ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕವರೇಜ್: ಮೀಡಿಯಾ ವಾರಿಯರ್ಸ್ ನಿಮಗೊಂದು ಸಲಾಂ

By ಪ್ರಜ್ಞಾ, ಮಂಗಳೂರು ವಿವಿ
|
Google Oneindia Kannada News

ಕೊರೊನಾ ಎಂಬ ಬರಿಗಣ್ಣಿಗೆ ಕಾಣದ ಶತ್ರು ಮಾನವನ ದೇಹದ ಒಳಹೊಕ್ಕು ಸಮಾಜದಲ್ಲಿ ಗಾಬರಿ ಸೃಷ್ಟಿಸಿದೆ. ಕೊರೊನಾ ಆರ್ಭಟಕ್ಕೆ ಇಡೀ ವಿಶ್ವವೇ ನಡುಗಿಹೋಗಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಹಲವು ತಿಂಗಳ ಹಿಂದೆ ತನ್ನ ತವರು ಮನೆ ಚೀನಾದಿಂದ ಭಾರತಕ್ಕೆ ಬಂದ ವೈರಸ್ ಲಕ್ಷಾಂತರ ಜನರ ಜೀವ-ಜೀವನವನ್ನು ಹಿಂಡಿ ಹಿಪ್ಪೆ ಮಾಡಿದೆ...

Recommended Video

ದಕ್ಷಿಣ ಕನ್ನಡದಲ್ಲಿ ಮತ್ತೆ ಲಾಕ್ ಡೌನ್ !?

ಕೊರೊನಾ ಎಂದಾಕ್ಷಣ ಎಲ್ಲರಿಗೂ ಡಾಕ್ಟರ್ಸ್, ನರ್ಸ್, ಪೊಲೀಸರು ದೇವರಂತೆ ಭಾಸವಾಗುತ್ತಾರೆ. ಕೊರೊನಾ ಕಾಲದಲ್ಲೂ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದ ಆಶಾ ಕಾರ್ಯಕರ್ತೆಗಳು ನೆನಪಿಗೆ ಬರುತ್ತಾರೆ. ಆದರೆ ಕೊರೊನಾದ ಬಿಸಿ ತಟ್ಟಿದರೂ, ಪ್ರತಿಕ್ಷಣ ಜನರಿಗೆ ಸುದ್ದಿಯನ್ನು ನೀಡಲು ತಮ್ಮ ಪ್ರಾಣವನ್ನೇ ಪಣಕಿಟ್ಟು ದುಡಿಯುತ್ತಿರುವ ಮಾಧ್ಯಮವರ್ಗವನ್ನು ಒಂದಲ್ಲಾ ಒಂದು ನೆಪವಿಟ್ಟುಕೊಂಡು ಬಯ್ಯುವವರೇ ವಿನಾ ಅವರ ಶ್ರಮವನ್ನೂ ಗುರುತಿಸದೇ ಹೋಗಿರುವುದು ವಿಪರ್ಯಾಸ.

ಕೊವಿಡ್ 19 ಚಿಕಿತ್ಸೆ ಅವ್ಯವಸ್ಥೆ, ನರಕವಾಗುತ್ತಿವೆ ಆಸ್ಪತ್ರೆಗಳುಕೊವಿಡ್ 19 ಚಿಕಿತ್ಸೆ ಅವ್ಯವಸ್ಥೆ, ನರಕವಾಗುತ್ತಿವೆ ಆಸ್ಪತ್ರೆಗಳು

