ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಬ್ಬಿಂಗ್ ಬೇಕೋ ಬೇಡವೋ : ಚರ್ಚೆ ಮುಂದುವರಿಯಲಿ

By Prasad
|
Google Oneindia Kannada News

Dubbing : To allow or not : Debate continues
ಬಾಲಿವುಡ್ ನಟ ಅಮೀರ್ ಖಾನ್ ಅವರ 'ಸತ್ಯಮೇವ ಜಯತೆ' ಹಿಂದಿ ಕಾರ್ಯಕ್ರಮ ಕನ್ನಡಕ್ಕೆ ಡಬ್ ಆಗಿ ಬರುತ್ತಿರುವ ಹಂತದಲ್ಲಿ ಕರ್ನಾಟಕದಲ್ಲಿ ಡಬ್ಬಿಂಗ್‌ಗೆ ಅವಕಾಶ ನೀಡಬೇಕೋ ಬೇಡವೋ ಎಂಬ ಚರ್ಚೆ ಮತ್ತೆ ಆರಂಭವಾಗಿದೆ. ಡಿಸ್ಕವರಿ, ಪೋಗೋದಂತಹ ಚಾನಲ್‌ಗಳಲ್ಲಿ ಬರುವ ಅತ್ಯುತ್ತಮ ಕಾರ್ಯಕ್ರಮಗಳು ಇತರೆ ಭಾಷೆಯಲ್ಲಿ ಡಬ್ ಆಗುತ್ತಿರುವಾಗ, ಡಬ್ಬಿಂಗ್ ಭೂತದಿಂದಾಗಿ ಇಂತಹ ಕಾರ್ಯಕ್ರಮಗಳಿಂದಾಗಿ ಕನ್ನಡಿಗರು ವಂಚಿತರಾಗುತ್ತಿದ್ದಾರೆ. ಹಾಗೆಯೆ, ಡಬ್ಬಿಂಗ್‌ಗೆ ಅವಕಾಶ ನೀಡಿದರೆ ಕನ್ನಡ ಚಿತ್ರರಂಗಕ್ಕೆ ಭಾರೀ ಹೊಡೆತ ಬೀಳುತ್ತದೆ ಎಂಬ ಕೂಗನ್ನು ಚಿತ್ರರಂಗವೇ ಎಬ್ಬಿಸಿದೆ.

ಡಬ್ಬಿಂಗ್ ಬೇಕೋ ಬೇಡವೋ ಎಂಬುದು ಎಂದೂ ಮುಗಿಯಲಾಗದ ಚರ್ಚೆ. ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. ಕನ್ನಡದ ಹಿತಾಸಕ್ತಿಗೆ ಧಕ್ಕೆಯಾಗದಂತೆ ನಿರ್ಧಾರ ತಳೆಯುವುದು ಇನ್ನೂ ಸಾಧ್ಯವಾಗಿಲ್ಲ. ಇದರ ಪರವಾಗಿ ಮತ್ತು ವಿರೋಧವಾಗಿ ಅನೇಕ ಅಭಿಪ್ರಾಯಗಳನ್ನು ನಮ್ಮ ಓದುಗರೂ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕೆಲ ಆಯ್ದ ಪತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಚರ್ಚೆ ಮುಂದುವರಿಯಲಿ. [ಡಬ್ಬಿಂಗ್ ಕುರಿತಾದ ಎಲ್ಲ ಲೇಖನಗಳು ಇಲ್ಲಿವೆ]

