ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರ : ಕರ್ನಾಟಕಕ್ಕೆ ಮುಂದೆ ಒಳ್ಳೆ ದಿನಗಳು ಬರಲಿವೆ

By Prasad
|
Google Oneindia Kannada News

ಇನ್ನು ಮುಂದೆ ಸನ್ಮಾನ್ಯ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ಒಳ್ಳೆ ಸರ್ಕಾರ ಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗೇನಾದರು ವಿಫಲರಾದರೆ ಸರ್ಕಾರದ ಕಿವಿ ಹಿಂಡಲು ಹಾಗೂ ಸರಿದಾರಿಗೆ ತರಲು ವಿಪಕ್ಷನಾಯಕರಾಗಿ ಮಾನ್ಯ ಕುಮಾರಸ್ವಾಮಿಯವರು ಸಮರ್ಥರಾಗಿರುತ್ತಾರೆ. ಒಟ್ಟಿನಲ್ಲಿ ಕರ್ನಾಟಕಕ್ಕೆ ಮುಂದೆ ಒಳ್ಳೆ ದಿನಗಳು ಬರಲಿವೆ. ಜೈ ಕರ್ನಾಟಕ. [ಸಿದ್ದು ವಿರುದ್ಧ ಕುಮಾರಸ್ವಾಮಿ]

ನಟರಾಜ

***
ಕುಮಾರಸ್ವಾಮಿ ಅವರೇ ಸಿದ್ದು ಅವರ ಚರಿತ್ರೆಯನ್ನು ತೆರೆದಿಟ್ಟ ನಿಮಗೆ, ನಿಮ್ಮ ಚರಿತ್ರೆ ಬಗ್ಗೆ ನಮಗೆ ಅರಿವಿದೆ? ನೀವು ಮತ್ತು ನಿಮ್ಮ ತಂದೆ ಅವರು ಎಷ್ಟು ಜನರಿಗೆ ಕೈ ಕೊಟ್ಟಿದಿರಿ ಅಂತ ಕರ್ನಾಟಕದ ಜನಕೆ ಗೊತ್ತು. ಮೊದಲು ನಿಮ್ಮ ಚರಿತ್ರೆಯನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಇನ್ನೊಬರ ಚರಿತ್ರೆ ಬಗ್ಗೆ ಮಾತನಾಡಲು ನೀವೇನು ಆದರ್ಶ ಪುರುಷರಲ್ಲ. There is an old saying "Caesar's wife must be above suspicion". The associates of public figures must not even be suspected of wrongdoing. [ಕಾಂಗ್ರೆಸ್ ಬೆನ್ನಿಗೂ ಚೂರಿ]

