• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓದುಗರ ಓಲೆ : ಹ್ಯಾಟ್ಸ್ ಆಫ್ ಡಾಕ್ಟರ್ ಅನಂತಮೂರ್ತಿ!

By Prasad
|

ಹ್ಯಾಟ್ಸ್ ಆಫ್ ಡಾಕ್ಟರ್ ಅನಂತಮೂರ್ತಿ.. ಈಗಿನ ಸಮಾಜಕ್ಕೆ ನಿಮ್ಮಂಥ ಬುದ್ಧಿಜೀವಿಗಳ ನಾಯಕತ್ವ ಅವಶ್ಯಕವಿದೆ. ಸಂಘ ಪರಿವಾರದ ಕುಮ್ಮಕ್ಕುಗಳನ್ನು ಹತ್ತಿಕ್ಕಲು ನಾವೆಲ್ಲಾ ಒಂದಾಗೋಣ ಹಾಗು ಅಂತಹ ಕ್ಯಾನ್ಸರ್ ನಮ್ಮ ದೇಶದಿಂದ ಹೊರಗೆ ಹಾಕುವ ತನಕ ಪಣ ತೊಟ್ಟು ಕೆಲಸ ಮಾಡೋಣ. ನಮ್ಮ ದೇಶ ಎಷ್ಟೊಂದು ಅಧೋಗತಿಗೆ ಸಾಗುತ್ತಿದೆ. ಇಲ್ಲಿ ಇದುವರೆಗೆ ಬಂದ ಕಾಮೆಂಟ್ಸ್ ಒಂದು ಸರಿ ನೋಡಿದ್ರೆ, ನಮ್ಮ ದೇಶದಲ್ಲಿ ಸಂಘಪರಿವಾರದ ಏಜೆಂಟ್ಗಳು ತುಂಬ ಎಲರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ದೇವರೇ ಕಾಪಾಡಬೇಕು ನಮ್ಮ ಕರ್ನಾಟಕ ಹಾಗೂ ನಮ್ಮ ಭಾರತ ದೇಶವನ್ನ.

* ಓಮರ್

***

ಇವನಿಗೆ (ಯುಆರ್ ಅನಂತಮೂರ್ತಿಗೆ) ಅಸ್ಸಾಂನಲ್ಲಿ ಆಗಿರೋ ಗಲಾಟೆ ಬಗ್ಗೆ ಮಾತಾಡೋಕ್ಕೆ ಆಗೋಲ್ಲ. ಯಾಕಂದ್ರೆ ಅಲ್ಲಿ ಇರೋದು ಕಾಂಗ್ರೆಸ್ ಗವರ್ನಮೆಂತ್ ಅದಕ್ಕೆ. ಮೊನ್ನೆ ಅಷ್ಟೇ ಆದ ಮುಂಬೈ ಗಲಾಟೆ ಬಗ್ಗೆ ಮಾತಾಡೋಣ ಅಂದ್ರೆ ಅಲ್ಲಿ ಇರೋದು ಕಾಂಗ್ರೆಸ್ ಗವರ್ನ್ಮೆಂಟ್. ಅಲ್ಲದೆ ಅಲ್ಲಿ ಗಲಾಟೆ ಮಾಡಿದ್ದು ಇವರೇ ಕಳಸಿದ ಜೀಹಾದಿ ಮುಸ್ಲಿಮರೆ! ಪಾಪ! ಕಾಶ್ಮೀರದಲ್ಲಿ ಹುಡುಗಿ ಬುರ್ಖಾ ಹಾಕದೆ ಹೋದರೆ, ಮೊಬೈಲಿನಲ್ಲಿ ಮಾತಾಡಿದರೆ ಆಸಿಡ್ ಹಾಕುತ್ತೇವೆ ಅಂದವರು ಇವರ ಹುಡುಗರೇ ಅಲ್ವ ಸರ್? ಪಾಪ ಎಷ್ಟಾದ್ರೂ ಇವರ ಬುದ್ದಿ ಮಂಕಾಗಿದೆ! ಜನರು ನೀವ್ ಏನ್ ಹೇಳಿದ್ರು ನಂಬಿ ಬಿಡ್ತಾರೆ ಅಂತಾನ? ಖಂಡಿತ ಇಲ್ಲಪ್ಪ! ಕಾಲ ಬದಲಾಗುತ್ತೆ ಸರ್! [ಮಂಗಳೂರು ದಾಳಿ : ಯುಆರ್‌ಎ ಕಿಡಿನುಡಿ]

