ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪೇಂದ್ರ ಮುಂದೇನು ಮಾಡಬೇಕು, ಇಲ್ಲಿದೆ ಓದುಗರ ಅಭಿಪ್ರಾಯ

|
Google Oneindia Kannada News

ನಟ- ನಿರ್ದೇಶಕ ಉಪೇಂದ್ರ ಮಹತ್ವಾಕಾಂಕ್ಷೆಯಿಂದ ಆರಂಭಿಸಿದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ)ದಿಂದ ಅವರೇ ಹೊರಬರುತ್ತಾರಾ ಎಂಬ ಪ್ರಶ್ನೆ ಶುರುವಾಗಿದೆ. ಅವರ ಅಭಿಮಾನಿಗಳು ಹಾಗೂ ಉಪೇಂದ್ರ ಮುಂದಿನ ನಡೆ ಬಗ್ಗೆ ಆಸಕ್ತಿ ಇರುವವರು ಈ ಹಂತದಲ್ಲಿ ಏನು ಸಲಹೆ ಕೊಡಬಹುದು ಎಂಬುದು ಒನ್ಇಂಡಿಯಾ ಕನ್ನಡದ ಕುತೂಹಲವೂ ಆಗಿತ್ತು.

ಆದ್ದರಿಂದ ಈ ಬಗ್ಗೆ ನಮ್ಮ ಓದುಗರನ್ನು ಪ್ರಶ್ನೆ ಕೇಳಿದ್ದೆವು. ಉಪೇಂದ್ರ 'ಕೆಪಿಜೆಪಿ'ಯಿಂದ ಹೊರಬಂದರೆ ಯಾವ ಪಕ್ಷ ಸೇರಬೇಕು ಎಂಬುದು ಪ್ರಶ್ನೆ ಆಗಿತ್ತು. ಮಂಗಳವಾರ ಮಧ್ಯಾಹ್ನ ಹನ್ನೆರಡೂಕಾಲಿನವರೆಗೆ ಬಂದಿರುವ ಮತಗಳು ಅಥವಾ ಅಭಿಪ್ರಾಯಗಳು 2,866. ಆ ಪೈಕಿ ಕಾಂಗ್ರೆಸ್ ಸೇರಲಿ ಎಂದಿರುವ ಮತ 151 (ಶೇ 5.27).

ಉಪೇಂದ್ರ 'ಕೆಪಿಜೆಪಿ'ಯಿಂದ ಹೊರಬಂದರೆ ಯಾವ ಪಕ್ಷ ಸೇರಬೇಕು?

ಇನ್ನು ಬಿಜೆಪಿಯನ್ನು ಸೇರಲಿ ಎಂಬ ಅಭಿಪ್ರಾಯಕ್ಕೆ 1,579 (55.09) ಮತಗಳು ಬಿದ್ದಿವೆ. ಜೆಡಿಎಸ್ ಗೆ ಸೇರಲಿ ಎಂಬ ಸಲಹೆ ನೀಡಿರುವ ಮತಗಳ ಸಂಖ್ಯೆ 261 (9.11). ಯಾವುದೂ ಬೇಡ ಅಂದಿರುವವರ ಸಂಖ್ಯೆಯೂ ಹೆಚ್ಚಿದೆ. 875 (30.53) ಮತಗಳು ಇವು ಯಾವುವೂ ಬೇಡ ಎಂಬ ಆಯ್ಕೆಗೆ ಬಿದ್ದಿವೆ.

If Upendra come out of KPJP what should he do? Readers response

ಅಲ್ಲಿಗೆ ಉಪೇಂದ್ರ ಅವರು ಬಿಜೆಪಿಗೆ ಸೇರಲಿ ಅಥವಾ ಯಾವ ಪಕ್ಷಕ್ಕೆ ಸೇರುವುದೇ ಬೇಡ ಎಂಬ ಬಹುಮತದ ಅಭಿಪ್ರಾಯ ಆಗಿದೆ. ಅಂದಹಾಗೆ ನೀವಿನ್ನೂ ಅಭಿಪ್ರಾಯ ತಿಳಿಸಿಲ್ಲವಾ? ಹಾಗಿದ್ದರೆ ಇನ್ನೂ ಅವಕಾಶ ಇದೆ. ಬೇಗ ಬೇಗ ತಿಳಿಸಿ. ನಿಮ್ಮೆಲ್ಲರ ಅಭಿಪ್ರಾಯವನ್ನು ಉಪೇಂದ್ರರಿಗೆ ತಿಳಿಸುವ ಪ್ರಯತ್ನವನ್ನು ನಾವು ಮಾಡ್ತೀವಿ.

ಉಪೇಂದ್ರ ರಾಜಕೀಯ ಭವಿಷ್ಯದ ಬಗ್ಗೆ ಜಾತಕ ಏನು ಹೇಳುತ್ತದೆ?ಉಪೇಂದ್ರ ರಾಜಕೀಯ ಭವಿಷ್ಯದ ಬಗ್ಗೆ ಜಾತಕ ಏನು ಹೇಳುತ್ತದೆ?

English summary
If actor- director Upendra come out of KPJP what should he do? Here is the One India Kannada readers response. Most of the readers suggesting him to join BJP or he should not join any political party. Here is the details of poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X