ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ಬಿನ ಸರಸ-ಸೌಭಾಗ್ಯ; ವಿರಸ-ವೈರಾಗ್ಯ

By * ಮಹಾಬಲ ಶಾಸ್ತ್ರಿ, ನ್ಯೂ ಯಾರ್ಕ್
|
Google Oneindia Kannada News

Internet fishing in troubled waters
ಜಿಎನ್ ಮೋಹನ್ ಹಾಗೂ ನಿಮ್ಮ ಸಮಕ್ಷಮಕ್ಕೆ,ನಿಮ್ಮ ಕಳಕಳಿ ಅನೇಕರ ಸಂವೇದನೆಯನ್ನು ಬಿಂಬಿಸುವಂತದ್ದು.

ಇಲ್ಲಿನ (ಅಂತರ್ಜಾಲದಲ್ಲಿನ) ವಿಹಾರಿಗಳು ವಿಭಿನ್ನ ರುಚಿಯುಳ್ಳವರು. ವಿಭಿನ್ನ ಹಿನ್ನೆಲೆಯುಳ್ಳವರು. ಕೆಲವರು ಸ್ಪಂದಿಸುವವರು. ಇನ್ನು ಕೆಲವರು ಸಾರಾಂಶವನ್ನು ಗ್ರಹಿಸಲಾಗದೇ ಅವರ ಬುಡವನ್ನು ಅಲ್ಲಾಡಿಸಿದ ಸಾಲುಗಳ ಸಪ್ಪಳಕ್ಕೆ ಮಾತ್ರ ಪ್ರತಿಕ್ರಿಯಿಸುವವರು.

ಕೆಲವರು ಧ್ಯೇಯವಾದದ ಬಲೆಯಲ್ಲಿ ಸಿಕ್ಕ ಪೂರ್ವಗ್ರಹಪೀಡಿತರು. ಇನ್ನು ಕೆಲವರು ಲೇಖಕನ ಬಗೆಗೆ ಅವರಿಗಿರುವ ಅಭಿಪ್ರಾಯದ ಮೇರೆಗೆ ರಾಗಕ್ರೋಧಗಳನ್ನು ಹೊಮ್ಮಿಸುವವರು. ಇನ್ನು ಕೆಲವರಂತೂ ಕುಹಕವಿದ್ಯಾವಿಶಾರದರು! ವಿನಾ ಕಾರಣ ಕಾಲೆಳೆದು ಕೀಳುಮಟ್ಟದ ದಿಢೀರ್ ತೃಪ್ತಿಯಲ್ಲೇ ಮೂಲೋಕ ಕಾಣುವವರು.

ನನ್ನ ಮತದಲ್ಲಿ ಅಂತರ್ಜಾಲವನ್ನು ಅಂಕೆಗೆ ತರುವುದು ಹೀನಾಯ ಸೋಲಿನ ಹಣೆಬರಹವನ್ನು ಪಡೆದುಕೊಂಡೆ ಹುಟ್ಟುವ ಒಂದು ದುರ್ಬಲ ಸಾಹಸದ ಕೆಲಸ.

ಮೂರನೆಯ ಅಂಶವೆಂದರೆ ಅಂತರ್ಜಾಲವು ಉಸಿರಾಡುವ ಗಾಳಿಯಂತೆ ಎನ್ನುವ ಅರ್ಥದಲ್ಲಿ ಯಾರ ಸೊತ್ತೂ ಅಲ್ಲ. ಎಲ್ಲರೂ ಭಾಗವಹಿಸಬಹುದಾದ, ತಮ್ಮ ಅನಿಸಿಕೆಗಳನ್ನು ಅವರವರ ಭಾವಕ್ಕೆ ತಕ್ಕಂತೆ ರಾಗ ರಂಗುಗಳೊಂದಿಗೆ ಹಂಚಿಕೊಳ್ಳಬಹುದಾದ ಒಂದು ಮಿಂಚಿನ ವೇಗದ ಮಾಧ್ಯಮ.

ಇಲ್ಲಿನ ಬೇಹುಗಾರರು ಯಾವ ಪತ್ರಿಕೋದ್ಯಮ ಶಾಲೆಗಳಲ್ಲೂ ತರಬೇತಿ ಪಡೆದ ಮತ್ತು ಅಭಿವ್ಯಕ್ತಿಯಲ್ಲಿ ಪರಿಪಕ್ವತೆಯನ್ನೂ, ಸಮತೋಲನವನ್ನೂ ತೋರುವ, ಲೋಕಾಪವಾದಕ್ಕೆ-ಅಂಜುವ ವಿರೋಧಾಭಾಸಗಳನ್ನ (politically incorrect) ಸಮಯೋಚಿತವಾಗಿ ತುಂಬಬಲ್ಲ ಕುಶಲತೆ ಅಥವಾ ಆತಂಕವಿರುವ ವೃತ್ತಿಪರರಲ್ಲ.

ಅದ್ದರಿಂದ ಅಂತರ್ಜಾಲದ ಸ್ವರೂಪ ಅರಿತವರಿಗೆ ಅಂತರ್ಜಾಲ-ಜನಿತ ಸರಸ-ಸೌಭಾಗ್ಯಗಳೂ ವಿರಸ-ವೈರಾಗ್ಯಗಳೂ ಮುಕ್ತ ಅಭಿವ್ಯಕ್ತಿಯ ಸಮರಸಗಳಂತೆ ಕಾಣುತ್ತವೆ. ಪಾಪಿಗಳ ಪೀಡನೆಯನ್ನು ರಸಾಭಾಸದಂತೆ ಪರಿಗಣಿಸದೇ ಗುಲಾಬಿಗಿಡದ ಮುಳ್ಳುಗಳಂತೆ ನೋಡುವ ಅಭ್ಯಾಸ ಅಂತರ್ಗತವಾಗಿಬಿಡುತ್ತದೆ.

ಒಟ್ಟಾರೆ ಇದು ನನ್ನ ಅನಿಸಿಕೆ! ನಿಮ್ಮ ವಿಶ್ವಾಸಿ, ಮಹಾಬಲ ಶಾಸ್ತ್ರಿ.

English summary
Has internet become a fishing pond for the Shallow? Why people love to fish in troubled waters? Letter to Kannada Oneindia by Mahabala Shastri in NY. The letter in response to article written by GN Mohan about desilting Kannada blogs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X