• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲ ಸಮುದಾಯಕ್ಕೆ ಅನುಕೂಲವಾಗುವ ಬಜೆಟ್ : ಕವಟಗಿಮಠ

|

ನರೇಂದ್ರ ಮೋದಿಜಿಯವರ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಷ್ಟ್ರದ ಜನರಿಗೆ ಅದರಲ್ಲೂ ವಿಶೇಷವಾಗಿ ಮಧ್ಯಮವರ್ಗದ ಜನರು ಕಾರ್ಮಿಕರು, ರೈತರು, ಹಿರಿಯ ನಾಗರೀಕರು, ಅಂಗನವಾಡಿ ಕಾರ್ಯಕರ್ತರು ಹೀಗೆ ಹತ್ತು ಹಲವಾರು ಸಮುದಾಯಕ್ಕೆ ಅನುಕೂಲವಾಗುವಂತಹ, ಅದ್ಬುತವಾದಂತಹ ಆಯವ್ಯಯವನ್ನು ಮಂಡಿಸಿದ್ದಾರೆ. ಒಟ್ಟಾರೆ ಸರ್ವೇಜನಃ ಸುಖಿನೋಭವಂತು ಎಂಬ ಪಂಕ್ತಿ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು.

ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮಂಡಿಸಿದ ಆಯವ್ಯಯಗಳ ಇತಿಹಾಸದಲ್ಲಿ ಇದೊಂದು ದಾಖಲೆಯ ಆಯವ್ಯಯವಾಗಿದೆ. ಆದಾಯ ತೆರಿಗೆಯ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗಿದೆ. ಸಣ್ಣ ರೈತರ ಖಾತೆಗೆ ನೇರವಾಗಿ 6,000 ರೂಪಾಯಿ ಜಮೇ ಮಾಡುವ ಈ ಆಯವ್ಯಯ ದೇಶದಲ್ಲಿ 87% ರೈತರಿಗೆ ಲಾಭವಾಗುವುದು.

ಉದ್ಯೋಗಿಗಳಿಗೆ ಗಿಫ್ಟ್: ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆ!

ಅಂಗನವಾಡಿ ಕಾರ್ಯಕರ್ತರ ಸಂಬಳ ಹೆಚ್ಚಳ. 10 ಕೋಟಿ ಕಾರ್ಮಿಕರಿಗೆ 3,000 ಪಿಂಚಣಿ. 8 ಕೋಟಿ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ವಿತರಣೆ. ಆಹಾರ ಪದಾರ್ಥಗಳ ಉತ್ಪಾದನೆಯ ಸಹಾಯಧನ ದ್ವಿಗುಣ. 36 ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ಇಳಿಕೆ. ಮಧ್ಯಮ ವರ್ಗದ ಜನರಿಗೆ ಈ ಆಯವ್ಯಯದಿಂದ ಫಲ. ಕೃಷಿ ಸಾಲದ ಮೇಲೆ ಶೇ.2ರಷ್ಟು ಬಡ್ಡಿ ವಿನಾಯಿತಿ. ಗೃಹ ಸಾಲದ ಮೇಲೆ ರೂ.2 ಲಕ್ಷದವರೆಗೆ ಬಡ್ಡಿ ರಹಿತ ಸಾಲ.

ವಿರೋಧ ಪಕ್ಷದವರು ಸರ್ಕಾರದ ಅವಧಿ ಮುಗಿಯುವ ಹಂತದಲ್ಲಿ ಇಷ್ಟೊಂದು ವಿನಾಯಿತಿ ಬಜೆಟ್ ಮಂಡಿಸಲು ಅವಕಾಶವಿಲ್ಲವೆಂದು ಹೇಳಿದ್ದಾರೆ. ಆದರೆ ಪ್ರಾಯೋಗಿಕವಾಗಿ ಯಾವುದೇ ಸರ್ಕಾರಕ್ಕೂ ಆಯವ್ಯಯ ಮಂಡಿಸಲು ಸಂಪೂರ್ಣ ಅಧಿಕಾರವಿರುತ್ತದೆ. ಮಧ್ಯಾವಧಿ ಬಜೆಟ್ ಅಥವಾ ಪೂರ್ಣಾವಧಿ ಬಜೆಟ್ ಎಂಬ ಯಾವುದೇ ವಿಧಗಳಿಲ್ಲ. ಬಜೆಟ್ ಎಂಬುದು ಒಂದೇ ಒಂದು. ಒಟ್ಟಾರೆ ಹಂಗಾಮಿ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು ಮಂಡಿಸಿರುವ ಈ ಬಜೆಟ್ ಪ್ರಗತಿಪರ, ಜನಾನುರಾಗಿ ಎಲ್ಲ ಸಮುದಾಯಕ್ಕೂ ಅನುಕೂಲವಾಗುವ ಆಯವ್ಯಯವಾಗಿದೆ.

ಮಹಾಂತೇಶ ಮ ಕವಟಗಿಮಠ

ವಿರೋಧ ಪಕ್ಷದ ಮುಖ್ಯ ಸಚೇತಕರು,

ಕರ್ನಾಟಕ ವಿಧಾನ ಪರಿಷತ್

English summary
Interim budget 2019 presented by Narendra Modi government pleases everyone, says Mahantesh Kavatagimath, Opposition Chief Whip of Karnataka Legislative Council. The interim budget was presented by Piyush Goyal, as the Lok Sabha Elections is in the vicinity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more