ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಹ್ಮಣರ ಮತ ಯಾರಿಗೆ ಎಂಬ ಚರ್ಚೆಗೆ ಭರ್ಜರಿ ಪ್ರತಿಕ್ರಿಯೆ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಯಾವ ರಾಜಕೀಯ ಪಕ್ಷ ಬ್ರಾಹ್ಮಣ ಸಮುದಾಯಕ್ಕಾಗಿ ಯೋಜನೆಗಳನ್ನು ರೂಪಿಸುತ್ತದೋ ಆ ಪಕ್ಷಕ್ಕೆ ಆ ಸಮುದಾಯದ ಮತ ಹಾಕುವ ಬಗ್ಗೆ ಅನಿಲ್ ಎಂಬುವವರು ಒನ್ಇಂಡಿಯಾ ಕನ್ನಡದಲ್ಲಿ ಲೇಖನವೊಂದನ್ನು ಬರೆದಿದ್ದರು.

ಬ್ರಾಹ್ಮಣ ಹೆಣ್ಣುಮಕ್ಕಳು ಅದೇ ಸಮುದಾಯದ ಗಂಡು ಮಕ್ಕಳನ್ನು ಮದುವೆಯಾದರೆ ಪ್ರೋತ್ಸಾಹ ಧನ, ಮುಜರಾಯಿ ಇಲಾಖೆ ದೇವಸ್ಥಾನದಲ್ಲಿ ಕೆಲಸ ಮಾಡುವ ಬ್ರಾಹ್ಮಣ ಅರ್ಚಕ ಬದುಕಿಗೆ ಅನುಕೂಲ ಆಗುವಷ್ಟು ವ್ಯವಸ್ಥೆ, ಬ್ರಾಹ್ಮಣ ಯುವ ಜನತೆಗೆ ವ್ಯಾಪಾರ ಮಾಡಲು ಬಡ್ಡಿರಹಿತ ಸಾಲ, ಬ್ರಾಹ್ಮಣರ ಜಾತಿ ನಿಂದನೆ ಮಾಡುವುದರ ವಿರುದ್ಧ ಕಠಿಣ ಕಾನೂನು ಹಾಗೂ ಸರಕಾರಿ ಶಾಲೆ-ಕಾಲೇಜುಗಳಲ್ಲಿ ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ಲೇಖನ ಇತ್ತು.

ಬ್ರಾಹ್ಮಣರ ಈ ಬೇಡಿಕೆ ಈಡೇರಿಸುವವರಿಗೆ ಚುನಾವಣೆಯಲ್ಲಿ ಮತಬ್ರಾಹ್ಮಣರ ಈ ಬೇಡಿಕೆ ಈಡೇರಿಸುವವರಿಗೆ ಚುನಾವಣೆಯಲ್ಲಿ ಮತ

ಆ ಲೇಖನಕ್ಕೆ ಹಲವು ಓದುಗರು ಪ್ರತಿಕ್ರಿಯೆ ನೀಡಿದ್ದಾರೆ. ಆ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸಲಾಗುತ್ತದೆ. ಇಲ್ಲಿನ ಅಭಿಪ್ರಾಯಕ್ಕೆ ಪರ ಹಾಗೂ ವಿರುದ್ಧವಾದ ದೃಷ್ಟಿಕೋನವನ್ನು ನೀವು ಕೂಡ ದಾಖಲಿಸಬಹುದು. ಈ ಚರ್ಚೆಯನ್ನು ಮುಂದುವರಿಸಬಹುದು. ಇಲ್ಲಿನ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ದಾಖಲಿಸಿ.

ವಿಜಯಕುಮಾರ್

ವಿಜಯಕುಮಾರ್

ಬ್ರಾಹ್ಮಣರು ಬಡವರು ಕಡಿಮೆ, ಆದರೆ ಭಿಕಾರಿಗಳಲ್ಲ, ಕೂಲಿ ಮಾಡುವುದಿಲ್ಲ, ರೈತರಲ್ಲ (ಮಂಗಳೂರು ಸ್ವಲ್ಪ ಬಿಟ್ಟು ), ವಿದ್ಯಾವಂತರು ಜಾಸ್ತಿ. ಸಮಾಜದಲ್ಲಿ ಎತ್ತರದಲ್ಲಿದ್ದಾರೆ. ಜಾಸ್ತಿ ಉನ್ನತ ಅಧಿಕಾರಿಗಳು ಇರುವುದರಲ್ಲಿ ಇವರೇ. ಸಿನಿಮಾ ರಂಗದಲ್ಲಿ ಇವರೇ ಜಾಸ್ತಿ. ಸಂಗೀತಗಾರರು, ಸಾಹಿತಿಗಳು ಇವರೇ ಜಾಸ್ತಿ. ಅಂದ ಮೇಲೆ ಇವರಿಗೆ ಏಕೆ ಮೇಲೆ ಹೇಳಿರುವ ಅಷ್ಟೊಂದು ಬೇಡಿಕೆಗಳು? ಈ ಲೇಖಕನಿಗೆ ಅತಿ ಜಾತಿ ವ್ಯಾಮೋಹ ಅಂತ ಕಾಣುತ್ತದೆ.

