ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸಮಸ್ಯೆ ಹೇಗೆ ಪರಿಹರಿಸುತ್ತೀರಿ? ರಾಹುಲ್ಗೆ ಓದುಗನ ಪತ್ರ

By ಶ್ರೀಕಾಂತ್
|
Google Oneindia Kannada News

ಇಷ್ಟೆಲ್ಲಾ ಅನರ್ಥದ ಮಧ್ಯೆ ರಾಹುಲ್ ಗಾಂಧಿಯನ್ನ ಹೇಗೆ ಈ ದೇಶದ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುವುದು? ಒಬ್ಬ ಸಾಮಾನ್ಯ ಪ್ರಜೆಗೆ ಇರಬೇಕಾದ ಕನಿಷ್ಠ ಜ್ಞಾನ ಕೂಡ ಇರುವ ಹಾಗೆ ಕಾಣುವುದಿಲ್ಲ. ಇನ್ನು ವಿದೇಶ ನೀತಿ, ಹಣಕಾಸು ನೀತಿ, ರಕ್ಷಣಾ ನೀತಿ ಇವುಗಳ ಮಧ್ಯೆ ಉದ್ಯೋಗ, ಹಣದುಬ್ಬರ, ಗಡಿ ತಂಟೆ, ನೀರಿನ ತಂಟೆ ಇವನ್ನೆಲ್ಲ ಹೇಗೆ ನಿವಾರಣೆ ಮಾಡುತ್ತಾರೆ ಎಂಬುದು ಯಕ್ಷ ಪ್ರಶ್ನೆ.

ಒಬ್ಬರನ್ನೊಬ್ಬರು ತೆಗಳಿದರೆ ಏನು ಫಲ? ಈ ದೇಶವನ್ನು ಹೇಗೆ ಅಭಿವೃದ್ಧಿಪಡಿಸುವುದು, ಬೇರೆ ಬೇರೆ ದೇಶಗಳ ಮಧ್ಯೆ, ನಮ್ಮ ದೇಶಕ್ಕೆ ಇರುವ ಗೌರವಕ್ಕೆ ಧಕ್ಕೆ ಬಾರದ ಹಾಗೆ ಮುಂದಿನ ಆಲೋಚನೆ ಏನು, ಇವುಗಳ ಬಗ್ಗೆ ಚಿಂತಿಸಬೇಕು. ಅದನ್ನು ಬಿಟ್ಟು, ನರೇಂದ್ರ ಮೋದಿ, ಬಿಜೆಪಿ ಅಧಿಕಾರದಲ್ಲಿ ಇರಬಾರದು, ನಾವು ಅಧಿಕಾರಕ್ಕೆ ಬರಬೇಕು ಎಂದು ರಚ್ಚೆ ಹಿಡಿಯಲು ದೇಶ ಏನು ಇವರ ಆಟದ ಸಾಮಾನೇ?

ಪ್ರಕಾಶ್ ರೈ ಅವರೇ ಈ 5 ಪ್ರಶ್ನೆಗಳಿಗೆ ನೀವಾದರೂ ಉತ್ತರ ಹೇಳಿ...ಪ್ರಕಾಶ್ ರೈ ಅವರೇ ಈ 5 ಪ್ರಶ್ನೆಗಳಿಗೆ ನೀವಾದರೂ ಉತ್ತರ ಹೇಳಿ...

ಆಯಿತು... ನಾವೆಲ್ಲರೂ ಮುಂದಿನ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಅಂದುಕೊಳ್ಳೋಣ, ಈ ವಿಷಯಗಳನ್ನು / ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತೀರಿ?

