ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದುಗರೊಬ್ಬರು ಪ್ರಶ್ನೆ ಕೇಳಿದ್ದಾರೆ, ಪ್ರಧಾನಿಗಳೇ ಉತ್ತರಿಸಿ!

By ಗುರುರಾಜ ಆಚಾರ್, ಬೆಂಗಳೂರು
|
Google Oneindia Kannada News

ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣ ನಿಯಂತ್ರಿಸಲೆಂದು ಮತ್ತು ಭ್ರಷ್ಟಾಚಾರಕ್ಕೆ ಕೊನೆ ಹಾಡಲೆಂದು 500 ರುಪಾಯಿ ಮತ್ತು 1000 ರುಪಾಯಿಗಳ ನೋಟುಗಳ ಚಲಾವಣೆಯನ್ನು ನಿಷೇಧಿಸಿದ್ದಾರೆ. ಇದೊಂದು ಅಭಿನಂದನಾರ್ಹ ಕ್ರಮವೇ. ಆದರೆ, ಓರ್ವ ಜಿಜ್ಞಾಸುವಾಗಿ ನಾನೀ ಪ್ರಶ್ನೆಯನ್ನು ಓದುಗರ ಮು೦ದಿಡುತ್ತಿದ್ದೇನೆ.

ಮೋದಿಯವರು 500 ಹಾಗೂ 1000 ರೂಪಾಯಿ ನೋಟುಗಳನ್ನು ನಿಷೇಧಿಸುವುದರ ಹಿ೦ದಿನ ಮೂಲ ಉದ್ದೇಶಗಳು ಯಾವುವೆ೦ದರೆ, ಮೊದಲನೆಯದಾಗಿ ದೇಶದ ಹಲವು ಶ್ರೀಮ೦ತರ ಮನೆಗಳಲ್ಲಿ ಕೊಳೆಯುತ್ತಾ ಬಿದ್ದಿರಬಹುದಾದ ರಾಶಿಗಟ್ಟಲೆ 500, 1000 ರೂಪಾಯಿ ಮುಖಬೆಲೆಗಳ ಅನಧಿಕೃತ ಧನರಾಶಿಗೆ ಒ೦ದು ಗತಿ ಕಾಣಿಸಲೆ೦ದು ಮತ್ತು ಎರಡನೆಯದಾಗಿ ದೇಶದಲ್ಲಿ ಭ್ರಷ್ಟಾಚಾರವನ್ನು ಹತೋಟಿಗೆ ತರಲೆ೦ದು. [ನೋಟು ನಿಷೇಧ : ಹುಂಡಿಯಲ್ಲಿ ಬೀಳುತ್ತಿರುವುದು ಯಾರಪ್ಪನ ದುಡ್ಡು?]

How note ban curbs corruption? Modi please answer

ಆದರೆ, ಇಲ್ಲಿ ಒ೦ದು ಅ೦ಶವನ್ನು ಗಮನಿಸಬೇಕು. ಮೋದಿಯವರು ಇನ್ನು ಮು೦ದಕ್ಕೆ ಅನ್ವಯವಾಗುವ೦ತೆ, ಹಿ೦ದೆ೦ದೂ ಚಾಲ್ತಿಯಲ್ಲಿಲ್ಲದೇ ಇದ್ದ ರೂಪಾಯಿ 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುತ್ತಿದ್ದಾರೆ. ಹೀಗೆ ಅಧಿಕ ಮುಖಬೆಲೆಯುಳ್ಳ ನೋಟುಗಳನ್ನು ಚಲಾವಣೆಗೆ ತರುವುದರಿ೦ದ ಭ್ರಷ್ಟಾಚಾರವನ್ನು ತಹಬದಿಗೆ ತರುವ ಬದಲು ಭ್ರಷ್ಟಾಚಾರವನ್ನು ಮತ್ತಷ್ಟು ಸುಲಲಿತಗೊಳಿಸಿದ೦ತಾಗಿಲ್ಲವೇ? [500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?]

ಉದಾಹರಣೆಗೆ, ಒ೦ದು ಲಕ್ಷ ರೂಪಾಯಿ ಲ೦ಚ ಪಾವತಿಗೆ, ಇದುವರೆಗೆ ರೂಪಾಯಿ 1000 ಮುಖಬೆಲೆಯುಳ್ಳ 100 ನೋಟುಗಳ ಒ೦ದು ಕಟ್ಟನ್ನು ಕೊಡಬೇಕಾಗಿತ್ತು. ಆದರೆ, ಇನ್ನು ಮು೦ದೆ ರೂಪಾಯಿ 2000 ಮುಖಬೆಲೆಯುಳ್ಳ ಕೇವಲ 50 ನೋಟುಗಳನ್ನಷ್ಟೇ ಪಾವತಿಸಿದರೆ ಸಾಕಲ್ಲವೇ? ಹಾಗೂ ಈ ಮೂಲಕ ಲ೦ಚದ ವ್ಯವಹಾರಕ್ಕೆ ಸುಗಮ ದಾರಿ ಮಾಡಿಕೊಟ್ಟ೦ತಾಗಲಿಲ್ಲವೇ? ತಿಳಿದವರು ಈ ಪ್ರಶ್ನೆಗೆ ಉತ್ತರಿಸಬಲ್ಲಿರಾ? [ನೋಟಿನ ನಿಷೇಧದ ಬಗ್ಗೆ ನಮ್ಮ ಓದುಗರು ಏನಂತಾರೆ?]

English summary
How is it possible to control flow of black money, and eradicate corruption by banning Rs 500 and Rs 1000 notes? A reader has asked. By introducing Rs 2000 notes, is it not easier for the corrupt to accept the money? Will Narendra Modi answer these questions?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X