ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡಿಎ ಸೈಟನ್ನು ಯಾರಾದರೂ ಕೈಗೆಟುಕುವ ಬೆಲೆ ಅನ್ನುವುದಕ್ಕೆ ಸಾಧ್ಯವಾ?

By ಮಂಜುನಾಥ್
|
Google Oneindia Kannada News

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೆಂಪೇಗೌಡ ಬಡಾವಣೆಯಲ್ಲಿ ಐದು ಸಾವಿರ ನಿವೇಶನ ಹಂಚಲು ಅರ್ಜಿ ಕರೆಯಲಾಗಿದೆ. ಈ ನಿವೇಶನಗಳಿಗೆ ನಿಗದಿ ಮಾಡಿರುವ ಮೊತ್ತ ನೋಡಿದರೆ ಖಾಸಗಿ ಲೇಔಟ್ ಗಳಲ್ಲಿ ಸೈಟು ಖರೀದಿಸುವುದೇ ಉತ್ತಮ ಅನಿಸುತ್ತದೆ. ಜತೆಗೆ ಖಾಸಗಿಯಾಗಿ ಸೈಟು ಮಾರಾಟ ಮಾಡುವವರನ್ನು ಬಡವರ ಬಂಧು ಎಂದು ಕರೆದರೂ ಯಾವ ಅತಿಶಯೋಕ್ತಿಯೂ ಆಗಲಾರದು.

5 ಸಾವಿರ ಸೈಟು ಹಂಚಿಕೆಗೆ ಬಿಡಿಎ ಅಧಿಸೂಚನೆ: ಅರ್ಜಿ ಲಭ್ಯ 5 ಸಾವಿರ ಸೈಟು ಹಂಚಿಕೆಗೆ ಬಿಡಿಎ ಅಧಿಸೂಚನೆ: ಅರ್ಜಿ ಲಭ್ಯ

ಯಾವ ಅಳತೆಯ ಸೈಟಿಗೆ ಎಷ್ಟು ಮೊತ್ತವನ್ನು ಬಿಡಿಎ ನಿಗದಿ ಮಾಡಿದೆ ಎಂಬುದರ ಮೇಲೆ ಒಮ್ಮೆ ಕಣ್ಣಾಡಿಸಿ.

Is BDA site rates affordable to all class of people?

20X30 (ಆರ್ಥಿಕವಾಗಿ ಹಿಂದುಳಿದ ವರ್ಗ) 5,23,126

20X30 (ಸಾಮಾನ್ಯ ವರ್ಗ) 10,46,251

30X40 23,25,002

40X60 52,31,255

50X80 96,87,510

ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎಯಿಂದ ನಿವೇಶನ ಹಂಚಿಕೆಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎಯಿಂದ ನಿವೇಶನ ಹಂಚಿಕೆ

ಅಂದರೆ ಸಾವಿರದ ಇನ್ನೂರು ಚದರಡಿಯ ಒಂದು ಸೈಟು ಖರೀದಿಸಲು 23,25,002 ರುಪಾಯಿ ಆಗುತ್ತದೆ. ಬರೀ ಸೈಟು ಖರೀದಿಗೆ ಇಷ್ಟು ಹಣ ತೆತ್ತ ನಂತರ ಮನೆ ಕಟ್ಟಲು ಇನ್ನೆಷ್ಟು ಖರ್ಚು? ಇದು ಕೈಗೆಟುಕುವ ಬೆಲೆ ಎನ್ನುತ್ತದೆ ಬಿಡಿಎ. ಹತ್ತು ಮಂದಿ ಸಮಾನಾಸಕ್ತರು ಎರಡು ಕೋಟಿ ರುಪಾಯಿಗೆ ಒಂದು ಎಕರೆ ಭೂಮಿ ಅಭಿವೃದ್ಧಿ ಪಡಿಸಿದರೆ, ಅದರಲ್ಲಿ ಎಷ್ಟು ಸೈಟು ಆಗಬಹುದು? ಒಬ್ಬೊಬ್ಬರಿಗೆ ತಲಾ ಎಷ್ಟು ಸೈಟು ಉಳಿಯಬಹುದು?

ಕಾನೂನು ಬದ್ಧವಾಗಿಯೇ ಎಲ್ಲ ನಿಯಮ ಅನುಸರಿಸಿ ಅಭಿವೃದ್ಧಿ ಪಡಿಸಿದ ನಿವೇಶನ ಖಾಸಗಿಯವರಿಗೆ ಅಷ್ಟು ಖರ್ಚಾಗುವುದಿಲ್ಲ ಅಂದ ಮೇಲೆ ಸರಕಾರದ ಅಡಿಯಲ್ಲಿ ಬರುವ ಸಂಸ್ಥೆಯೊಂದು ಬಡವರಿಗೆ ಹಂಚುವ ಸೈಟಿನ ಬೆಲೆ ಇಷ್ಟು ದುಬಾರಿಯೆ? ಇನ್ನು 50X80ರ ಅಳತೆಯ ನಾಲ್ಕು ಸಾವಿರ ಚದರಡಿ ನಿವೇಶನಕ್ಕೆ 96,87,510 ರುಪಾಯಿ. ಹತ್ತಿರ ಹತ್ತಿರ ಒಂದು ಕೋಟಿ ರುಪಾಯಿ.

ಆರ್ಥಿಕವಾಗಿ ಹಿಂದುಳಿದವರಿಗೆಂದು ಇರುವ ಆರುನೂರು ಚದರಡಿಯ ಸೈಟಿನ ಬೆಲೆಯೇ 5,23,126 ರುಪಾಯಿ. ಅಲ್ಲಿಗೆ ಆರ್ಥಿಕವಾಗಿ ಹಿಂದುಳಿದವರು ಎಂಬುದಕ್ಕೆ ಇರುವ ವ್ಯಾಖ್ಯೆಯನ್ನೇ ಬದಲಾಯಿಸಬೇಕಾಗುತ್ತದೆ. ಬಿಡಿಎನಿಂದಲೇ ಖಾಸಗಿಯಾಗಿ ಭೂ ಅಭಿವೃದ್ಧಿ ಪಡಿಸುವವರಿಗೆ ಉತ್ತೇಜನ ನೀಡಲಾಗುತ್ತಿದೆಯಾ ಎಂಬ ಗುಮಾನಿ ಬರುವುದಿಲ್ಲವೆ?

English summary
Bagalore Development Authority called application for 5 thousand sites in Kempegowda Layout. Price which is fixed by BDA very high. Here is the response by One India Kannada reader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X