ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಲೇಖನಗಳಿಗೆ ಓದುಗರ ವಸ್ತುನಿಷ್ಠ ಪ್ರತಿಕ್ರಿಯೆ

By Prasad
|
Google Oneindia Kannada News

Letters to the editor
ಅವನು ಅವಳ ಮನೆಯಲ್ಲಿ 2 ಗಂಟೆ ಇರಲು ಕಾರಣ ಏನು? ಆ 2 ಗಂಟೆಯಲ್ಲಿ ಅವನು ಮಾಡಿದ್ದಾದರೂ ಏನು? ಅವಳು ಅವನನ್ನು ಮನೆಗೆ ಕರೆದದ್ದಾದರು ಯಾಕೆ? ವೀಕ್ಷಿಸಿ ಒಂದು ಬ್ರೇಕ್ ನ ನಂತರ. ಇವೆ ನಮ್ಮ ಚಾನೆಲ್ ನ ಪ್ರಮುಖ ವಿಷಯಗಳು. ಸಮಾಜದಲ್ಲಿ ನೂರಾರು ಸಮಸ್ಯೆಗಳಿವೆ. ಅದೆಲ್ಲ ಬಿಟ್ಟು ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡೋ ನ್ಯೂಸ್ ಚಾನಲ್ ಗಳಿಂದ ಸಾರ್ವಜನಿಕರಿಗೆ ಯಾವ ಪ್ರಯೋಜನ ಇಲ್ಲ. ಇಂಥ ಹೊಲಸು ಚಾನಲ್ ಗಳನ್ನು ಮೊದಲು ರದ್ದು ಮಾಡಬೇಕು. ಹಸಿವು, ಬಡತನ, ಬರ, ನೀರು, ಉದ್ಯೋಗ, ಆರೋಗ್ಯ, ವಿದ್ಯಾಭ್ಯಾಸ, ನಿರುದ್ಯೋಗ ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಾಮಾಣಿಕ ವಾಹಿನಿಗಳ ಅವಶ್ಯಕತೆ ಖಂಡಿತ ಇದೆ. [ಭೂಕಂಪ ಮತ್ತು ಮಾಧ್ಯಮ]
* ಚಂದ್ರು

***
ಇವನಿಗೆ (ಜಿಕೆ ಗೋವಿಂದರಾವ್) ಕಾಂಗ್ರೆಸ್ ಸರ್ಕಾರದಿಂದ ಪದ್ಮಶ್ರೀ ಕೊಡಲಿ ಅಂತ ಅವರನ್ನು ಖುಷಿ ಪಡಿಸಲು ಈ ಥರದ ಹೇಳಿಕೆ ಕೊಡ್ತಾನೆ. ಇವನಿಗೆ ಬುದ್ದಿ ಜೀವಿ ಅಂತ ಕರೆದವನು ಯಾವನೋ ಪಾಪಿ? ಮನೆಯಲ್ಲಿ ಆರಾಮಾಗಿ ಆರಾಮ ಚೇರ್ ನಲ್ಲಿ ಕುಳಿತು ಮಾತನಾಡುವ ನಿನಗೆ ಮೋದಿ ಬಗ್ಗೆ ಮತನಾಡಲು ಯೋಗ್ಯತೆ ಇದೆಯಾ? ನಿಮ್ ಮನೆ ಬೀದಿಯಲ್ಲಿ ನಿನ್ನ ಹೇಳಿಕೆಗಳನ್ನು ಎಷ್ಟು ಜನ ಬೆಂಬಲಿಸುತಾರೆ ಅಂತ ಒಂದು ಸಾರಿ ನೋಡು. [ರವಿಶಂಕರ್ Vs ಜಿಕೆ ಗೋವಿಂದರಾವ್]
* ಕನ್ನಡಿಗ

***

ಸರ್, ನನ್ನ ಬಗ್ಗೆ ಚೆನ್ನಾಗಿ analyse ಮಾಡಿದ್ಧೀರ. ನಂಗೆ ನಿಜವಾಗಲೂ ಮೂವತ್ತು ರೂಪಾಯಿ ಆನ್ಸರ್ ಗೊತ್ತಿಧ್ರೂ ಆ ಹಾಟ್ ಸೀಟ್ ಅಲ್ಲಿ ಹಾಗೆ ತಲೇನೆ ಬ್ಲಾಂಕ್ ಆಗೋಯ್ತು. Lifeline ಅನ್ನೋ ಪದಾನೂ ಬಾಯಿಂದಾ ಹೊರಡಲೇ ಇಲ್ಲ. ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಅಲ್ಲಿ ನಾನು 4 secondalli ಆನ್ಸರ್ ಮಾಡಿದವಳಿಗೆ ಈ question ಕಷ್ಟಾನ? ನನ್ನ nextu 6 ಸೆಕೆಂಡು 6 ಸೆಕೆಂಡು ಮಾಡಿದ ಇಬ್ರು ಇದ್ರೂ ಆ 8 ಜನ ಕಾಂಟೆಸ್ಟಂಟ್ಸ್ ಅಲ್ಲಿ.... I am definitely capable. ನಿಮ್ಮ ಪೋಸ್ಟ್ ನೋಡಿ ನನ್ನ ಮನಸಿಗೆ ಸಮಾಧಾನ ಆಯಿತು ಸರ್.. ತುಂಬ ಥ್ಯಾಂಕ್ಸ್ :)..... [ಕನ್ನಡದ ಕೋಟ್ಯಾಧಿಪತಿ]
* ಶ್ರೀವಿದ್ಯಾ

