ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ಪರೀಕ್ಷೆ ಕನ್ನಡದಲ್ಲೇ ಬರೆಯಲು ಬಿಡಿ

By * ವಸಂತ್ ಶೆಟ್ಟಿ, ಬೆಂಗಳೂರು
|
Google Oneindia Kannada News

ಕೇಂದ್ರ ಲೋಕಸೇವಾ ಆಯೋಗ(ಯು.ಪಿ.ಎಸ್.ಸಿ) ಇತ್ತೀಚೆಗೆ ಯು.ಪಿ.ಎಸ್.ಸಿ ಪರೀಕ್ಷೆಯ ನಿಯಮಗಳಿಗೆ ಮಾಡಿರುವ ತಿದ್ದುಪಡಿಗಳು ಹಿಂದಿಯೇತರ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ತೊಡಕು ಉಂಟುಮಾಡುತ್ತಿದೆ. ಪ್ರಾದೇಶಿಕ ಭಾಷೆ ಕಡೆಗಣಿಸಿರುವ ಯುಪಿಎ ಕ್ರಮವನ್ನು ವಿರೋಧಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಡಿಎಂಕೆ, ಶಿವಸೇನೆ ಹಾಗೂ ಬಿಜೆಪಿ ಕೂಡಾ ಯುಪಿಎ ಕ್ರಮವನ್ನು ಖಂಡಿಸಿವೆ.

ಭಾಷಾ ಸಮಾನತೆಯನ್ನು ನಿರಾಕರಿಸುತ್ತಿರುವ ಹಾಗೂ ಒಕ್ಕೂಟ ವ್ಯವಸ್ಥೆಯ ಆಶಯಗಳನ್ನೇ ಗಾಳಿಗೆ ತೂರುತ್ತಿರುವ ಈ ನಡೆಯು, ಗ್ರಾಮೀಣ ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತು ಹಿಂದಿಯೇತರ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸಿಕೊಡುತ್ತಿಲ್ಲ.

ಯು.ಪಿ.ಎಸ್.ಇ ಪರೀಕ್ಷಾ ಬದಲಾವಣೆಗಳನ್ನು ವಿರೋಧಿಸಿ ಸಾಕಷ್ಟು ರಾಜ್ಯಗಳು ದನಿ ಎತ್ತಿವೆ. ಇಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಅಧ್ಯಯನ ನಡೆಸಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸಂಸದರನ್ನು ಉದ್ದೇಶಿಸಿ ಪ್ರಿಯಾಂಕ್ ಭಾರ್ಗವ್ ಎಂಬುವರು ಆನ್ ಲೈನ್ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದಾರೆ.

ಜನರ ಸಹಿ ಪಡೆದ ನಂತರ ಇದನ್ನು ಕರ್ನಾಟಕದ ಎಲ್ಲ ಸಂಸದರಿಗೂ ಹಾಗೂ ಪ್ರಧಾನಿಗಳಿಗೂ ಕಳುಹಿಸಲಾಗುವುದು. ಇದಕ್ಕೆ ಹೆಚ್ಚೆಚ್ಚು ಜನರು ಸಹಿ ಮಾಡಿ, ಭಾರತದಲ್ಲಿ ಎಲ್ಲ ಭಾಷೆಗಳೂ, ಎಲ್ಲ ಭಾಷಿಕರೂ ಸಮಾನರೆಂಬ ಸಂದೇಶವನ್ನು ಕೇಂದ್ರಕ್ಕೆ ಕಳುಹಿಸಬೇಕಿದೆ. ಈ ನಿಟ್ಟಿನಲ್ಲಿ ಈ ಪಿಟಿಶನ್ನಿನ ಬಗ್ಗೆ ಜನರಲ್ಲಿ ತಮ್ಮ ಹಕ್ಕಿನ ಅರಿವು ಮೂಡಿಸಲು ಒನ್ ಇಂಡಿಯಾ ಕನ್ನಡ ಸಹಿ ಸಂಗ್ರಹ ಅಭಿಯಾನಕ್ಕೆ ಓದುಗರನ್ನು ಕರೆದೊಯ್ಯುತ್ತಿದೆ.

