್ಕಳು ಶಿಕ್ಷಕರು ಸೇರಿ ವಿರೋಧ ಮಾಡುತ್ತಿದ್ದಾರೆ.

ವಿಶೇಷ ಲೇಖನ: ಅಂಗೈನಲ್ಲಿ ಶಿಕ್ಷಣ ಎಂಬ ಚಾಲಾಕಿ ಚೆಲುವೆ..!ವಿಶೇಷ ಲೇಖನ: ಅಂಗೈನಲ್ಲಿ ಶಿಕ್ಷಣ ಎಂಬ ಚಾಲಾಕಿ ಚೆಲುವೆ..!

ಈಗಾಗಲೇ ಈ ಯೋಜನೆ ಹಲವೆಡೆ ಆರಂಭವಾಗಿದ್ದು ಇದಕ್ಕೆ ಶಿಕ್ಷಕರ ಪರವಾಗಿ ಸರ್ಕಾರವು ಕೊರೊನಾ ಪ್ಯಾಕೇಜ್ ನೀಡಲು ಘೋಷಣೆ ಮಾಡಬೇಕು, ಇದರಿಂದ ಒಂದು ಮಟ್ಟದಲ್ಲಿ ಶಿಕ್ಷಕರು ಸಮಾಧಾನದಿಂದ ಇರುತ್ತಾರೆ. ಇದು ಬರೀ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಅಪಾಯಕಾರಿ. ಲಸಿಕೆ ಲಭ್ಯವಾಗುವವರೆಗೂ ತಾತ್ಕಾಲಿಕವಾಗಿ ಈ ಯೋಜನೆಯನ್ನು ನಿಲ್ಲಸಬೇಕು.

Letter to editor: Postpone Vidyagama Scheme, till corona vaccine available

ಶೀಘ್ರ ವಿದ್ಯಾಗಮ ಕಾರ್ಯಕ್ರಮ ಮತ್ತೆ ಆರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್!ಶೀಘ್ರ ವಿದ್ಯಾಗಮ ಕಾರ್ಯಕ್ರಮ ಮತ್ತೆ ಆರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್!

ಇನ್ನೂ ಖಾಸಗಿ ವಲಯದ ಎರಡು ಲಕ್ಷಕ್ಕೂ ಹೆಚ್ಚು ಶಿಕ್ಷಕರು ವೇತನೆ ಸಿಗದೆ ಪರದಾಡುತ್ತಿದ್ದಾರೆ. ಇವರು ಸರ್ಕಾರಕ್ಕೆ ಆರ್ಥಿಕ ಅನುಕೂಲ ಸಹಾಯವನ್ನು ಕೋರಿದ್ದಾರೆ ಇದಕ್ಕೂ ಕೂಡ ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಬೇಕು. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸರ್ಕಾರವು ಸಾರ್ವಜನಿಕರ ಸುರಕ್ಷಿತ ದೃಷ್ಟಿಯಿಂದ ಈ ಯೋಜನೆ ಬಗ್ಗೆ ಹೆಚ್ಚು ಪರಿಶೀಲಿಸಿ ಇದಕ್ಕೆ ಸೂಕ್ತವಾದ ನಿರ್ಧಾರ ಕೈಗೊಳ್ಳಬೇಕು.

ದಿವ್ಯಶ್ರೀ. ವಿ
ಬೆಂಗಳೂರು

English summary
Letter to editor: Postpone Vidyagama Scheme, till corona vaccine available and announce Corona Package to Teachers demand public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X