ಇನ್ ಸೈಟ್

***
ಕರ್ಣಾಟಕದಲ್ಲಿ ಬ್ರಾಹ್ಮಣರು ಪ್ರಮುಖವಾಗಿ ಕನ್ನಡ ಅಥವಾ ತುಳು ಮಾತನಾಡುವ ಮಾಧ್ವರು ಹಾಗೂ ಶುಕ್ಲಯಜುರ್ವೇದೀಯ ಕಣ್ವ ಶಾಖೀಯ ಮಾಧ್ವರು (ಶ್ರೀ ಮಧ್ವಾಚಾರ್ಯರ ಅನುಯಾಯಿಗಳು), ಮತ್ತು ಸ್ಮಾರ್ತರು (ಶ್ರೀ ಶಂಕರಾಚಾರ್ಯರ ಅನುಯಾಯಿಗಳು) ಎಂದು ಪ್ರಮುಖವಾಗಿ ವಿಂಗಡಿತವಾಗಿದ್ದು, ಸ್ಮಾರ್ತರು ಮತ್ತೂ ವಿಂಗಡಿತಗೊಂಡು ಹವಿಗನ್ನಡ ಮಾತನಾಡುವ ಹವ್ಯಕರು, ಕನ್ನಡ ಮಾತನಾಡುವ ಹೊಯ್ಸಳಕರ್ಣಾಟಕರು, ತುಳು ಮಾತನಾಡುವ ಶಿವಾಲಿ ಮತ್ತು ಸ್ಥಾನಿಕ ಬ್ರಾಹ್ಮಣರು, ಕನ್ನಡ ಮಾತನಾಡುವ ಕೋಟಾ ಬ್ರಾಹ್ಮಣರು, ಮರಾಠಿ ಮಾತನಾಡುವ ಕರ್ಹಾಡ ಬ್ರಾಹ್ಮಣರೆಂದು ವಿಂಗಡಿಸಲಾಗಿದ್ದು, ಎಲ್ಲರೂ ತಮ್ಮದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ. ಕರ್ಣಾಟಕದ ಇತರ ಪ್ರಮುಖ ಬ್ರಾಹ್ಮಣ ಪಂಗಡವೆಂದರೆ ಹೆಬ್ಬಾರ್ ಶ್ರೀವೈಷ್ಣವರು. ಹೆಬ್ಬಾರ ಶ್ರೀವೈಷ್ಣವರು ಪುರಾತನ ತಮಿಳು ಮತ್ತು ಕನ್ನಡದ ವಿಶಿಷ್ಟ ಮಿಶ್ರಣವಾದ ಭಾಷೆಯಲ್ಲಿ ಮಾತನಾಡುತ್ತಾರೆ. ಮುಂಚಿನ ದಿನಗಳಲ್ಲಿ ಅವರು ಹಾಸನ ಜಿಲ್ಲೆಯ ಬೇಲೂರು, ಶಾಂತಿಗ್ರಾಮ, ನುಗ್ಗೇಹಳ್ಳಿ, ನೊಣವಿನಕೆರೆ, ಬಿಂಡಿಗನವಿಲೆ ಪಟ್ಟಣಗಳು ಮತ್ತು ಹಿರೇಮಗಳೂರಿಗೆ ಸೀಮಿತವಾಗಿದ್ದರು (ಈ ಎಲ್ಲವೂ ಕಾವೇರಿ
ನದಿಗುಂಟ ದಕ್ಷಿಣ ಕನ್ನಡದಲ್ಲಿದೆ). ವೈಷ್ಣವರ ಗುರುವಾದ ಆಚಾರ್ಯ ಶ್ರೀ ರಾಮಾನುಜರೊಡನೆ ತಮಿಳು ನಾಡಿನಿಂದ ವಲಸೆ ಬಂದ ಶ್ರೀವೈಷ್ಣವರ ವಂಶಜರೇ ಹೆಬ್ಬಾರರು ಎಂದು ನಂಬಲಾಗಿದೆ. He is no different from fanatic RSS gang today! [ದೊಡ್ಡ ಕೊಲೆಪಾತಕಿ]

ಸುಮನ್

***
ಸ್ಪಾಟ್ ಫಿಕ್ಸಿಂಗ್ ನಿಂದ ಇಡೀ ಭಾರತದ ಕ್ರೀಡಾಲೋಕದ ಸ್ಥಾನಮಾನ ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ದುಡ್ಡಿಗಾಗಿ ದೇಶದ ಮರ್ಯಾದೆ ತೆಗೆದಿದ್ದಾರೆ. ಇವರಿಗೆ ಕಠಿಣ ಶಿಕ್ಷೆ ಅಗಬೇಕು. ಅದನ್ನ ನೋಡಿ ಬೇರೆ ಆಟಗಾರರು ಮುಂದೆ ಇಂಥ ನೀಚ ಕೆಲಸಕ್ಕೆ ಕೈ ಹಾಕೋದಿಲ್ಲ. ಆಟ ನಡೆಯುವಾಗ ಬಿಸಿಸಿಐ ಎಲ್ಲಾ ಆಟಗಾರರ ಮೇಲೆ ಒಂದು ಕಣ್ಣು ಇಡಬೇಕಿತ್ತು. ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂಗಾಗಿದೆ. ಮುಂದಾದರು ಎಚ್ಚೆತ್ತುಕೊಂಡು ನಿಯಮಗಳನ್ನು ರೂಪಿಸಬೇಕು. [ಸ್ಪಾಟ್ ಫಿಕ್ಸಿಂಗ್ ನಡೆದದ್ದು ಹೇಗೆ?]

