ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡ್ಲೇಕಾಯಿ ಪರಿಷೆ ಫೇಸ್ ಬುಕ್ ಪುಟದಲ್ಲಿ ಕನ್ನಡ ಗಂಧವಿಲ್ಲ

By ಅನ್ನದಾನೇಶ ಶಿ ಸಂಕದಾಳ
|
Google Oneindia Kannada News

ಪ್ರತೀ ವರ್ಷ ಜರಗುವಂತೆ ಈ ವರುಷವೂ "ಕಳ್ಳೆಕಾಯಿ ಪರ್ಸೆ/ಪರಿಶೆ" ನಡೆಯುತ್ತಿದೆ. ಪರಿಶೆ ನಡೆಯುವ ಜಾಗ ಹಳೆ ಬೆಂಗಳೂರೆಂದೇ ಕರೆಯಲ್ಪಡುವ, ಕನ್ನಡಿಗರೆ ಹೆಚ್ಚಿನ ಸಂಖೆಯಲ್ಲಿರುವ ಬಸವನಗುಡಿಯಲ್ಲಿ. ಹೆಸರನ್ನು ಮೊದಲು ಮಾಡಿ, ನಮ್ಮ ಸೊಗಡನ್ನು ಬಿಂಬಿಸೋ ಪರಿಶೆಯ ಹಿಂದೆ ದೊಡ್ಡ ಇತಿಹಾಸವೇ ಇದೆ. ಪರಿಶೆ ನಡೆಯೋ ಸಮಯದಲ್ಲಿ ಸಾಕಷ್ಟು ಜನ ಸೇರಿರುತ್ತಾರೆ. ಒಂದು ರೀತಿ ಜಾತ್ರೆಯ ವಾತಾವರಣವನ್ನೇ ನಾವು ಬಸವನಗುಡಿಯಲ್ಲಿ ನೋಡಬಹುದು.

ಇಂತ ಪರಿಶೆಯ ಬಗ್ಗೆ ಜನರಿಗೆ ಮಾಹಿತಿ ನೀಡಲು ಫೇಸ್ಬುಕ್ ಪುಟವೊಂದನ್ನು ಮಾಡಲಾಗಿದೆ. ಪುಟದ ಕೊಂಡಿ ಇಲ್ಲಿದೆ ಕ್ಲಿಕ್ ಮಾಡಿ
ಪರಿಶೆ ಬಗ್ಗೆ ಹೇಳುತ್ತಾ ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು, ಹೆಚ್ಚು ಜನರನ್ನು ಸೆಳೆಯಲು ಈ ಪುಟದಲ್ಲಿ ಮಾಹಿತಿ ಹಾಕುತ್ತಿರುತ್ತಾರೆ. ನಿಜಕ್ಕೂ ಮೆಚ್ಚುವಂತ ಕೆಲಸ. ಆದರೆ ಈ ಪುಟದಲ್ಲಿ ನಮ್ಮತನದ ಸೊಗಡು ಕಾಣಿಸುವುದಿಲ್ಲ. ಫೇಸ್ಬುಕ್ ಪುಟದಿಂದ ಹಿಡಿದು, ಎಲ್ಲ ಮಾಹಿತಿಯನ್ನೂ ಇಂಗ್ಲೀಷಿನಲ್ಲೇ ನೀಡುತ್ತಿದ್ದಾರೆ.

ಕನ್ನಡ ಹುಡುಕಿದರೂ ಸಿಗುವುದಿಲ್ಲ. ಈ ಪುಟವನ್ನು ಸ್ಥಳೀಯ ಶಾಸಕ ರವಿ ಸುಬ್ರಮಣ್ಯ ಅವರು ಅಣತಿಯಂತೆ ರೂಪಿಸಲಾಗಿದೆ ಎಂದು ಕೂಡಾ ಹಾಕಿಕೊಳ್ಳಲಾಗಿದೆ.

ಈ ಪುಟ ನಿರ್ಮಿಸಿದವರು ಕನ್ನಡದವರು ಫೇಸ್ಬುಕ್ ಬಳಸುವುದಿಲ್ಲ ಅಂತಾ ಭಾವಿಸಿದ್ದಾರೆನೋ ಅಥವಾ ಕನ್ನಡದವರಿಗೆ ಈ ಸಡಗರದ ಬಗ್ಗೆ ಅಂತರ್ಜಾಲದ ಮೂಲಕ ತಿಳಿಸಬಾರದು ಎಂಬ ಪ್ರತಿಜ್ಞೆ ಮಾಡಿದಾರೆನೋ ಅಂತ ಕನ್ನಡಿಗರಿಗೆ ಅನಿಸದೆ ಇರದು.

ಇಂತ ಸಂಭ್ರಮಗಳಲ್ಲಿ ಹೆಚ್ಚಿನ ಕನ್ನಡಿಗರು ಪಾಲ್ಗೊಂಡರೆ ಜಾತ್ರೆಗೂ ಮೆರುಗು ತಾನೇ? ನಮ್ಮತನ ಬಿಂಬಿಸುವ ಈ ಪರಿಶೆಗೆ ನಮ್ಮ ಜನರ ಪಾಲ್ಗೊಳ್ಳುವಿಕೆಗೆ ಕರೆ ಕೊಡದಿದ್ದರೆ ಹೇಗೆ? ಕನ್ನಡದಲ್ಲಿ ಮಾಹಿತಿ ನೀಡದೆ ಇರುವುದು ಕೂಡ, ಕನ್ನಡಿಗರನ್ನು ಹೊರಗಿಟ್ಟು ಕನ್ನಡೇತರರನ್ನುಮಾತ್ರ ಓಲೈಸುವ ಪರಿ ಅಲ್ಲವೇ ಅನ್ನುವ ಅನುಮಾನವೂ ಸುಳಿಯದೇ ಇರದು. ಹೀಗೆ ಕನ್ನಡವನ್ನು ಕಡೆಗಣಿಸುತ್ತಾ, ಕನ್ನಡವನ್ನು ಕನ್ನಡಿಗರೇ ನುಂಗಿಬಿಟ್ಟರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕನ್ನಡದ ಹರವು ವಿಸ್ತಾರಗೊಳ್ಳಲು ಸಾಧ್ಯವೇ? ಕನ್ನಡಿಗರೇ ಕನ್ನಡಿಗರನ್ನು ಕಡೆಗಣಿಸುವ ಇಂತ ತಪ್ಪು ನಡೆಗಳನ್ನು ತಿದ್ದಲು ಎಲ್ಲರೂ ಮೊದಲು ಮುಂದಾಗಬೇಕು.

ನನ್ನಿ,
ಅನ್ನದಾನೇಶ ಶಿ ಸಂಕದಾಳ
ಬೆಂಗಳೂರು

English summary
Kadalekai Parishe is an annual groundnut fair held in Basavanagudi.A page initiated by MLA Ravi Subramanya (MLA Basavanagudi) says it has been started to create awareness about this traditional event among social media users. Facebook page doesn't have an odour of Kananda culture and custom reports Citizen Journalist Annadanesh Sankadal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X