***

ಪ್ರಿಯ ಸಂಪಾದಕರೆ,

ಡಬ್ಬಿಂಗ್ ಕನ್ನಡಕ್ಕೆ ಪೂರಕವೇ ಹೊರತು ಮಾರಕವಲ್ಲ. ತನ್ನ ನಾಡಿನಲ್ಲಿ ತನ್ನ ನುಡಿಯಲ್ಲಿ ಮನರಂಜನೆಯನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬನ ಹಕ್ಕು. ಡಬ್ಬಿಂಗ್ ನಿಷೇಧ ಎಂಬ ಗುಮ್ಮ ಕನ್ನಡಿಗರಿಗೆ ಮನರಂಜನೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವ ಈ ಹಕ್ಕನ್ನು ಕಸಿದುಕೊಳ್ಳುತ್ತಲಿದೆ. ಇಷ್ಟಕ್ಕೂ, ಇಂಗ್ಲಿಷ್ ಚಿತ್ರಗಳು ರಾಜ್ಯದಲ್ಲಿ ಹಿಂದಿ, ತಮಿಳು, ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗುತ್ತಿಲ್ಲವೇ? ಇಂಗ್ಲಿಷ್ ಚಿತ್ರಗಳು ಪರಭಾಷೆಗಳಿಗೆ ಡಬ್ ಆದಾಗ ಧ್ವನಿ ಎತ್ತದವರು ಕನ್ನಡಕ್ಕೆ ಡಬ್ ಆಗುವ ಸೂಚನೆ ಸಿಕ್ಕ ತಕ್ಷಣ ವಿರೋಧಕ್ಕೆ ನಿಲ್ಲುತ್ತಾರೆ. ಇದನ್ನು ಕನ್ನಡಪರವಾದ ನಿಲುವು ಎನ್ನಲು ಹೇಗೆ ಸಾಧ್ಯ?

ಡಬ್ಬಿಂಗ್ ನಿಷೇಧದಿಂದ ಇಂದು ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಲು ಕನ್ನಡದ ಮಕ್ಕಳು ಬೇರೆ ಒಂದು ಭಾಷೆಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಭಾಷೆಯನ್ನು ಜನರಿಂದ ದೂರವಿಡುವುದು ಆ ಭಾಷೆಯ ಬೆಳವಣಿಗೆಗೆ ಹೇಗೆ ಸಹಕಾರಿಯಾಗಬಲ್ಲದು? ಡಬ್ಬಿಂಗಿನಿಂದ ಕನ್ನಡ ಮನರಂಜನೆಯ ವ್ಯಾಪ್ತಿ ಹೆಚ್ಚಾಗಲಿದೆ. ಒಳ್ಳೆಯ ಮನರಂಜನೆ, ಮಾಹಿತಿ, ವಿಜ್ಞಾನದ ವಿಷಯಗಳಿಗಾಗಿ ಬೇರೊಂದು ಭಾಷೆಯನ್ನು ಅವಲಂಬಿಸುವುದು ತಪ್ಪುತ್ತದೆ.

ಇಂದು ರಾಜ್ಯದ ಮೂಲೆ ಮೂಲೆಯಲ್ಲೂ ಪಸರಿಸುತ್ತಿರುವ ಪರಭಾಷೆ ಹಾವಳಿ ಕಡಿಮೆಗೊಳ್ಳುತ್ತದೆ. ಡಬ್ಬಿಂಗಿನಿಂದ ಸೃಷ್ಟಿಯಾಗುವ ಸ್ಪರ್ಧೆಯಿಂದ ಗುಣಮಟ್ಟ ಹೆಚ್ಚುತ್ತದೆ. ಮನರಂಜನೆ ಮೂಲಕ ಕನ್ನಡ ವಾತಾವರಣ ನಿರ್ಮಾಣವಾಗುತ್ತದೆ. ಇನ್ನಾದರೂ ಡಬ್ಬಿಂಗ್ ವಿರೋಧಿಗಳು ತಮ್ಮ ಅಭಿಪ್ರಾಯವನ್ನು ಬದಲಿಸಿ ಡಬ್ಬಿಂಗ್ ನೀತಿಯನ್ನು ಒಪ್ಪಿಕೊಳ್ಳಲಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆರು ಕೋಟಿ ಕನ್ನಡಿಗರು ಅವರನ್ನು ಕ್ಷಮಿಸುವುದಿಲ್ಲ.

* ಅಕ್ಷಯ, ಯಶವಂತಪುರ, ಬೆಂಗಳೂರು.

***

Dear Editor,

Kannada version of the most anticipated theme song of Aamir Khan's upcoming tv show "Satyamev Jayate" has come up very well. Unfortunately Kannadigas are deprived from watching this programme in their mother tongue Kannada due to Ban.

Today various channels are telecasting their programme in several languages but not in Kannada in Karnataka. KFI, instead of banning or imposing cap on dubbing other Lang films/programs, must try to improve and raise their standards and compete with them.