***
ಸಂಘಪರಿವಾರಕ್ಕೆ ಶಾಲೆಗಳಲ್ಲಿ ಮಕ್ಕಳ ಮನಸ್ಸನ್ನು ಹಾಳು ಮಾಡುವ ಭಗವದ್ಗೀತೆ ಹಾಗೂ ಚರಿತ್ರೆ ಬೇಕು: ಈ ಥರ ಹೇಳೋದಿಕ್ಕೆ ಯಾವ ಕ್ರಿಸ್ತ ಮಿಷಿನರಿ ಹೇಳಿಕೊಟ್ಟಿದೆ ಈ ರಾವ್ ಗೆ ಒಂದು ವೇಳೆ ಇವರ ಸ್ವ ಬುಧ್ಧಿಯಿಂದ ಹೇಳಿದ್ರೆ ಇವರನ್ನ ಬುಧ್ಧಿವಂತರು, ವಿಚಾರವಂತರು ಎಂದು ಹೇಳುವವರು ಮೂರ್ಖರು. ನಾಲ್ಕು ಜನರ ಚಪ್ಪಾಳೆಗೆ ತಾಯಿಯನ್ನು ಬೇಕಾದರೂ ಆಡಿಕೊಳ್ಳುವ ಕೇವಲ ಬುಧ್ಧಿಯ ಇಂಥವರಿಗೆ ಧಿಕ್ಕಾರವಿರಲಿ. [ಜಿಕೆಗೋ ವಿರುದ್ಧ ತಿರುಗಿಬಿದ್ದ ಓದುಗ]
* ಸುಬ್ಬು

***
ರಾಹುಲ್ ಹೇಗೆ ತಾನು ಬ್ರಾಹ್ಮಣ ಎಂದು ಹೇಳಿಕೊಂಡಿದ್ದಾನೆ ಎಂಬುದು ವಿವಾದಾಸ್ಪದ. ರಾಹುಲ್ ತಂದೆ ರಾಜೀವ್ ಗಾಂಧಿ ಪಾರ್ಸಿ(ಫಿರೋಜ್ ಗಾಂಧಿ)ಯ ಮಗ. ಅಂದರೆ ರಾಹುಲ್ ತಂದೆ ಪಾರ್ಸಿ, ತಾಯಿ ಇಟಲಿಯವಳು. ಅದ್ದರಿಂದ ರಾಹುಲ್‌ಗೆ ಪಾರ್ಸಿ ತಂದೆ ಇಟಲಿ ತಾಯಿ. ರಾಹುಲ್ ಬ್ರಾಹ್ಮಣನಲ್ಲ. ಅಂತರ್ಜಾತೀಯ ವಿವಾಹ ಸಂಬಂಧದಿಂದ ಹುಟ್ಟಿದವ. ತಂದೆಯ ಜಾತಿಯಿಂದ ಜಾತಿ ಗುರುತಿಸುವುದು. ಆದ್ದರಿಂದ ಸರ್ವಥಾ ರಾಹು ಬ್ರಾಹ್ಮಣನಾಗಿ ಗುರುತಿಸಿಕೊಳ್ಳುವುದು ಸತ್ಯಕ್ಕೆ ದೂರ ಮತ್ತು ಅಸಮಂಜಸ. ರಾಜೀವ್ ಸಹ ತಂದೆಯ ವಂಶವಾದ ಪಾರ್ಸಿ ಆದರಿಂದ ಅವರೂ ಬ್ರಾಹ್ಮಣರಲ್ಲ. [ರಾಹುಲ್ ಬ್ರಾಹ್ಮಣನಲ್ಲವೆ?]
* ಕನಮೇಡಿ

***
ಇಂತಹ ಜನಪರ ಕಾಳಜಿಯ ಸುದ್ಧಿಗಳನ್ನು ಪ್ರಕಟಿಸುತ್ತಲೇ ಇರಿ ! ಇದರಿಂದಾಗಿ ಸಮಾಜದ ಕೊಳೆಯನ್ನು ಸ್ವಲ್ಪ ಮಟ್ಟಿಗಾದರೂ ತೊಳೆದಂತಾಗುವುದು! [ರಸ್ತೆ ಬದಿಯ ಗ್ರೀಸ್ ಬಾಯ್ಸ್ ಕಥಾನಕ]
* ಮಂಜುನಾಥ ತೇಲ್ಕರ್

English summary
Letters to the editor : Thanks to all the readers who have sent valuable responses to the articles published. The browsers have responsed many articles including write ups on earthquake, controversy surrounding GK Govinda Rao, Kannadada Kotyadhipati etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X