• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಶೀರ್ಷಿಕೆ ಚಿತ್ರಕ್ಕೆ ಮಾತ್ರ ತೆರಿಗೆ ವಿನಾಯತಿ ಕೊಡಿ

By * ಶ್ರೀಧರ ಕೆದಿಲಾಯ, ಉಡುಪಿ
|

ಇಂಗ್ಲೀಷ್ ಶೀರ್ಷಿಕೆಯಲ್ಲಿ ನಿರ್ಮಾಣಗೊಳ್ಳುವ ಹಾಗೂ ಭಾಷಾ ಗುಣಮಟ್ಟ ಕಾಯ್ದುಕೊಳ್ಳದ ಕನ್ನಡ ಚಲನಚಿತ್ರಗಳಿಗೆ ಸಹಾಯಧನ ಹಾಗೂ ತೆರಿಗೆ ರಿಯಾಯಿತಿ ನೀಡದಂತೆ ಆಗ್ರಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸರ್ಕಾರಕ್ಕೆ ಪತ್ರ ಬರೆದಿರುವುದು ಉತ್ತಮ ಬೆಳವಣಿಗೆ. ಪಕ್ಕದ ತಮಿಳುನಾಡು ರಾಜ್ಯದಲ್ಲಿ ಚಿತ್ರಕರ್ಮಿಗಳು ಇಂಗ್ಲೀಷ್ ಶೀರ್ಷಿಕೆಗಳನ್ನು ಚಿತ್ರಗಳಿಗೆ ಇಡುವುದನ್ನು ಬಿಟ್ಟಿದ್ದಾರೆ. ಇದರಿಂದ ಅವರಿಗೆ ಅಂತಾರಾಷ್ಟ್ತೀಯ ಮಾರುಕಟ್ಟೆಯಲ್ಲಿ ನಷ್ಟವೇನು ಆಗಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಅಂಬರೀಷ್ ಹಾಗೂ ವಾರ್ತಾ ಸಚಿವ ಸಂತೋಷ್ ಲಾಡ್ ಅವರಿಗೆ ಮುಖ್ಯಮಂತ್ರಿ ಚಂದ್ರು ಅವರು ಬರೆದಿರುವ ಪತ್ರದಲ್ಲಿ "ಅನ್ಯ ಭಾಷೆಯ ಶಬ್ದದ ಶೀರ್ಷಿಕೆಗಳನ್ನು ಇಡುವುದು ಹಾಗೂ ಕನ್ನಡ ಭಾಷಾ ಗುಣಮಟ್ಟವನ್ನು ಕಾಯ್ದುಕೊಳ್ಳದೇ ಇರುವುದು ಕನ್ನಡ ವಿರೋಧಿ ನೀತಿಯೆಂದೇ ಪರಿಗಣಿಸಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಲನಚಿತ್ರ ಅಕಾಡೆಮಿಯೂ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಅಂಥ ಚಿತ್ರಗಳಿಗೆ ಸರ್ಕಾರ ನೀಡುವ ಸೌಲಭ್ಯ, ತೆರಿಗೆ ವಿನಾಯಿತಿ ಹಾಗೂ ಚಲಚಿತ್ರ ಪ್ರಶಸ್ತಿಯನ್ನು ಸರ್ಕಾರ ನೀಡಬಾರದು ಎಂದು ಒತ್ತಾಯಿಸಿದ್ದಾರೆ"

ತಮಿಳುನಾಡಿನಲ್ಲಿ ಕೂಡಾ ಆರಂಭದಲ್ಲಿ ತಮಿಳು ಶೀರ್ಷಿಕೆ ಇಟ್ಟರೆ ನಗರ ಕೇಂದ್ರಿತ ಪ್ರೇಕ್ಷಕರಿಗೆ ತಿಳಿಯುವುದಿಲ್ಲ, ವಿತರಕರು ಒಪ್ಪುವುದಿಲ್ಲ ಎಂಬ ಕೂಗೆದ್ದಿತ್ತು. ಆದರೆ, ತಮಿಳು ಶೀರ್ಷಿಕೆ ಇದ್ದರೆ ಮಾತ್ರ ಸರ್ಕಾರ ಅನುದಾನವನ್ನು ನೀಡುತ್ತದೆ ಇಲ್ಲದಿದ್ದರೆ ಇಲ್ಲ ಎಂದು ಕಡ್ಡಾಯವಾಗಿ ಅಲ್ಲಿನ ಸರ್ಕಾರ ನೀತಿ ರೂಪಿಸಿತು. ಅಲ್ಲದೆ, ಪಾರಂಪರಿಕ ಕಟ್ಟಡಗಳು ಹಾಗೂ ಪ್ರಮುಖ ತಾಣಗಳಲ್ಲಿ ಬೇಕಾಬಿಟ್ಟಿ ಚಿತ್ರೀಕರಣ ನಡೆಸಲು ಆಗದಂತೆ ನೋಡಿಕೊಳ್ಳಲಾಯಿತು. ಆದರೆ, ಕರ್ನಾಟಕದಲ್ಲಿ ವಿಶ್ವ ಪಾರಂಪರಿಕಾ ಪಟ್ಟಿಯಲ್ಲಿರುವ ಹಂಪಿಯಲ್ಲಿ ಅನುಮತಿ ಇಲ್ಲದೆ ಚಿತ್ರೀಕರಣವೊಂದು ನಡೆದಿರುವ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದೆ.