* ಪ್ರಕಾಶ್

***

ಹೇ ಜೀವಗಳ ಒಲವೆ ಹೇ ಭಾವಗಳ ವನವೇ ನೀವಿರದೆ ನಾನಿಲ್ಲ ನಾನಿರದೇ ನೀವಿಲ್ಲ ಪ್ರೀತಿ ನನ್ನ ಹೆಸರು.... ನೆನಪಿರಲಿ ನೆನಪಿರಲಿ.... ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ ಒಂಟಿ ಪ್ರೇಮಿಯಲ್ಲ ಹೂವು ದುಂಬಿ ಹಾಡು ಅದು..... ನೆನಪಿರಲಿ ನೆನಪಿರಲಿ..... ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ ಬರಿ ಮುತ್ತು ಅಲ್ಲ ಕಾಣಿಸದ ಕಾವ್ಯ ಅದು.... ನೆನಪಿರಲಿ ನೆನಪಿರಲಿ..... ಹಂಸಲೇಖಗೆ ಹಂಸಲೇಖರೇ ಸಾಟಿ.. ನೆನಪಿರಲಿ... ನೆನಪಿರಲಿ. [ಇಂದಿನ ಸಂಗೀತ ನಿರ್ದೇಶಕರಲ್ಲಿ ಯಾರು ಬೆಸ್ಟ್?]

* ಶ್ರೀನಿವಾಸ್

***

ಚೋರ ನಿಂದಿಸಿ ಶಶಿಯ ಬೈದರೆ, ಕ್ಷೀರವನು ಕ್ಷಯರೋಗಿ ಅಳಿದರೆ ವಾರನಸಿಯ ಹೆಳವ ನಿಂದಿಸಿ ನಕ್ಕರೆನಹುದು ಮುಂತಾಗಿ ಕುಮಾರ ವ್ಯಾಸ ಭಾರತದ ಫಲ ಶೃತಿ ಹೇಳುತ್ತದೆ. ಅಂತೆಯೇ ಕತ್ತೆಗೇನು ಗೊತ್ತು ಕಸ್ತೂರಿ ಬೆಲೆ ಎಂಬಂತೆ ಕೆಲಸಕ್ಕೆ ಬಾರದವರು ನಿಂದಿಸಿ ಸಂಶಯ ಪಟ್ಟರೆ ಏನಾಯಿತು? ಅದರ ಬಗ್ಗೆ ಒಲವು ಮತ್ತು ಸಾಧನೆ ಮಾಡುವ ಮನಸ್ಸಿನವರಿಗೆ ವಿಷ್ಣು ಸಹಸ್ರನಾಮ ಪರಮಾತ್ಮ ಒಲಿದು ಇಹ ಪರ ಎರಡರಲ್ಲೂ ಉತ್ತಮ ಗತಿ ಕರುಣಿಸುತ್ತಾನೆ. ಮತ್ತೆ, ಇಂಗ್ಲಿಷ್ ನಲ್ಲಿ ದಯಮಾಡಿ ಪಾರಾಯಣೆ ಮಾಡಲು ಹೋಗಬೇಡಿ. ನಿಮ್ಮ ನಿಮ್ಮ ಮಾತೃ ಭಾಷೆಯಲ್ಲೇ ಪಾರಾಯಣ ಮಾಡಿರಿ. ದೇವನಾಗರಿ ಬಾರದವರು ನಿಮ್ಮ ಮಾತೃ ಭಾಷೆ ಉಪಯೋಗಿಸಿ. [ವಿಷ್ಣುಸಹಸ್ರನಾಮ ಸ್ತೋತ್ರ]

* ಕೇ.ಮೂ.

***

ಅವರಿಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಖಾಸಗಿಯಾಗಿ ಚುಂಬಿಸಿದ್ದಾರೆ. ಅದನ್ನು capture ಮಾಡಿ ನೆಟ್ಟಿಗೆ ಹಾಕಿದ್ದು ಬೇರೆ ಯಾರದ್ದೋ ತಪ್ಪು. ಅಷ್ಟಕ್ಕೂ ಒಪ್ಪಿಗೆಯಿಂದ ಚುಂಬಿಸಿದರೆ ಯಾರ ಗಂಟೇನು ಹೋಗುತ್ತೆ? ಸುಮ್ನೆ ಯಾಕೆ ಅವರ ಮರ್ಯಾದೆ ತೆಗೀತೀರ?[ವೈ ದಿಸ್ ಚುಂಬನ ಕೊಲವೆರಿ ಡಿ?]

* ಅನಿರುದ್ಧ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Letter to the editor. Readers lambast as well as appreciate Dr. U.R. Ananthamurthy for his comment against attack on youth in Mangalore. Few readers say, media is making much about music director Aniruddh and actor Andrea kissing incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more