ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಅಂದ್ರೆ ಬೆಲೆ ಏರಿಕೆ ಪಟ್ಟಿನಾ? ಅಜ್ಜಿ ಪ್ರಶ್ನೆ

By * ಇಆರ್ ರಾಮಚಂದ್ರನ್, ಮೈಸೂರು
|
Google Oneindia Kannada News

Political satire on Budget
ಅಜ್ಜಿ ಟೀವಿ ನೋಡ್ತಿದ್ದವ್ರು ಮುಖಾ ಸಿಂಡ್ರಿಸ್ಕೊಂಡ್ರು.

'ಯಾಕಜ್ಜಿ, ಏನಾಯ್ತು?'

'ಅಲ್ವೋ! ಎಲ್ಲಾ ಬಜೆಟ್ ನಲ್ಲೂ ಈಥರಾ ಬೆಲೆ ಏರಿಸಿದರೆ ನಮ್ಮ ಗತಿ ಏನಾಗ್ಬೇಕು?'

'ಏನಾಯ್ತಜ್ಜಿ?'

'ಬಜೆಟ್ ಅಂದ್ರೇ ಬೆಲೆ ಜಾಸ್ತಿ ಆಗ್ಬೇಕು ಅಂತಾ ಅರ್ಥಾನಾ? ನಿನ್ನೆ ನಮ್ಮ ಸಾಫ್ಟ್ ವೇರ್ ಸೀತಮ್ಮ ಹೇಳ್ತಾ ಇದ್ರೂ.. ಯಾವ್ದೋ ಎಕ್ಸರ್‍ಚೈಸ್ ಡ್ಯೂಟಿ ಅಂತೆ.. ಅದನ್ನು ಜಾಸ್ತಿ ಮಾಡಿದಾರೆ ಅದರಿಂದ ಎಲ್ಲಾ ಬೆಲೇನೂ ಏರುತ್ತೇ ಅಂತ..'

'ಏಕ್ಸರ್‍ಸೈಸ್ ಅಲ್ಲಾಅಜ್ಜಿ.. ಎಕ್ಸೈಜ್ ಡ್ಯೂಟಿ... ತಯಾರಿಸಿದ ಸಾಮಾನುಗಳ ಮೇಲೆ ಹಾಕುವ ತೆರಿಗೆ'.

'ಏನೋ ಸುಡುಗಾಡು..ಈ ಥರಾ ತೆರಿಗೆ ಹೇರಿಸಿದ್ರೆ ನಮ್ಮ ಜೀವನ ಹೇಗೆ ಸಾಗ್ಬೇಕು? ಎಲ್ಲಾ ಬೆಲೆ ಆಗಲೇ ಆಕಾಶಕ್ಕೆ ಏರಿ ಕೂತಿದೆ. ಎಲ್ಲಾ 'ಸಾಫ್ಟ್ವೇರ್' ಬೆಲೆ ಆಗ್ಬಿಟ್ಟಿದೆ..'

'ಹಾಗಂದ್ರೆ?'

'ಮಂಕೇ! ಬರೀ ಸಾಫ್ಟ್ವೇರ್ ನಲ್ಲಿ ಕೆಲಸಾ ಮಾಡೋವ್ರುಗೆ ಕೊಂಡ್ಕೋಳಕ್ಕಾಗುತ್ತೆ ಈ ದುಬಾರಿ ಬೆಲೆ. ಬೇರೆ ಯಾರಿಗೆ ಆಗುತ್ಹೇಳು. ಅವ್ರು ಇನ್ನೊಂದು ಹೇಳ್ತಿದ್ದರು.. ಬೆಂಗಳೂರಿನ ವೈಟ್ ಫೀಲ್ಡ್ ನಿಂದ ಮೈಸೂರಿಗೆ ಪ್ರತಿಗಂಟೆಗೂ ಹೆಲಿಕಾಫ್ಟರ್ ಓಡಿಸ್ಬೇಕೂ ಅಂತ ಕೇಳಿದಾರಂತೆ.......'

'ಅಜ್ಜಿ! ಬೆಂಗಳೂರಿನಲ್ಲಿ ಜಯನಗರದಿಂದ ಟಾಟಾ ಇನ್ಸ್ ಸ್ಟಿಟ್ಯೂಟ್ ಗೆ ಬಸ್ ನಲ್ಲಿ ಹೋಗೋದಕ್ಕೆ ಎರಡು ಗಂಟೆ ಆಗುತ್ತೆ. ಅಲ್ಲಿ ಕೆಲಸಾ ಮಾಡೋ ಸೈಂಟಿಸ್ಟ್ ಗಳು ಹೇಗೋ ಮಾಡ್ಕೊಂಡು ಹೋಗ್ತಾ ಇದಾರೆ... ನಮ್ಮ ಒಂಟಿಕೊಪ್ಪಲ್ ನಿಂದ ಸಿಟಿ ಬಸ್ ಸ್ಟ್ಯಾಂಡ್ ಗೆ ಅರ್ಧರ್ಧ ಗಂಟೆಗೇ ಬಸ್ಸಿರೋದು. ಆದ್ರೆ ವೈಟ್ ಫೀಲ್ಡ್ ನಿಂದ ಮೈಸೂರಿಗೆ ಪ್ರತಿಗಂಟೆಗೂ ಹೆಲಿಕಾಫ್ಟರ್ ಬೇಕೂಂತ ಕೇಳ್ತಿದಾರೇ...'

