ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ವೇದಿಕೆಯಿಂದ #NoHindiSlavery ಟ್ವೀಟ್ ಅಭಿಯಾನ

By ದಿವ್ಯಶ್ರೀ.ವಿ, ಬೆಂಗಳೂರು
|
Google Oneindia Kannada News

ಕರ್ನಾಟಕ ರಾಜ್ಯದಲ್ಲಿ ಕನ್ನಡವನ್ನು ಹೊರತುಪಡಿಸಿ ಬೇರೆ ಭಾಷೆಯ ಹಾವಳಿಯೇ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಸಿಆರ್ಪಿಎಫ್ ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಉಪಯೋಗಿಸದೆ ಕೇವಲ ಹಿಂದಿಯಲ್ಲಿ ನಿರೂಪಣೆ ಮಾಡಿ ಮತ್ತು ಹಿಂದಿ ಭಾಷೆಯಲ್ಲಿ ಬ್ಯಾನರುಗಳನ್ನು ಬಳಸಿದ್ದಾರೆ ಕನ್ನಡದ ಒಂದಕ್ಷರವೂ ಎಲ್ಲಿಯೂ ಇಲ್ಲ.

ಇದರಿಂದ ನಮ್ಮ ರಾಜ್ಯದಲ್ಲಿ ನಮ್ಮ ಭಾಷೆಯ ಕೊರತೆ ಕಾಣುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಎಲ್ಲರೂ ಉಪಯೋಗಿಸಬೇಕು ಅದು ಕಡ್ಡಾಯವಾಗಬೇಕು ಎಂದು ಅರ್ಥವಾಗದೆ ಇರುವುದು ಮೂರ್ಖತನದ ಪರಮಾವಧಿ. ನಮ್ಮ ನಾಡಲ್ಲಿ ಇತರ ಭಾಷೆ ಬಿಟ್ಟು ಕನ್ನಡ ಭಾಷೆ ಬಳಸಬೇಕು ಎಂಬ ಆದೇಶವನ್ನು ಸರ್ಕಾರ ತರಬೇಕು. ಈ ಭದ್ರಾವತಿಯ ಸಿಆರ್ಪಿಎಫ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಸಚಿವರು ,ಸದಸ್ಯರು ,ಭಾಗವಹಿಸಿದ್ದರು ಕನ್ನಡ ಭಾಷೆ ಯಾಕೆ ಉಪಯೋಗಿಸಿಲ್ಲ ಎಂದು ಯಾರೊಬ್ಬರೂ ಪ್ರಶ್ನೆ ಮಾಡಿಲ್ಲ ವೆಂಬುದು ಅತ್ಯಂತ ಬೇಸರದ ವಿಷಯ.

Karave Tweet Campaign against Hindi Imposition Amit Shah RAF centre event Bhadravati

ಮೊದಲು ನಮ್ಮ ಸರ್ಕಾರಕ್ಕೆ ನಮ್ಮ ಭಾಷೆಯ ಮೇಲೆ ಗೌರವ ಪ್ರೀತಿ ಹೆಮ್ಮೆ ಬರಬೇಕು ಆಗ ಮಾತ್ರ ಕನ್ನಡಿಗರ ಮೇಲೆ ಮತ್ತು ಕನ್ನಡ ಭಾಷೆಯ ಮೇಲೆ ಹಿಂದಿಯ ದೌರ್ಜನ್ಯವನ್ನು ತಡೆಯಲಾಗುತ್ತದೆ. ಈ ದೌರ್ಜನ್ಯವನ್ನು ತಡೆಯಲು ನಾವೆಲ್ಲ ಕನ್ನಡಿಗರು ಒಂದಾಗಬೇಕು, ನಮ್ಮ ಭಾಷೆ ನಮ್ಮ ನಾಡನ್ನು ನಾವೆಂದಿಗೂ ಕೈಬಿಡಬಾರದು ನಾವು ಹಿಂದಿ ಗುಲಾಮರಾಗಬಾರದು ಇವತ್ತು ನಾವು ಈ ಹಿಂದಿ ಭಾಷೆಯನ್ನು ತಡೆಯದಿದ್ದರೆ ಮುಂದೊಂದು ದಿನ ನಮ್ಮ ನಾಡಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಹಿಂದಿ ಆಡಳಿತ ಮತ್ತು ಭಾಷೆ ಹೆಚ್ಚಾಗಿರುತ್ತದೆ ಇದಕ್ಕೆ ನಾವು ಆಸ್ಪದವನ್ನು ಕೊಡಬಾರದು ಆದ್ದರಿಂದ ಇಂದು ಕರ್ನಾಟಕ ರಕ್ಷಣಾ ವೇದಿಕೆಯು ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನ ಹಮ್ಮಿ ಕಂಡಿದ್ದಾರೆ.

ನಾಡಿನ ಎಲ್ಲಾ ಕನ್ನಡಿಗರು ಇದಕ್ಕೆ ಕೈಜೋಡಿಸಿ ಹಿಂದಿ ಗುಲಾಮಗಿರಿಬೇಡ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿ ಕನ್ನಡವನ್ನು ಉಳಿಸುವುದಕ್ಕೆ ಕೈಜೋಡಿಸಿ. ಜೈ ಕರ್ನಾಟಕ ಜೈ ಭುವನೇಶ್ವರಿ‌

English summary
Karnataka Rakshana Vedike Objects Hindi Imposition during Amit Shah visit and Bhumi Pooja of RAF centre event at Bhadravat, Shivamogga. Karave is conducting #NoHindiSlavery tweet campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X