ಪಿಟಿಶನ್ ಕೊಂಡಿ ಇಲ್ಲಿದೆ: chn.ge/Yr20wV ಪಿಟಿಶನ್ನಿನ ಬಗ್ಗೆ ಹೆಚ್ಚು ತಿಳಿಯಲು ಪ್ರಿಯಾಂಕ್ ಅವರನ್ನು ವಿಳಾಸದಲ್ಲಿ ಸಂಪರ್ಕಿಸಬಹುದು.

ಯು.ಪಿ.ಎಸ್.ಸಿ.ಯ ಬದಲಾಗಿರುವ ನಿಯಮಗಳು ಹಾಗೂ ಪೀಟಿಷನ್ ದಾರರ ಹಕ್ಕೊತ್ತಾಯ ಇಲ್ಲಿದೆ ಮುಂದೆ ಓದಿ...

ಯುಪಿಎಸ್ ಸಿ ಹೊಸ ನಿಯಮಗಳು

ಯುಪಿಎಸ್ ಸಿ ಹೊಸ ನಿಯಮಗಳು

ತಮ್ಮ ಪದವಿಯನ್ನು ಕೆಳಗೆ ಪಟ್ಟಿ ಮಾಡಲಾಗಿರುವ ಯಾವುದಾದರೂ ಭಾಷೆಯ ಮಾಧ್ಯಮದಲ್ಲಿ ಓದಿದ್ದರೆ ಮಾತ್ರ ಅದೇ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಬಹುದಾಗಿದ್ದು, ಇಲ್ಲವಾದರೆ ಇಂಗ್ಲಿಶ್ ಅಥವಾ ಹಿಂದಿಯಲ್ಲಿಯೇ ಯು.ಪಿ.ಎಸ್.ಸಿ ಪರೀಕ್ಷೆ ಬರೆಯಬೇಕು.
"ಅಸ್ಸಾಮಿ, ಬಂಗಾಳಿ, ಬೊಡೊ, ಡೋಗ್ರಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಂಥಾಳಿ, ಸಿಂಧಿ, ತಮಿಳು, ತೆಲುಗು, ಮತ್ತು ಉರ್ದು".

ಯುಪಿಎಸ್ ಸಿ ಹೊಸ ನಿಯಮಗಳು

ಯುಪಿಎಸ್ ಸಿ ಹೊಸ ನಿಯಮಗಳು

ಇಂಗ್ಲೀಶ್ ಅಥವಾ ಹಿಂದಿಯೇತರ ಭಾಷೆಯಲ್ಲಿ ಪರೀಕ್ಷೆ ಬರೆಯಲು ಕನಿಷ್ಟವೆಂದರೆ ಇಪ್ಪತ್ತೈದು ಅಭ್ಯರ್ಥಿಗಳು ಸಿದ್ದವಿದ್ದರೆ ಮಾತ್ರ ಆ ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇಲ್ಲವಾದರೆ ಅಭ್ಯರ್ಥಿಗಳು ಅನಿವಾರ್ಯವಾಗಿ ಇಂಗ್ಲಿಶ್ ಅಥವಾ ಹಿಂದಿಯಲ್ಲೇ ಪರೀಕ್ಷೆ ಬರೆಯಬೇಕು.

ಹಿಂದಿ ಭಾಷಿಕರಿಗೆ ಈ ನಿಯಮ ಅನ್ವಯಿಸದೇ ಇರುವುದು, ಭಾಷೆಯ ಆಧಾರದ ಮೇಲೆ ನಡೆಸಲಾಗುತ್ತಿರುವ ತಾರತಮ್ಯವನ್ನು ಎತ್ತಿ ತೋರಿಸುತ್ತಿದೆ.

ಯುಪಿಎಸ್ ಸಿ ಹೊಸ ನಿಯಮಗಳು

ಯುಪಿಎಸ್ ಸಿ ಹೊಸ ನಿಯಮಗಳು

ಇಂಗ್ಲೀಶ್ ಜ್ಞಾನವನ್ನು ಪರೀಕ್ಷಿಸುವ ಪ್ರಶ್ನೆ ಪತ್ರಿಕೆಯನ್ನು Rank ನಿರ್ಧರಿಸುವ ಮಟ್ಟಕ್ಕೆ ಕಡ್ಡಾಯ ಮಾಡಲಾಗಿದೆ. ಇದರಿಂದ, ಗ್ರಾಮೀಣ ಪ್ರದೇಶದಿಂದ ಬಂದಂತಹ ವಿದ್ಯಾರ್ಥಿಗಳು ಬೇರೆಲ್ಲಾ ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರೂ, ಇಂಗ್ಲೀಶಿನ ಮೇಲೆ ಸ್ವಲ್ಪಮಟ್ಟಿನ ಹಿಡಿತ ಹೊಂದಿರುವರು ಎಂಬ ಕಾರಣಕ್ಕೆ ಹಿನ್ನಡೆ ಅನುಭವಿಸುತ್ತಾರೆ.