In our kannada film industries some personalities are being very selfish and they are driving industry as they want. They are ruling kannada audience. Dubbing Ban has isolated Kannada language. We all must raise our voice for removing this Undemocratic Dubbing Ban from Karnataka.

* Jayanth S, Begur Post, Bengaluru

***

ಕರ್ನಾಟಕದಲ್ಲಿ ಪರಭಾಷಾ ಸಿನೆಮಾಗಳ ಡಬ್ಬಿಂಗ್ ಬೇಡ. ಆದರೆ ಹಾಲಿವುಡ್ ಟಿವಿ ಚಾನೆಲ್ ಗಳನ್ನೂ ಕನ್ನಡದಲ್ಲಿ ಪ್ರಕಟಿಸಲಿ. ನ್ಯಾಷನಲ್ ಜಿಯೋಗ್ರಪಿಕ್, ಡಿಸ್ಕವರಿ, ಎಚ್ ಬಿ ಓ, ಕಾರ್ಟೂನ್ ನೆಟ್ವರ್ಕ್, ಪೋಗೋ, ಹಿಸ್ಟರಿ ಇನ್ನಿತರ ಚಾನೆಲ್ ಗಳನ್ನೂ ಕನ್ನಡದಲ್ಲಿ ಪ್ರಾರಂಬಿಸಲಿ. ಅದೇ ರೀತಿ ಗೂಗಲ್ ನ್ಯೂಸ್, ಫೇಸ್ಬುಕ್.. ಇನ್ನಿತರ ಅಂತರ್ಜಾಲವನ್ನು ಕನ್ನಡದಲ್ಲಿ ಪ್ರಾರಂಬಿಸಿ. ಇಲ್ಲವಾದರೆ ಕನ್ನಡ ಮನೋರಂಜನಾ ಜಗತ್ತು ನಶಿಸಿ ಹೋಗುತ್ತದೆ. ಅದಕ್ಕೆ ಕನ್ನಡಿಗರೇ ಹೊಣೆಗಾರರಾಗುತ್ತಾರೆ.

* ಕನ್ನಡಿಗರು

***

ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾ ಬೇಡ ಅನ್ನೋದು ಯಾವ್ದೋ ಲಾಭದ ಉದ್ದೇಶಕಲ್ಲ. ಬೇರೆ ರಾಜ್ಯಕ್ಕೆ ಹೋಲಿಸಿದರೆ ಕನ್ನಡದಲ್ಲಿ ಚಿತ್ರ ಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರು ಕಡಿಮೆ ಮತ್ತೆ ಚಿತ್ರಮಂದಿರಗಳೂ ಕಡಿಮೆ. ಈಗಾಗಲೇ ಬೇರೆ ಭಾಷೆ ಚಿತ್ರಗಳು ಕರ್ನಾಟಕದಲ್ಲಿ ತುಂಬಾ ಒಳ್ಳೆ ಪ್ರದರ್ಶನ ಕಾಣುತ್ತಿವೆ. ಡಬ್ಬಿಂಗ್ rights ಕೊಡೋದ್ರಿಂದ ಕನ್ನಡ ಚಿತ್ರಗಳಿಗೆ ಖಂಡಿತವಾಗಿ ಹೊಡೆತ ಬಿಳುತ್ತೆ ಮತ್ತು low budget ಚಿತ್ರಗಳಿಗೆ ಟೀವಿ rightsನಲ್ಲೂ ಒಳ್ಳೆ ದುಡ್ಡು ಬರೋಲ್ಲ. ನೇರವಾಗಿ ಡಬ್ಬಿಂಗ್ ಒಪ್ಪಿಕೊಳ್ಳೋದು ಕಷ್ಟ. ಒಂದು ಮಾತು ನಿಜ ಕನ್ನಡ ಅವತಾರ್ ನಂಥ ಬಿಗ್ ಚಿತ್ರಗಳನ್ನ ಮಿಸ್ ಮಡ್ಕೊಳುತ್ತೆ.

* ಅರುಣ್

English summary
Should dubbing be allowed in Karnataka or not? Never ending debate continues. The question of allowing or not allowing dubbing has arisen when Aamir Khan's Satyameva Jayate program is about to be telecast in Kannada also. Let the debate continue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X