ತಮಿಳುನಾಡಿನಲ್ಲಿ ಇನ್ನೂ ಒಂದು ನಿಯಮ ಪಾಲಿಸಲಾಗುತ್ತಿದೆ. ಸೆನ್ಸಾರ್ ನಿಂದ 'ಯು' ಪ್ರಮಾಣಪತ್ರ ಪಡೆದ ಚಿತ್ರಗಳನ್ನು ಮಾತ್ರ ಅನುದಾನಕ್ಕೆ ಪರಿಗಣಿಸಲಾಗುತ್ತಿದೆ. ದೊಡ್ಡ ಸ್ಟಾರ್ ಗಳಿದ್ದರೂ 'ಎ' ಪ್ರಮಾಣ ಪತ್ರ ಚಿತ್ರವಾದರೆ ಸರ್ಕಾರದ ಸೌಲಭ್ಯಗಳು, ತೆರಿಗೆ ವಿನಾಯತಿ ಸಿಗುವುದಿಲ್ಲ. ನಮ್ಮಲ್ಲೂ ಈ ನಿಯಮ ಪಾಲಿಸಲು ಸಾಧ್ಯವೇ?

ಪ್ರಶಸ್ತಿ ವಿವಾದ: ಚಲನಚಿತ್ರ ಪ್ರಶಸ್ತಿ ವಿವಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದ ನಂತರ ಸರ್ಕಾರಕ್ಕೆ ಈ ಪತ್ರ ತಲುಪಿದ್ದು, ಭಾಷಾ ಮೌಲ್ಯವನ್ನು ಕಾಪಾಡುವ ಹಾಗೂ ಸೃಜನಶೀಲತೆಯನ್ನು ಕಾಯ್ದುಕೊಳ್ಳುವ ಚಿತ್ರಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.

ಅದೇ ರೀತಿ ಟಿವಿ ಧಾರಾವಾಹಿಗಳ ಮೇಲೂ ನಿಯಂತ್ರಣ ಅಗತ್ಯ. ಟಿವಿ ಕಲಾವಿದರ ಅಸೋಸಿಯೇಶನ್ ಗೆ ಸರ್ಕಾರ ಈಗಾಗಲೇ 2 ಕೋಟಿ ಸಹಾಯಧನ ನೀಡಿದ್ದು ಅದು ಸದ್ಬಳಕೆಯಾಗುತ್ತಿದೆಯೇ? ಎಂಬ ಬಗ್ಗೆ ನಿಗಾ ವಹಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಒಬ್ಬ ಕಲಾವಿದನಾಗಿಯೂ ನಾನು ಈ ಬಗ್ಗೆ ಸ್ಪಂದಿಸಬೇಕಿದೆ. ಸಂದರ್ಭ ಬಂದರೆ ಇಂಗ್ಲಿಷ್ ಹಾಗೂ ಅನ್ಯ ಭಾಷಾ ಶೀರ್ಷಿಕೆ, ಸದಭಿರುಚಿ ಇಲ್ಲದ ಚಿತ್ರಗಳಲ್ಲಿ ಅಭಿನಯಿಸದೇ ಇರುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ ಎಂಬ ದಿಟ್ಟ ನಿಲುವು ತಾಳೆದಿರುವುದು ಸ್ವಾಗತಾರ್ಹ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Development Authority chief Mukhyamantri Chandru's letter to CM Siddaramaiah is welcomable. MM Chandru writes about making provision for exempting entertainemnt tax for Kannada films having titles in words from the Kannada language only
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more