ಕಳೆದ ಮಾರ್ಚ್‌ನಲ್ಲೇ ವೈರಸ್‌ನ ಆರ್ಭಟ ನಿಲ್ಲಿಸಲು ಸರ್ಕಾರ ಲಾಕ್‌ಡೌನ್‌ ಹೇರಿತು. ಅಂದಿನಿಂದಲೇ ಕೊರೋನಾ ಸೇನಾನಿಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಮನೆಯೊಳಗೆ ಸುರಕ್ಷಿತವಾಗಿಯೇ ಇದ್ದರು. ಮಾಧ್ಯಮದ ಮೂಲಕವೇ ಕೊರೊನಾದ ತೀವ್ರತೆಯನ್ನು ನೋಡಿದ ಜನರು, ಕೊನೆಗೇ ಮಾಧ್ಯಮದವರು ಪರಿಸ್ಥಿತಿಯನ್ನು ವೈಭವೀಕರಿಸುತ್ತಿದ್ದಾರೆ, ಕಲ್ಪಿತ ಸುದ್ದಿಗಳ ಮೂಲಕ ಭಯ ಹುಟ್ಟಿಸುತ್ತಿದ್ದಾರೆ ಎಂದು ಟೀಕಿಸಿದರು. ಮನೆಯೊಳಗಿಂದಲೇ ಸಾಮಾಜಿಕ ಮಾಧ್ಯಮದ ಮೂಲಕ ಹಿಗ್ಗಾಮುಗ್ಗಾ ಬೈದರು. ಕೆಲವರಂತೂ ಟಿವಿ ಮಾಧ್ಯಮವನ್ನೇ ನಿಷೇಧಿಸಬೇಕು ಎನ್ನುವಲ್ಲಿಗೆ ತಲುಪಿದರು.

Covid19 Pandemic coverage: Hats off the media warriors

ಪತ್ರಕರ್ತರೂ ಸಂಕಷ್ಟದಲ್ಲಿದ್ದಾರೆ:
ಅದರೆ ಇಂತವರಿಗೆ ನೆನಪಿರಬೇಕಿತ್ತು ಮಾಧ್ಯಮದ ಮಂದಿಗೂ ಕುಟುಂಬವಿದೆ. ಅವರೂ ತಮ್ಮವರಿಗೂ ಕೊರೊನಾ ಬಂದರೆ ಎಂದು ಆತಂಕದಲ್ಲಿದ್ದಾರೆ. ಕೊರೊನಾ ಆರ್ಥಿಕ ಚಟುವಟಿಕೆಯ ಮೇಲೆ ಬೀರಿದ ಪ್ರಭಾವದಿಂದ ಪತ್ರಕರ್ತರೂ ಸಂಕಷ್ಟದಲ್ಲಿದ್ದಾರೆ. ಕೆಲವರು ಅರ್ಧ ಸಂಬಳಕ್ಕೆ ಕೆಲಸ ಮಾಡಿದರೆ, ಕೆಲವರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ಹಲವರು ಕೊರೋನಾ ಸೋಂಕು ತಗುಲಿ ಕ್ವಾರಂಟೈನ್‌ ಸೇರಿದ್ದರೆ. ಉಳಿದವರು ಕೊರೋನಾ ಟೆಸ್ಟ್‌ ಮಾಡಿಸಿಕೊಳ್ಳುತ್ತಲೇ ಕೆಲಸ ಮಾಡುತ್ತಿದ್ದಾರೆ ಎಂದು. ಈ ಹೋರಾಟದಲ್ಲಿ ಜಾಗೃತಿ ಮೂಡಿಸಲು ಹೋಗಿ ಏಟು ತಿಂದ, ಜನರಿಂದ ಬೈಗುಳ ತಿಂದ ಪತ್ರಕರ್ತರೆಷ್ಟೋ.

ಪತ್ರಕರ್ತರ ಉದ್ಯೋಗ, ಸಂಬಳ ಕಡಿತದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್ಪತ್ರಕರ್ತರ ಉದ್ಯೋಗ, ಸಂಬಳ ಕಡಿತದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್