ಜ್ಞಾನೇಶ್

***

Good days are ahead of Karnataka
ಗೋ ಹತ್ಯೆ ಒಂದು ಹೀನ ಕೃತ್ಯ. ನಾವು ಅಹಿಂಸೆ ಇಷ್ಟಪಡುತ್ತೇವೆ. ನಾವು ಪಶು ಪ್ರಾಣಿಗಳನ್ನು ಸಾಕಿದ್ದೇವೆ. ಹಳ್ಳಿಯ ರೈತರಂತೆ, ಗ್ರಾಮೀಣ ಜನರಂತೆ ಬಿಜೆಪ ಮತ್ತು ಸ್ವಯಂಸೇವಕರು ಗೋವನ್ನು ದತ್ತು ಪಡೆದು ಸಾಕಿ ದೇಶಕ್ಕೆ ಮಾದರಿಯಾಗಲಿ. ಕೇವಲ ಹೇಳಿಕೆಯಿಂದ ಗೋವು ಕಾಪಾಡುವುದು ಕಷ್ಟ. ಬನ್ನಿ ಗೋ ಸಾಕೋಣ ಅನ್ಯರಿಗೆ ಮಾದರಿಯಾಗೋಣ. ಯಾವುದನ್ನೂ ರಾಜಕೀಯ ಮಾಡಿದರೆ ಸಾಮರಸ್ಯ ಹಾನಿ ಆಗುತದೆ. [ಗೋಹತ್ಯೆ ವಿರುದ್ಧ ಪ್ರತಿಭಟನೆ]

ಸ್ವಾಮಿ ಕೆಬಿಕೆ

***
ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ, ಎದೆಗೆ ಒದ್ದರಂತೆ ಅನ್ನೋ ಹಾಗೆ ಆಯಿತು ಇದು. ಭಾ.ಜ.ಪ.ವೂ ಕೂಡ ಇನ್ನೊಂದು ಕಾಂಗ್ರೆಸ್ ಆಗುವ ಎಲ್ಲ ಲಕ್ಷಣಗಳು ಕಾಣಿಸ್ತಾ ಇವೆ. ಸ್ಪಷ್ಟೀಕರಣ ಕೇಳಿದಕ್ಕೆ ಈ ರೀತಿ ಮಾಡಬಾರದಿತ್ತು. ಒಂದು ಸಾಂವಿಧಾನಿಕ ಸಂಸ್ಥೆ ಯಾವತ್ತೂ ಈ ರೀತಿ ಮಾಡುವುದಿಲ್ಲ. ಇದು ಒಂದು ರೀತಿ "ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ" ಅನ್ನೋ ಥರ. ಏನೇ ಮಾತನಾಡಿದರೂ ಜೇಠ್ಮಲಾನಿ ಅವ್ರ ಮೇಲೆ ಯಾವುದೇ ಕ್ರಮ ತೆಗುದುಕೊಳ್ಳದ ಹಲ್ಲಿಲ್ಲದ ಭಾ.ಜ.ಪ. ಹೈ-ಕಮಾಂಡ್ ಲೆಹರ್ ಸಿಂಗ್ ಮೇಲೆ ಆತುರಾತುರವಾಗಿ ಕ್ರಮ ತೆಗೆದುಕೊಂಡಿರುವುದನ್ನು ನೋಡಿದರೆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲವೆಂದು ತೋರುತ್ತಿದೆ. [ಅಡ್ವಾನಿಗೆ ಲೆಹರ್ ಸಿಂಗ್ ಪತ್ರ]

ನಾಗರಾಜ

English summary
Letters to the editor. Oneindia-Kannada reader Nataraj is happy that Siddaramaiah has become CM and good days are ahead of Karnataka. In another mail Jnanesh feels that cow slaughter should be stopped as every Indian worships holy cow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X