ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿ ಸ್ವಾಮಿ, ಕದಿರೇನಹಳ್ಳಿ ಅಂಡರ್ ಪಾಸ್ ಹಾಗೆ ಇದೆ?

By * ರಾಮನಾಥ್ , ಪದ್ಮನಾಭನಗರ
|
Google Oneindia Kannada News

Kadirenahalli Underpass
ಕದಿರೇನಹಳ್ಳಿ ಅಂಡರ್ ಪಾಸ್ ಈ ವರ್ಷದ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸನ್ಮಾನ್ಯ ಮುಖ್ಯಮಂತ್ರಿ ಡಿವಿ ಸದಾನಂದಗೌಡರೇ ನೀವು ಭರವಸೆ ನೀಡಿ ಎರಡು ತಿಂಗಳಾಯ್ತು. ಅಂಡರ್ ಪಾಸ್ ಮಾತ್ರ ಹೇಗಿತ್ತೋ ಹಾಗೆ ಇದೆ.

ಅಂಡರ್ ಪಾಸ್ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿರುವ ಗುತ್ತಿಗೆದಾರರಿಗೆ 80 ಲಕ್ಷ ರು. ದಂಡ ವಿಧಿಸಿದ್ದೀರಾ. ಇದರಿಂದ ನಮಗೆ ಬಂದ ಭಾಗ್ಯ ಏನು? ಗುತ್ತಿಗೆದಾರ ಇನ್ನಷ್ಟು ಕಾಲ ಕಾಮಗಾರಿ ಮುಂದೂಡುತ್ತಾ ದಂಡ ಕಟ್ಟುತ್ತಾ ಇರುತ್ತಾನೆ. ಸಾರ್ವಜನಿಕರ ನಿತ್ಯದ ಪರದಾಟ ಮುಂದುವರೆದಿದೆ.

ವಾಹನ ದಟ್ಟಣೆ ಹಾಗೂ ಇನ್ನಿತರ ಅಡಚಣೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿರುವುದು ಎಷ್ಟು ಸರಿ? ಕಾಮಗಾರಿ ಯೋಜನೆ ಹಾಕುವ ಮೊದಲೇ ಇಲ್ಲಿನ ವಾಹನ ದಟ್ಟಣೆ, ಸರ್ಕಾರಿ ಜಾಗ ಕಬಳಿಕೆ ಬಗ್ಗೆ ಬಿಬಿಎಂಪಿಗೆ ಗೊತ್ತಿರಲಿಲ್ಲವೆ? ಕಾಮಗಾರಿ ವಿಳಂಬಕ್ಕೆ ಮಾತ್ರ ವಾಹನ ದಟ್ಟನೆ ಅಡಚಣೆ ಉಂಟು ಮಾಡುತ್ತಿದೆಯೇ?

ಅಂಡರ್ ಪಾಸ್ ಕಾಮಗಾರಿ ಈಗಾಗಲೇ ಶೇ. 80 ರಷ್ಟು ಪೂರ್ಣಗೊಂಡಿದ್ದರೆ, ಉಳಿದ ಕಾಮಗಾರಿ ಪೂರೈಸಲು ಇನ್ನೂ ಎರಡು ವರ್ಷ ಬೇಕೇ?

ಕನಕಪುರ ರಸ್ತೆಯ ಭಾಗದಿಂದ ತಡೆಗೋಡೆ ನಿರ್ಮಾಣ ಕಾರ್ಯ ಸುಮಾರು ಎರಡು ವರ್ಷಗಳ ಹಿಂದೆ ಪೂರ್ಣಗೊಂಡಿದೆ. ಆದರೆ, ಅಂಡರ್ ಪಾಸ್ ಕಾರ್ಯ ಮಾತ್ರ ವರ್ಷಗಟ್ಟಲೇ ಕುಂಟುತ್ತಾ ಸಾಗಿದೆ. ಯಾವಾಗ ಮುಗಿಯುವುದೋ ಸರ್ಕಾರಕ್ಕೂ ಗೊತ್ತಿಲ್ಲ ಎನಿಸುತ್ತದೆ.

English summary
CM DV Sadananda Gowda's promise becomes false. Gowda promised Kadirenahalli underpass on Gowdanapalya Main Road will be open for public latest by march end 2012. Imposing fine on the contractor by BBMP will not solve public problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X