An open letter to Rahul Gandhi by a reader

* ಪಾಕಿಸ್ತಾನ ನೀಡುತ್ತಿರುವ ಕಿರುಕುಳ;
* ಬಾಂಗ್ಲಾದೇಶದಿಂದ ಬರುತ್ತಿರುವ ಅಕ್ರಮ ವಲಸೆಗಾರರು;
* ಚೀನಾ ದೇಶದಿಂದ ಆಗುತ್ತಿರುವ ಗಡಿ ತಂಟೆ;
* ಕಾಶ್ಮೀರದ ಗಲಾಟೆ;
* ನಕ್ಸಲ್ ಸಮಸ್ಯೆ;
* ಭ್ರಷ್ಟಾಚಾರಕ್ಕೆ ಹೇಗೆ ಕಡಿವಾಣ ಹಾಕುತ್ತೀರಿ?
* ಈ ದೇಶದ ಭದ್ರತಾ ವಿಷಯದ ಬಗ್ಗೆ ನಿಮ್ಮ ನಿಲುವು;
* ಎಲ್ಲ ಜಾತಿ, ಧರ್ಮಗಳೊಂದಿಗೆ ಕೋಮು ಸೌಹಾರ್ದತೆ;
* ಹಿಂದೂ ಮುಸ್ಲಿಂ ಬಗ್ಗೆ ನೀವು ಇಷ್ಟು ದಿನ ಪೋಷಿಸಿದ ದ್ವೇಷ;
* ಅಲ್ಪಸಂಖ್ಯಾತರ ಬಗ್ಗೆ ನಿಮ್ಮ ನಿಲುವು - ಪುನಃ ಸಿದ್ದಣ್ಣನ ಹಾಗೆ ಭಾಗ್ಯಗಳನ್ನ ಕೊಡಬೇಡಿ;
* ದೇಶದಲ್ಲಿ ಇರುವ ನಿರುದ್ಯೋಗ ಸಮಸ್ಯೆ;
* ನಿಮ್ಮದೇ ಪಕ್ಷದಲ್ಲಿ ಇರುವ ಭ್ರಷ್ಟಾತಿಭ್ರಷ್ಟ ರಾಜಕಾರಣಿಗಳನ್ನ ಹೇಗೆ ಕಟ್ಟಿ ಹಾಕುತ್ತೀರಿ?
* ಭ್ರಷ್ಟ ಅಧಿಕಾರಿಗಳಿಗೆ ಏನು ಸಂದೇಶ?
* ದೇಶದಲ್ಲಿ ತಾಂಡವ ಆಡುತ್ತಿರುವ ನೀರಿನ ಸಮಸ್ಯೆ;

ಇದರಲ್ಲಿ ಯಾವುದಾದರೂ 5 - 6 ವಿಷಯಕ್ಕೆ ನಿಮ್ಮಲ್ಲಿ ಸರಿಯಾದ ಪರಿಹಾರ ಇದೆಯೇ? ಇದಕ್ಕೆ ಶಾಶ್ವತ ಪರಿಹಾರ ಬೇಕೇ ಹೊರತು ತಾತ್ಕಾಲಿಕ ಪರಿಹಾರ ಅಲ್ಲ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೊಡುವ ಕೆಲಸ ಇಷ್ಟು ದಿನ ಮಾಡುತ್ತಾ ಬಂದಿದ್ದೀರಿ. ಅದನ್ನು ಬಿಟ್ಟು ಸಮಸ್ಯೆ ಮೂಲ ಗುರುತಿಸಿ ಪರಿಹಾರ ತೋರಿಸಿ. ಆಗಲೇ ನಿಮಗೆ ಈ ದೇಶದ ಬಗ್ಗೆ ನಿಜವಾದ ಕಾಳಜಿ ಇದೆ ಎಂದು ಗೊತ್ತಾಗುವುದು. ಇಲ್ಲದಿದ್ದರೆ ನಿಮ್ಮದು ಅಧಿಕಾರದ ದಾಹ ಎಂದು ಜನರಿಗೆ ತಿಳಿಯಲು ತುಂಬಾ ಸಮಯ ಬೇಡ.

ಮಹಾದಾಯಿ ಬಗ್ಗೆ ಕಾಂಗ್ರೆಸ್ ನಿಲುವು ತಿಳಿಸಿ: ರಾಹುಲ್ ಗೆ ರೈತರ ಆಗ್ರಹಮಹಾದಾಯಿ ಬಗ್ಗೆ ಕಾಂಗ್ರೆಸ್ ನಿಲುವು ತಿಳಿಸಿ: ರಾಹುಲ್ ಗೆ ರೈತರ ಆಗ್ರಹ

English summary
Oneindia Kannada reader Srikanth has asked several questions to AICC president Rahul Gandhi about the several problems Karnataka and India are facing. He has asked Rahul to find solutions to these burning issues, then only people will accept him as true leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X