ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ಹೇರಿಕೆ ಮೆಟ್ಟಿ ನಿಲ್ಲಲು ನಾಲಕ್ಕು ಸೂತ್ರಗಳು!

By ರಾಜನ್
|
Google Oneindia Kannada News

ಹಿಂದಿ ಅಥವಾ ಬೇರಾವುದೇ ಭಾಷೆಯ ಬಲವಂತದ ಹೇರಿಕೆ ಎಲ್ಲಾ ನಾನ್ಸೆನ್ಸ್. ನಮ್ಮ ಕನ್ನಡಿಗರು ಬಹಳ ಸರಳವಾಗಿ ಇದನ್ನು ಠುಸ್ ಮಾಡುವುದು ಹೇಗೆಂದರೆ:

1. ನಮ್ಮ ನಮ್ಮ ದಿನದ ವ್ಯವಹಾರಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಕನ್ನಡ ಬಳಕೆ ಮಾಡುವುದು.

'ಹಿಂದಿ ದಿವಸ್'ದಂದು ಕನ್ನಡ ಬಳಸುವ ಸಂಕಲ್ಪ ಮಾಡಿ'ಹಿಂದಿ ದಿವಸ್'ದಂದು ಕನ್ನಡ ಬಳಸುವ ಸಂಕಲ್ಪ ಮಾಡಿ

2. ನಮ್ಮ ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಸಾಧ್ಯವಾದಷ್ಟು ಸ್ವಾಭಾವಿಕವಾಗಿ ಕನ್ನಡದಲ್ಲೇ ಮಾತಾಡುವುದು, ಮೊದಲು ಅಸಹಜವೆನಿಸಬಹುದು ಅಭ್ಯಾಸವಿಲ್ಲದಿದ್ದರೆ, ಆದರೆ ಒಂದೆರಡು ದಿನಗಳಲ್ಲಿ ಅಭ್ಯಾಸವಾಗುತ್ತೆ.

Letter : No need to worry about Hindi imposition

3. ಹೊರಗಿನವರೊಂದಿಗೆ, ಉದಾಹರಣೆಗೆ, ಮನೆ ಕೆಲಸದವರು, ಮನೆ ಮುಂದೆ ಬರುವ ವ್ಯಾಪಾರಿಗಳು, ಅಂಗಡಿಯವರು ಇತ್ಯಾದಿ, ಮಾತ್ರ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸುವುದು, ದುಡ್ಡು ಕೊಡುವವರು ನಾವಾಗಿರುವುದರಿಂದ ಇಲ್ಲಿ ಸಂಪೂರ್ಣವಾಗಿ ನಮ್ಮಿಷ್ಟದ ಪ್ರಕಾರ ನಡೆಯಲೇಬೇಕು. ಇಲ್ಲದಿದ್ದರೆ ಸಿಂಪಲ್ ಆಗಿ ಬೇರೆಯವರ ಜೊತೆ ವ್ಯವಹಾರ ಮಾಡಿ.

ಹಿಂದಿ ಹೇರಿಕೆ ಹೀಗೇ ಮುಂದುವರಿದರೆ, ಕನ್ನಡಿಗರ ಮುಂದಿನ ದಾರಿ?ಹಿಂದಿ ಹೇರಿಕೆ ಹೀಗೇ ಮುಂದುವರಿದರೆ, ಕನ್ನಡಿಗರ ಮುಂದಿನ ದಾರಿ?

4. ಸಾಧ್ಯವಾದಷ್ಟು ಪರಭಾಷೆಯ ಚಿತ್ರಗಳನ್ನು ನೋಡಬೇಡಿ. ನಮ್ಮ ಕನ್ನಡಿಗರ ಒಂದು ಅತಿದೊಡ್ಡ ದೌರ್ಬಲ್ಯ ಎಂದರೆ "ಕಲೆಗೆ ಭಾಷೆಯಿಲ್ಲ" ಎಂದು ಗಿಣಿಯಂತೆ ಹೇಳಿ ಸಿಕ್ಕ ಸಿಕ್ಕದ್ದನ್ನೆಲ್ಲ ನೋಡೋದು. ಕಲೆಗೆ ಭಾಷೆ ಇದೆ ಸ್ವಾಮಿ. ಶ್ರವಣ ಮಾಧ್ಯಮಕ್ಕೆ ನಮ್ಮ ಭಾಷೆಯಿದ್ದರೆ ಉತ್ತಮ, ಎಲ್ಲ ತಮಿಳರೂ, ತೆಲುಗರೂ, ಮಲಯಾಳಿಗಳೂ ನಮ್ಮ ಭೋಳೆ ಕನ್ನಡಿಗರಂತೆ "ಕಲೆಗೆ ಭಾಷೆಯಿಲ್ಲ" ಎಂದು ನಂಬಿದ್ದರೆ ಅಲ್ಲೂ ಕೂಡ ಇಷ್ಟೊತ್ತಿಗೆ ನಮ್ಮ ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯಿರಬೇಕಿತ್ತು! ಆದರೆ ಅವರಿಗೆ ಕಾಮನ್ ಸೆನ್ಸ್ ಇರುವುದರಿಂದ ಅಲ್ಲಿ ನೂರಕ್ಕೆ 90ರಷ್ಟು ಅವರ ಭಾಷೆಯೇ ಇರೋದು.

ಮೊದಲಿಗೆ ಬೇಕಾಗಿರುವುದು ನಮ್ಮ ಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನ. ಕನ್ನಡ ನಮ್ಮ ಹೆಮ್ಮೆ ಮತ್ತು ಹೆಗ್ಗುರುತು...

English summary
Do we really need to worry about Hindi imposition on Kannadigas in Karnataka? Not really says Rajan. He says, we should speak in Kannada with everyone including house maids, shop keepers and watch only Kannada movies. Is it not possible?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X