ಜಿತನ್
ಹ ಹ ಹ ನೂರರಲ್ಲಿ ಹತ್ತೋ ಹದಿನೈದೋ ಶ್ರೀಮಂತರು ಇರಬಹುದು. ಉಳಿದವರ ಪಾಡು ಯಾರೂ ಕೇಳೋರಿಲ್ಲ. ಬಟ್ಟೆ, ತುತ್ತು ಅನ್ನಕ್ಕೂ ಯಾರೋ ಮಾಡುವ ದಾನ- ದಕ್ಷಿಣೆ ಅವಲಂಬಿಸಬೇಕು. ಉನ್ನತ ವಿದ್ಯೆ ಕನಸಿನ ಮಾತು. ಇನ್ನು ಎಜುಕೇಶನ್ ಸರ್ಟಿಫಿಕೇಟ್ ಮೇಲೆ ಕೆಲಸ ಸಿಗುತ್ತದೆ. ಅರ್ಹತೆಯ ಮೇಲಲ್ಲ. ಸ್ವಂತ ಬಿಸಿನೆಸ್ ಗೆ ಸಾಲವೂ ಸಿಗುವುದಿಲ್ಲ. ಏನೂ ಭದ್ರತೆ ಇಲ್ಲದೆ ಸಂಸಾರವೂ ನಡೆಯೋದಿಲ್ಲ. ಮುಂದೊಂದು ದಿನ ಹೀಗೊಂದು ಜನಾಂಗ ಇತ್ತು ಎನ್ನುವ ದಿನವೂ ಬರಬಹುದು.

ಪ್ರಮೋದ್
ನಿಮಗೆ ಯಾರು ಹೇಳಿದ್ದು ಬ್ರಾಹ್ಮಣರಲ್ಲಿ ಬಡವರು ಕಡಿಮೆ ಅಂತ? ಎಲ್ಲೋ ಸ್ವಲ್ಪ ಜನರನ್ನು ನೋಡಿ ಹೀಗೆ ಹೇಳಿದರೆ ಹೇಗೆ? ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಹೋಗಿ ನೋಡಿ, ನಿಮಗೆ ಗೊತ್ತಾಗುತ್ತದೆ ಬ್ರಾಹ್ಮಣರು ಎಂಥ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು.

ಶಂಕರ

ಶಂಕರ

ತ್ರಿಮತಸ್ಥ ಬ್ರಾಹ್ಮಣರು ಮೊದಲು ಒಂದಾಗಬೇಕು. ತಾನು ಮೇಲು, ಇನ್ನೊಬ್ಬರು ಕೀಳು ಅನ್ನೋ ಮನಸ್ಥಿತಿ ಹೋಗಬೇಕು. ಎಲ್ಲರನ್ನೂ ಸಮನಾಗಿ ಕಾಣಬೇಕು. ಉಡುಪಿ, ಶೃಂಗೇರಿ ಮುಂತಾದ ಮಠಗಳು ಮುತುವರ್ಜಿ ವಹಿಸಬೇಕು.

ಮುರಳಿ
ನಮ್ಮನ್ನು ಕಡೆಗಣಿಸುತ್ತಿರುವ ಎಲ್ಲ ಪಕ್ಷಗಳಿಗೂ ಧಿಕ್ಕಾರವಿರಲಿ.

ರಘು
ಸರ್, ಎಕ್ಸಲೆಂಟ್. ನನ್ನ ಬೆಂಬಲ ನಿಮಗೆ. ಬ್ರಾಹ್ಮಣರಲ್ಲಿ ಎಲ್ಲರೂ ಶ್ರೀಮಂತರಿಲ್ಲ.

ಮುರಳಿ
ಹೌದು, ಇಲ್ಲಿ ಹೇಳಿರುವುದೆಲ್ಲ ದಿಟ. ಈಗ ಬ್ರಾಹ್ಮಣರು ಅಲ್ಪಸಂಖ್ಯಾತರಾಗಿದ್ದಾರೆ. ಮಿಕ್ಕ ಎಲ್ಲ ಜಾತಿಯವರು ಸರಕಾರದ ಸೌಲಭ್ಯಗಳನ್ನು ಪಡೆದು ಸುಖವಾಗಿದ್ದಾರೆ. ಹಾಗಾಗಿ ಎಲ್ಲ ಪಕ್ಷಗಳಿಗೂ ನನ್ನ ಧಿಕ್ಕಾರವಿರಲಿ.

ಭೀಮಾಶಂಕರ

ಭೀಮಾಶಂಕರ

ಹೌದು ಸರ ಇನ್ನು ಮುಂದೆ ಹೋರಾಟ ಮಾಡೋಣ. ಜೈ ಹಿಂದ್, ಜೈ ಕರ್ನಾಟಕ.

