ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಬರವಣಿಗೆಗೆ ಸ್ಫೂರ್ತಿ ಯಾರು? ಜೋಗಿ ಕೇಳ್ತಿದ್ದಾರೆ

By Prasad
|
Google Oneindia Kannada News

Jogi
ಆತ್ಮೀಯರೇ,

ಸಾಹಿತ್ಯ, ಕಲೆ, ಸೃಜನಶೀಲತೆಯ ಆರಂಭಿಕ ನೆಲೆಗಳ ಕುರಿತು ತರುಣ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂಥ ಕಿರುಹೊತ್ತಿಗೆಯೊಂದನ್ನು ಹೊರತರುವ ಆಲೋಚನೆ ನನ್ನದು. ಹಲವಾರು ಶಾಲೆ ಮತ್ತು ಕಾಲೇಜುಗಳಿಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿದಾಗ, ಅವರಲ್ಲಿ ಸಾಹಿತ್ಯ ರಚನೆಯ, ಓದುವ ಕುರಿತು ಅಪಾರ ಆಸಕ್ತಿ ಇರುವುದು ಗೋಚರವಾಯಿತು.

ಆದರೆ ಎಲ್ಲರಲ್ಲೂ ಕೆಲವೊಂದು ಗೊಂದಲಗಳಿವೆ. ಹೇಗೆ ಬರೆಯಬೇಕು, ಬರವಣಿಗೆಗೆ ಪ್ರೇರಣೆ ಏನು, ಯಾವುದನ್ನು ಓದಬೇಕು, ಎಲ್ಲಿಂದ ಆರಂಭಿಸಬೇಕು, ಪರಂಪರೆಯ ಲೇಖಕರು ಮುಖ್ಯವಾ, ಸಮಕಾಲೀನ ಲೇಖಕರನ್ನೇ ಓದಬೇಕಾ, ಎಷ್ಟು ಓದಬೇಕು, ಪದ್ಯವನ್ನು ಓದುವುದು ಹೇಗೆ, ಸಣ್ಣಕತೆಗೂ ಕಿರುಕತೆಗೂ ನೀಳ್ಗತೆಗೂ ಕಾದಂಬರಿಗೂ ಏನು ವ್ಯತ್ಯಾಸ- ಇವೇ ಮುಂತಾದ ಪ್ರಶ್ನೆಗಳನ್ನು ಅವರು ಕೇಳುತ್ತಲೇ ಇರುತ್ತಾರೆ. ಅವರ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಪುಸ್ತಕ ನೆರವಾದೀತೇನೋ ಎಂಬ ನಂಬಿಕೆಯೊಂದಿಗೆ ಅಂಥದ್ದೊಂದು ಕೃತಿಯ ರಚನೆಗೆ ಕೈ ಹಾಕಿದ್ದೇನೆ.

ಇದಕ್ಕೆ ತಮ್ಮ ಸಹಕಾರ ಬೇಕು. ಅನೇಕರು ನಮ್ಮ ಹಿರಿಯ ಲೇಖಕರು ಯಾವಾಗ ಬರೆಯಲು ಆರಂಭಿಸಿದರು, ಅವರಿಗೆ ಸ್ಪೂರ್ತಿ ಆದದ್ದೇನು, ಅವರನ್ನು ಪ್ರೋತ್ಸಾಹಿಸಿದವರು ಯಾರು, ಮೊದಲು ಬರೆಯಲು ಶುರುಮಾಡಿದಾಗ ಅವರ ಆತ್ಮವಿಶ್ವಾಸ ಹೇಗಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ತೀವ್ರ ಕುತೂಹಲ ಹೊಂದಿದ್ದಾರೆ. ನನ್ನ ಕೃತಿಯ ಎರಡನೆಯ ಭಾಗದಲ್ಲಿ ಕನ್ನಡದ ಪ್ರಮುಖ ಲೇಖಕರು ತಮ್ಮದೇ ಮಾತಿನಲ್ಲಿ ತಮ್ಮ ಆರಂಭದ ದಿನಗಳ ಬರವಣಿಗೆಯ ಬಗ್ಗೆ ಹೇಳಿದ ಮಾತುಗಳು ಇರುತ್ತವೆ.

ನೀವು ನಿಮ್ಮ ಬರವಣಿಗೆಯ ಪ್ರೇರಣೆ, ಸ್ಪೂರ್ತಿ, ನೀವು ಬರೆಯಲು ಆರಂಭಿಸಿದ ಕ್ಷಣದ ಖುಷಿ, ತಲ್ಲಣ, ಎದುರಿಸಿದ ಸವಾಲುಗಳ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಬರೆದುಕೊಡಲು ಸಾಧ್ಯವೇ? ಅದು ನನ್ನ ಪುಸ್ತಕದ ಎರಡನೆಯ ಹಾಗೂ ಬಹುಮುಖ್ಯವಾದ ಭಾಗವಾಗಿ ಬರುತ್ತದೆ. ಇದು ತರುಣ ಮತ್ತು ಉದಯೋನ್ಮುಖ ಲೇಖಕರಿಗೆ ಸ್ಪೂರ್ತಿಯ ಸೆಲೆಯಾಗುತ್ತದೆ ಎಂಬುದು ನನ್ನ ಅನಿಸಿಕೆ.

ಪದಗಳ ಮಿತಿಯಿಲ್ಲ. ನಿಮ್ಮ ಅನುಭವವನ್ನು ದಯವಿಟ್ಟು ಬರೆದು ಕಳುಹಿಸಿದರೆ ಅನುಕೂಲ ಮತ್ತು ಸಂತೋಷ. ಪುಸ್ತಕ ಸೆಪ್ಟೆಂಬರ್ 16ರಂದು ಬಿಡುಗಡೆ ಆಗುತ್ತದೆ. ಅಂಕಿತ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸುತ್ತಿದೆ. ದಯವಿಟ್ಟು ಆಗಸ್ಟ್ 31ರ ಒಳಗೆ ತಲುಪುವಂತೆ ಕಳುಹಿಸಿಕೊಡಲು ಸಾಧ್ಯವೇ?

ಬರೆಯುವ ಒತ್ತಡ ಇದ್ದರೆ ದಯವಿಟ್ಟು ತಿಳಿಸಿ. ನೀವು ಮಾತಾಡಿದರೂ ಸಾಕು. ನಾನೇ ಬಂದು ಅದನ್ನು ಬರೆದುಕೊಳ್ಳುತ್ತೇನೆ. ಪ್ರೀತಿಯಿಟ್ಟು ಒಪ್ಪಿಕೊಳ್ಳಬೇಕಾಗಿ ವಿನಯದಿಂದ ಕೇಳಿಕೊಳ್ಳುತ್ತಿದ್ದೇನೆ.

ವಿಶ್ವಾಸದಿಂದ,

ಜೋಗಿ [ಈಮೇಲ್ : [email protected]]

English summary
Who inspired you to write? What made you a successful writer? Share your experience with writer Jogi (Girish Rao). The last date to send your write up is 31st August, 2012. So, hurry up, take pen and let your mind roll on the paper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X