• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತಿವೃಷ್ಟಿಯಿಂದ ಸಂತ್ರಸ್ತ ಉತ್ತರ ಕರ್ನಾಟಕ ರೈತರಿಗೆ ನ್ಯಾಯ ಸಿಗಲಿ

By ದಿವ್ಯಶ್ರೀ. ವಿ, ಬೆಂಗಳೂರು
|

ಪ್ರವಾಹದಿಂದ ನಮ್ಮ ಉತ್ತರ ಕರ್ನಾಟಕಕ್ಕೆ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಈ ಅತಿವೃಷ್ಟಿ ಇಂದ ಎಲ್ಲರಿಗೂ ದೊಡ್ಡ ಹೊಡೆತವಾಗಿದೆ.. ಬಹುಮುಖ್ಯವಾಗಿ ನಮ್ಮ ಅನ್ನದಾತರಾದ ರೈತರಿಗೆ ದೊಡ್ಡ ಸಂಕಟವಾಗಿದೆ..ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಮಾರಾಟ ಸಿಗದೆ ಎಲ್ಲವೂ ಪ್ರವಾಹದ ಪಾಲಾಗಿದೆ ಎನ್ನುವುದು ದುಃಖ ತಂದಿದೆ.

ಇನ್ನು ಕೆಲ ರೈತರ ಬೆಳೆಗಳಿಗೆ ಮಳೆ ಸಮಸ್ಯೆಯಿಂದಾಗಿ ಸೂಕ್ತ ಮಾರುಕಟ್ಟೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ದೇಶದ ಬೆನ್ನೆಲುಬು ರೈತ ಎನ್ನುವ ನಾವು ಅಂತಹ ರೈತನಿಗೆ ಈಗ ಸಂಕಷ್ಟ ಪರಿಸ್ಥಿತಿ ಬಂದಿದೆ. ನಮ್ಮ ಸರ್ಕಾರ ಆದಷ್ಟು ಬೇಗ ಮೊದಲು ರೈತ ಬೆಳೆದ ಬೆಳೆಗೆ ಸರಿಯಾದ ದರ ನಿಗದಿ ಪಡಿಸಬೇಕು. ರೈತನ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಿದೆ. ರೈತರು ಬೆಳೆದ ಬೆಳೆಯನ್ನು ಮಧ್ಯವರ್ತಿಗಳು ಕಮ್ಮಿ ದರಕ್ಕೆ ಪಡೆದುಕೊಂಡು ಸಾಮಾನ್ಯ ಜನರಿಗೆ ಅಧಿಕ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಇದನ್ನು ನಮ್ಮ ಸರ್ಕಾರ ಗಮನದಲ್ಲಿಟ್ಟುಕೊಂಡು ರೈತನಿಗೆ ಸರಿಯಾದ ದರವನ್ನು ಒದಗಿಸಲು ರೈತನ‌ಪರವಾಗಿ‌ ನಿಲ್ಲಬೇಕಿದೆ.

ಆದಷ್ಟು ಬೇಗ ರೈತರ ಆದಾಯ ದ್ವಿಗುಣವಾಗುವಂತೆ ಸರ್ಕಾರ ನೋಡಿಕೊಳ್ಳಬೇಕಾಗಿದೆ ಹಾಗು ದೇಶಕ್ಕೆ ಅನ್ನಕೊಡುವವನ‌ ಕಷ್ಟವನ್ನು ನಮ್ಮ ರಾಜ್ಯ ಸರ್ಕಾರ ಶಾಶ್ವತವಾಗಿ ಪರಿಹರಿಸಬೇಕಾಗಿದೆ ಮತ್ತು ರೈತನ ಸಾಲವನ್ನು ಮನ್ನಮಾಡಬೇಕಾಗಿದೆ.ರೈತ ಬೆಳೆದ ಬೆಲೆಗೆ ಸರಿಯಾದ ಮಾರುಕಟ್ಟೆ ‌ವ್ಯವಸ್ತೆ ಆದಷ್ಟು ಬೇಗ ಮಾಡಬೇಕು. ಮಳೆಯಿಂದಾಗಿ ಹಾಳಾಗಿರುವ ರೈತನ ಬೆಳೆಯನ್ನು ಹೇಗಾದರೂ ಸರ್ಕಾರ ಸಹಾಯ ಮಾಡಬೇಕು ಮತ್ತು ಅದಕ್ಕೆ ಬೆಲೆಯನ್ನು ಕೊಡಬೇಕು.

ಇದನ್ನು ಕೃಷಿ ಇಲಾಖೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು.ರೈತ ಬೆಳೆದ ಬೆಳೆಗೆ ರೈತನೆ ಬೆಲೆಯನ್ನು‌ ನಿರ್ಧಾರ ಮಾಡುವಂತಾದರೆ ರೈತನ‌ ಉದ್ದಾರ ಸಾಧ್ಯ ಎಂದು ನನ್ನ ಅಭಿಪ್ರಾಯ.

English summary
Flood Hit North Karnataka farmers are still waiting for relief fund and MSP for various crops by government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X