ಕೃಷ್ಣ
ಬ್ರಾಹ್ಮಣರು ತುರ್ತಾಗಿ ಒಂದು ಸಾಮಾಜಿಕ ವೇದಿಕೆಯನ್ನು ಕಟ್ಟಬೇಕಾಗಿದೆ. ಧಾರ್ಮಿಕ ನೇತಾರರು ಸಾಮಾಜಿಕ ಸಮಸ್ಯೆಗಳಿಗೆ ಯಾವುದೇ ಥರದಲ್ಲಿ ಸ್ಪಂದಿಸುತ್ತಿಲ್ಲ. ಪ್ರಾಯಶಃ ಅದು ಒಳ್ಳೆಯದೇ. ಆದರೆ ನಮ್ಮ ಸಮಾಜ ಉಳಿಯಬೇಕಾದರೆ ಒಂದು ಸಾಮಾಜಿಕ-ರಾಜಕೀಯ ಉದ್ದೇಶಿತ ವೇದಿಕೆ ಬೇಕಾಗಿದೆ. ಸ್ಥಿತಿವಂತ ಬ್ರಾಹ್ಮಣರು ತಮ್ಮ ಸಮಯ, ಪ್ರಭಾವ, ಜ್ಞಾನ ಹಾಗೂ ಆರ್ಥಿಕ ಸಂಪತ್ತನ್ನು ಸಮಾಜಮುಖಿಯಾಗಿ ವ್ಯಯಿಸುವತ್ತ ಗಮನ ಹರಿಸಬೇಕು ಹಾಗೂ ಅದಕ್ಕೆ ಅನುಕೂಲ ಮಾಡುವಂಥ ವೇದಿಕೆ ಬೇಕಾಗಿದೆ. ಇನ್ನು ಧಾರ್ಮಿಕ ನೇತಾರರು ಹಾಗೂ ಪಂಡಿತರು ಒಬ್ಬರನ್ನೊಬ್ಬರನ್ನು ದೂಷಿಸುತ್ತಾ, ದ್ವೇಷ- ಅಸೂಯೆ ಹರಡುವ ಬದಲು, ಪರಸ್ಪರ ದೋಷಾರೋಪ ಮಾಡುವ ಬದಲು, ಸಮಸ್ಯೆಗಳನ್ನು ಪರಿಹರಿಸುವ ಉದಾರ ಮನಸ್ಸನ್ನು ಬೆಳೆಸಿಕೊಳ್ಳದೆ ಹೋದರೆ ಸಮಾಜಕ್ಕೆ ಕಂಟಕ ತಪ್ಪಿದ್ದಲ್ಲ.

ಮಧುಸೂದನ್

ಮಧುಸೂದನ್

ಬ್ರಾಹ್ಮಣರ ಪರವಾಗಿ ಬ್ರಾಹ್ಮಣರು ಮಾತ್ರ ಮಾತಾಡಬೇಕಷ್ಟೆ. ಯಾಕೆಂದರೆ ಇವರು ವೋಟ್ ಬ್ಯಾಂಕ್ ಅಲ್ಲ, ಮೊದಲು ಒಗ್ಗಟ್ಟು, ನಂತರ ಆರ್ಥಿಕವಾಗಿ ಸಬಲರಾದವರು ವಿದ್ಯಾರ್ಜನೆಗೆ ಸಹಾಯ ಮಾಡಿದರೆ ಅಷ್ಟೇ ಸಾಕು. ರಾಜಕಾರಣಿಗಳ ಬಳಿ ಭಿಕ್ಷೆ ಯಾಕೆ ಬೇಡಬೇಕು? ಆದರೆ ನಾವು ಯಾರಿಗೆ ಆದರೂ ಓಟು ಮಾಡುವ ಅಗತ್ಯ ಇದೆಯೇ?

ವಿಜಯ್
ಕೊನೆ ಕಾಮೆಂಟ್ ಚೆನ್ನಾಗಿದೆ. ಚಿಕ್ಕ ವಯಸ್ಸಿನಲ್ಲೇ ನಾವು ಮಕ್ಕಳಿಗೆ ಜಾತಿಯೇಟು ತೋರಸುತ್ತಾ ಇದ್ದೇವೆ. ಇದು ಮಕ್ಕಳಲ್ಲಿ ಬೆಳೆದು ಹೆಮ್ಮರ ಆಗುತ್ತದೆ. ಕೊನೆ ಪಕ್ಷ ಸರಕಾರ ಶಾಲೆಗಳಲ್ಲಿ ಭೇದ ಭಾವ ಮಾಡಬಾರದು. ನಾವು ಭಾರತೀಯರು. ಜೈ ಹಿಂದ್, ಜೈ ಹಿಂದ್, ಜೈ ಹಿಂದ್.

English summary
Karnataka assembly elections 2018: Brahmin community various demand for political parties article published in Oneindia Kannada. After that, readers responded to that article. Here are the reader comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X