ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಆತ್ಮ ಅಂತರ್ಪಿಶಾಚಿಯಾಗಿ ಅಲೆದಾಡತ್ತೆ!

By ಸಂಪಿಗೆ ಶ್ರೀನಿವಾಸ, ಬೆಂಗಳೂರು
|
Google Oneindia Kannada News

ಮೇಲುಕೋಟೆಯ ಶ್ರೀವೈಷ್ಣವ ಕುಟುಂಬದಲ್ಲಿ ಜನಿಸಿದವರು ಜಯಲಲಿತಾ. ಮೊದಲಿಗೆ ತಮಿಳು ಚಿತ್ರರಂಗದಲ್ಲಿ ಪ್ರಖ್ಯಾತ ನಟಿಯಾಗಿ ನಂತರ ಪಕ್ಕದ ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರ ಜನಮನ್ನಣೆಯನ್ನೂ ಗಳಿಸಿದರು.

ಜೊತೆಗೆ ತಾನು ಹುಟ್ಟಿದ ನೆಲದ ಋಣ ತೀರಿಸುವ ಬದಲು ತನ್ನ ಜನ್ಮ ಭೂಮಿಯ ಜನರಿಗೆ(ಕನ್ನಡಿಗರಿಗೆ) ಕಾವೇರಿ ವಿಷಯದಲ್ಲಿ ಕೊಡಬಾರದ ತೊಂದರೆ, ಅವಮಾನ ಕೊಟ್ಟು ತನ್ನ ಕರ್ಮಭೂಮಿಯ ಜನರ ಋಣ ತೀರಿಸಿ ಅಲ್ಲಿನ ಜನರಿಗೆ ಅಮ್ಮನಾದರು. [ಜಯಲಲಿತಾ ಪಾರ್ಥಿವ ಶರೀರ ಸುಡದೆ, ಹೂಳಿದ್ದು ಏಕೆ?]

It is pity that Jayalalithaa was buried though she is brahmin

ಅನೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲು ವಾಸ ಕೂಡ ಅನುಭವಿಸಿ ಬಿಡುಗಡೆ ಹೊಂದಿದರು. 75 ದಿನಗಳು ಆಸ್ಪತ್ರೆಯಲ್ಲಿ ನರಕ ಅನುಭವಿಸಿ ಕೊನೆಗೆ ಇಹಲೋಕ ತ್ಯಜಿಸಿದರು. ಆದರೆ ಕೊನೆಯಲ್ಲಿ ಮೇಲುಕೋಟೆಯ ಶ್ರೀವೈಷ್ಣವ ಬ್ರಾಹ್ಮಣ ಹೆಣ್ಣು ಮಗಳಿಗೆ ನಡೆದ ಅಂತಿಮ ಸಂಸ್ಕಾರ ನೋಡಿ ತುಂಬಾ ದುಃಖವಾಯಿತು.

ಬ್ರಾಹ್ಮಣ ಸಂಪ್ರದಾಯದಂತೆ ಜಯಲಲಿತಾರ ಕಳೇಬರಕ್ಕೆ ಅಂತಿಮ ವಿಧಿವಿಧಾನ ನಡೆದು ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಾರೆ ಎಂದು ಅಂದುಕೊಂಡಿದ್ದ ಅನೇಕ ಶ್ರೀವೈಷ್ಣವರಿಗೆ, ಅವರ ದೇಹವನ್ನು ದ್ರಾವಿಡ ಅಥವಾ ಕ್ರೈಸ್ತ ಸಂಪ್ರದಾಯದಂತೆ ಪೆಟ್ಟಿಗೆಯಲ್ಲಿ ಮುಚ್ಚಿ, ಮಣ್ಣಿನಲ್ಲಿ ಸಮಾಧಿ ಮಾಡಿದ್ದು ನೋಡಿ ನಿಜಕ್ಕೂ ತುಂಬಾ ನೋವಾಗಿದೆ. [ಬೈಗುಳಕ್ಕೆ ಬ್ರಾಹ್ಮಣ ಮಾತ್ರ ಗುರಿ, ಇದ್ಯಾವ ನ್ಯಾಯರಿ?]

ವೈದಿಕ ಸಂಪ್ರದಾಯದಂತೆ ದೇಹಕ್ಕೆ ಸರಿಯಾದ ಅಂತ್ಯ ಸಂಸ್ಕಾರ ನಡೆಸದಿದ್ದರೆ ಆ ಜೀವಾತ್ಮ ಪ್ರೇತಾತ್ಮವಾಗಿ ಅಲ್ಲೇ ವಿಲವಿಲ ಒದ್ದಾಡುತ್ತ ಅಂತರ್ಪಿಶಾಚಿಯಾಗಿ ಅಲೆದಾಡುತ್ತೆ ಎನ್ನುವುದು ವೈದಿಕ ಬ್ರಾಹ್ಮಣ ಸಂಪ್ರದಾಯಸ್ಥರ ಅಚಲವಾದ ನಂಬಿಕೆ.

ಬದುಕಿದ್ದಾಗ ಜಯಲಲಿತಾರನ್ನು ಅಮ್ಮ ಅಮ್ಮ ಎಂದು ಕೊಂಡಾಡಿದವರು ಅವರ ಅಂತ್ಯಸಂಸ್ಕಾರವನ್ನು ಅವರ ಸಂಪ್ರದಾಯದಂತೆ ನಡೆಸಲು ಬಿಡದೆ ತಮ್ಮ ದ್ರಾವಿಡ ಅವೈಧಿಕ ಪದ್ದತಿಯಂತೆ ನಡೆಸಿದ್ದು ತಮಿಳುನಾಡಿನಲ್ಲಿರುವ ಪೆರಿಯಾರ್ ಪ್ರಚೋದಿತ ಬ್ರಾಹ್ಮಣ ವಿರೋಧಿ ಮನಸ್ಥಿತಿಯನ್ನು ವೈಭವೀಕರಿಸಿದೆ ಎಂದರೆ ತಪ್ಪಾಗಲಾರದು.

ಅಲ್ಲಿನ ವೈದಿಕ ಸಂಪ್ರದಾಯಸ್ಥರು ಈ ಬಗ್ಗೆ ಜಾಗೃತಿ ಮೂಡಿಸಿ ತಮಿಳುನಾಡಿನಲ್ಲಿ ವೈದಿಕ ಪರಂಪರೆಯ ಉಳಿವಿಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸುತ್ತೇನೆ. [ಮಡಿ ಎಂದರೇನು? ಮಡಿಯ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ?]

English summary
It is pity that former chief minister of Tamil Nadu and popular leader Jayalalithaa was buried at Marina beach though she is from Iyengar brahmin family from Mandya. Sampige Srinivas says that she should have been cremated as per brahmin custom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X