'ನಮ್ಮಲ್ಲಿ 'ಹೊಟ್ಟೇಗ್ ಹಿಟ್ಟಿಲ್ಲಾ ಜುಟ್ಗೆ ಮಲ್ಗೇಹೂವು' ಬಿಡು. ಇನ್ನೊಂದಪ್ಪಾ ಸಮಾಚಾರ. ನಮ್ಮ ಒಂಟಿಕೊಪ್ಪಲ್ನಲ್ಲಿ ಮುಂಚೆ ಬಹಳ ಕಡೇ ಮದ್ದೂರ್ ವಡೆ, ಆಂಬೊಡೆ ಮಾಡೋವ್ರು. ಒಂದೆರೆಡು ರೂಪಾಯಿಗೆ ಯಥೇಚ್ಚವಾಗಿ ಸಿಗೋದು. ಈಗ ಅವರೆಲ್ಲಾ ಎಲ್ಲೋ ಓಡೋಗ್ಬಿಟ್ಟಿದ್ದಾರೆ!

ಈಗ ಬೀದಿ ಬೀದಿಗೂ 'ಸಬ್ವೇ, ಮೆಕ್ದಾದಾ ಅಂಗಡಿಗಳು ಬಂದ್ಬಿಟ್ಟಿದೆ. ಅವರು ಬ್ರೆಡ್ ಸ್ಯಾಂಡ್ವಿಚ್ ಮಾಡ್ತಾರಂತೆ. ಇನ್ನೂರು, ಐನ್ನೂರಾಗುತ್ತೇ. ಇನ್ನು ಸ್ವಲ್ಪ ದಿನಾ ಹೋದ್ರೆ ಇವರುಗಳೆ ಮದ್ದೂರ್‍ವಡೆ ಪ್ಲೇಟ್ ಗೆ ಇನ್ನೂರು ರೂಪಾಯಿಗೆ ಮಾರ್‍ತಾರೆ.'

'ಅಜ್ಜಿ. ಅದು ವೈಟ್ ಫೀಲ್ಡ್ ನಿಂದ ಮೈಸೂರಿಗೆ ಪ್ರತಿಗಂಟೆಗೂ ಹೆಲಿಕಾಫ್ಟರ್. ಮೆಕ್ದಾದಾ ಅಲ್ಲ! ಆದ್ರೂ ಒಂದು ತರಹಾ ದಾದಾನೆ ಒಪ್ಕೊಳ್ತೀನಿ!'

'ಅದ್ಸರೀ..... ನಮ್ಮ ಹಾರ್ಡ್ ವೇರ್ ಹರಿಣಿ ಹೇಳ್ತಿದ್ರು...'

'ಅಜ್ಜಿ! ನಿನ್ ಸ್ನೇಹಿತ್ರೆಲ್ಲಾ ಕಂಪ್ಯೂಟರ್‍ನಲ್ಲೇನಾ ಇರೋದು?'

'ಇಲ್ವೋ! ಹರಿಣಿ ಗಂಡಾ ಕೊಳಾಯಿ, ಪೈಪು ಅಂಗಡಿ ಇಟ್ಟಿದ್ದಾರೆ.. ನೀನು ಮಧ್ಯೆ ತಲೆ ಹಾಕ್ಬೇಡಾ..!'

'ಇಲ್ಲಾ ಅಜ್ಜಿ! ಹೇಳು.'

'ಅವ್ರು ರಾಯ್ಚೂರು ಕಡೇವ್ರು. ಅಲ್ಲಿ ತಿನ್ನೋದಕ್ಕಿಲ್ದೆ ಸ್ಕೂಲ್ಗೆ ಹೋಗೋ ಮಕ್ಳಿಗೆ ಕೈಕಾಲುಗಳು ಹಂಚಿ ಕಡ್ಡೀ ತರಾ ಆಗಿದೆಯಂತೆ...ಐದಾರು ವರ್ಷದ ಮಕ್ಕಳು ಮೂರು ವಯಸ್ಸು ಅನ್ನೋತರಾ ಇದಾರಂತೆ..ಯೂನಿಸೆಫ್ ರಿಪೋರ್ಟು ಮಾಡೀದಾರಂತೆ.. ನಾಚಿಗೇ ಕೇಡಲ್ವಾ? ಮೊನ್ನೆ ನಮ್ಮ ರಾಜ್ಯದ ಹಿರಿಯ ರಾಜಕಾರಿಣಿ ಹುಟ್ಟಿದ ಹಬ್ಬಕ್ಕೆ ಎಮ್ಮೆಲೇ ಗಳಿಗೆ ಊಟಕ್ಕೆ ಅರವತ್ತು ಲಕ್ಷ ಖರ್ಚು ಮಾಡಿದ್ರಂತಲ್ಲೋ! ಇನ್ನು ವಾರ ಪೂರ್ತಿ ಎಷ್ಟು ಖರ್ಚು ಮಾಡಿರ್‍ತಾರಲ್ವಾ? ಮಕ್ಕಳು ಹೊಟ್ಟೆ ಮೇಲೆ ಹೊಡ್ದು ಯಾವ ಹುಟ್ಟು ಹಬ್ಬಾನೋ?!'

'ಹಾಗಿದೇ ನೋಡಜ್ಜೀ'.

'ಯಾಕೋ ಬೇಜಾರಪ್ಪ. ಒಂದು ಕಡೇ ಲೂಟಿ ಹೊಡೀತ್ತಿದ್ದಾರೆ. ಇನ್ನೊಂದು ಕಡೆ ಮಕ್ಳು ಮರಿಗಳಿಗೆ ಹೊಟ್ಟೆಗೆ ಹಿಟ್ಟಿಲ್ಲ'.

English summary
A Political Satire by ER Ramachandran on Union Budget 2012-13 and Price hike sugestion by union Finance Minister Pranab Mukherjee and UPA government. Karnataka politicians big fat birthday parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X