ಯುಪಿಎಸ್ ಸಿ ಹೊಸ ನಿಯಮಗಳು

ಯುಪಿಎಸ್ ಸಿ ಹೊಸ ನಿಯಮಗಳು

ಭಾರತೀಯ ಭಾಷೆಗಳ ಜ್ಞಾನ ಪರೀಕ್ಷಿಸುವ ಪ್ರಶ್ನೆ ಪತ್ರಿಕೆಯನ್ನು ತೆಗೆದು ಹಾಕಲಾಗಿದೆ. ಐ‌ಚ್ಛಿಕ ವಿಷಯಗಳನ್ನು 2 ರಿಂದ 1 ಪಠ್ಯ ವಿಷಯಕ್ಕೆ ಇಳಿಸಲಾಗಿದೆ. ಸಾಮಾನ್ಯ ಪಠ್ಯ ವಿಷಯಗಳನ್ನು ನಾಲ್ಕಕ್ಕೇರಿಸಲಾಗಿದೆ.

ಪ್ರತಿ ಪೇಪರ್ 250 ಅಂಕಗಳನ್ನು ಹೊಂದಿರುತ್ತದೆ. ಒಂದು ಐಚ್ಛಿಕ ವಿಷಯ ಎರಡು ಪೇಪರ್ ಹೊಂದಿದ್ದು ಒಟ್ಟು 500 ಅಂಕಗಳಿರುತ್ತದೆ. ಇಂಗ್ಲೀಷ್ 100 ಅಂಕಗಳ ಪರೀಕ್ಷೆಯಾಗಿದ್ದು, ಪ್ರಬಂಧ ರಚನೆ 200 ಅಂಕಗಳ ಪರೀಕ್ಷೆಯಾಗಿದೆ.

ನಮ್ಮ ಹಕ್ಕೊತ್ತಾಯಗಳು

ನಮ್ಮ ಹಕ್ಕೊತ್ತಾಯಗಳು

1. ಯು.ಪಿ.ಎಸ್.ಸಿಯು ಭಾಷಾ ಮಾಧ್ಯಮದ ವಿಷಯದಲ್ಲಿ ಮಾಡಿರುವ ನಿಯಮದ ಬದಲಾವಣೆಗಳನ್ನು ತತ್ಕ್ಷಣದಿಂದ ಕೈಬಿಡಬೇಕು.
2. ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ತನ್ನ ಆಯ್ಕೆಯ ಭಾಷೆಯಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಯನ್ನು ಎದುರಿಸುವ ಹಕ್ಕುಗಳು ಸಿಗಬೇಕು.
3. ಒಕ್ಕೂಟ ಸರ್ಕಾರದದಿಂದ ನೇಮಕಾತಿಗಾಗಿ ಅಥವಾ ಪ್ರವೇಶಕ್ಕಾಗಿ ನಡೆಸಲ್ಪಡುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಲ್ಲಿ ನಡೆಸಬೇಕು.
4. ಇಂಗ್ಲಿಶ್ ಭಾಷೆಯಲ್ಲಿ ಬಂದ ಅಂಕಗಳನ್ನು ರಾಂಕಿಂಗ್ಗೆ ಪರಿಗಣಿಸಬಾರದು, ಈ ಮೊದಲಿದ್ದಂತೆಯೇ ಕೇವಲ ಅರ್ಹತೆಗಾಗಿ ಎಂದಷ್ಟೇ ಪರಿಗಣಿಸಿದರೆ ಸಾಕು.

English summary
Demand to conduct the UPSC exams in all Indian languages listed in 8th schedule of constitution. Thereby, treating all languages as equal and providing equal opportunities for all linguistic groups of India. After Shiv Sena, its now the BJP which is raising against the UPSC Regional Language Exam decision
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X