ಉಳಿದವರು ಮನೆಯೊಳಗೆ ಕುಳಿತರೆ ಇವರು ವಿಶ್ರಾಂತಿಯಿಲ್ಲದೆ ದುಡಿದರು. ಸಮಾಜಕ್ಕೆ ನೈಜ ಸುದ್ದಿ ತಲುಪಿಸುವ ಭರದಲ್ಲಿ ಕುಟುಂಬದ ಹಾಗೂ ತಮ್ಮ ಸಂತೋಷಕ್ಕೆ ಸಮಾಧಿ ಕಟ್ಟಿ, ಸ್ಥಳ ಕೊರೋನಾ ಹಾಟ್ಸ್ಪಾಟ್ ಆಗಿರಲಿ, ರೆಡ್ ಜೋನ್ ಆಗಿರಲಿ, ಗ್ರೀನ್ ಜೋನೇ ಆಗಿರಲಿ ಅಥವಾ ತಾನು ಮಾತಾಡಿಸುವ ವ್ಯಕ್ತಿ ಸ್ವತಃ ಸೋಂಕಿತನೇ ಆಗಿರಲಿ ಅವೆಲ್ಲವನ್ನು ಬದಿಗಿಟ್ಟು ಇವರು ತಮ್ಮ ವೃತ್ತಿಧರ್ಮವನ್ನು ಪ್ರಾಮಾಣಿಕವಾಗಿ ಪಾಲಿಸುತ್ತಿದ್ದಾರೆ. ಅದೂ ಟೀಕೆ, ಅವಮಾನಗಳನ್ನು ಸಹಿಸಿಕೊಂಡು, ಮೀಡಿಯಾ ಇಂದು ವಿರೋಧ ಪಕ್ಷದ ಕೆಲಸ ಮಾಡುತ್ತಿದೆ.

ಕನ್ನಡ ಮಾಧ್ಯಮ ಲೋಕದಲ್ಲಿ ಕೊರೊನಾ ವೈರಸ್ ಎಬ್ಬಿಸಿರುವ ತಲ್ಲಣ!ಕನ್ನಡ ಮಾಧ್ಯಮ ಲೋಕದಲ್ಲಿ ಕೊರೊನಾ ವೈರಸ್ ಎಬ್ಬಿಸಿರುವ ತಲ್ಲಣ!

ಜನಸಾಮಾನ್ಯರ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಚಾಟಿ ಬೀಸುತ್ತಿದೆ. ಜನಪ್ರತಿನಿಧಿಗಳ ಬೇಜವಾಬ್ದಾರಿಯನ್ನು, ವಾಸ್ತವ ಆತಂಕಕಾರಿ ಸತ್ಯಗಳನ್ನು ಸಾಕ್ಷಿ ಸಮೇತ ಜನರ ಮುಂದಿಡುತ್ತಿವೆ. ತನ್ನ ಸಾಮರ್ಥ್ಯವನ್ನೂ ಮೀರಿ ಜನರನ್ನೂ, ಸರ್ಕಾರವನ್ನು ಜಾಗೃತಗೊಳಿಸಲು ಶ್ರಮಿಸುತ್ತಿದೆ. ಇಷ್ಟೆಲ್ಲಾ ಮಾಡಿದರೂ ಕೊನೆಗೆ ಇವರಿಗೆ ಕೊಂಕು ಮಾತಿನ ಉಡುಗೊರೆ ಬೇಕಾ...ಕರೆದು ಸನ್ಮಾನ ಬೇಡ, ಶ್ರಮವನ್ನು ಗುರುತಿಸಿದರೂ ಇವರಿಗೆ ನೈತಿಕ ಬಲ ತುಂಬಿದಂತಾಗುವುದಿಲ್ಲವೇ...ಏನೇ ಆಗಲಿ, ಹಗಲಿರುಳು ಗಾಣದ ಎತ್ತಿನಂತೆ ಶ್ರಮಿಸುವ ಮೀಡಿಯಾ ವಾರಿಯರ್ಸ್ ಗೆ ನನ್ನದೊಂದು ಸಲಾಂ...

ಪ್ರಜ್ಞಾ,
ಪ್ರಥಮ ಬಿ.ಎ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

English summary
Covid19 Pandemic coverage: Hats off the media warriors says a Mangalore University BA student Prajna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X