ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಟಾರ್ಗೆಟ್ ಸಂತೋಷ್ ಹೆಗ್ಡೆ ಅಲ್ವಂತೆ

By * ಶ್ರೀಧರ ಕೆದಿಲಾಯ, ಉಡುಪಿ
|
Google Oneindia Kannada News

BS Yeddyurappa
* ಗಣಿ ವರದಿ-1ರಲ್ಲಿ ಜೀಜಾ ಹರಿಸಿಂಗ್, ಧರಂ ಸಿಂಗ್ 23 ಕೋಟಿ ಲೂಟಿದ್ದಾರೆ ಎಂದು ವರದಿ ನೀಡಿದರು. ರಾಜ್ಯಪಾಲರು ವರದಿ ತರೆಸಿಕೊಂಡು ವಿಥ್ ಡ್ರಾ ಮಾಡಿದರು. ರಾಜ್ಯಪಾಲರು ವಿತ್ ಡ್ರಾ ಮಾಡಿದರೂ ಚೆಕ್ ಮೇಟ್ ಮಾಡೋಕೆ ನಿಮ್ಮ ಸರ್ಕಾರಕ್ಕೆ ಶಕ್ತಿ ಇರಲಿಲ್ಲವೇ? ವರದಿ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಸಚಿವ ಸಂಪುಟಕ್ಕೆ ಇಲ್ಲವೇ? ಉತ್ತರ ಸಿಗಲಿಲ್ಲ.

* ಕೃಷ್ಣ ಅವರ ಅಕ್ರಮ ಗಣಿಗಾರಿಕೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನಾನು ಏನು ಹೇಳಿಲ್ಲ ಅಂದರು. ಕೊನೆಗೆ ಬೇರೆಯವರ ಬಗ್ಗೆ ದೂರುವುದನ್ನು ನಿಲ್ಲಿಸಿದ್ದೇನೆ ಎಂದರು. ದೂರಿದರೆ ಯಾರೂ ನಂಬುವುದಿಲ್ಲ. ಅಗತ್ಯ ದಾಖಲೆ ಒದಗಿಸಿದರೆ ಮಾತ್ರ ನಂಬಬಹುದು ಅಲ್ಲವೇ?.

ಹಳೆ ಮುಖ್ಯಮಂತ್ರಿಗಳು ಡಿನೋಟಿಫಿಕೇಷನ್ ಬಗ್ಗೆ ತೆಗೆದರೆ ಸಾವಿರಾರು ಎಕರೆ ಭೂಮಿಯ ಅಕ್ರಮ ಹೊರಬರುತ್ತೆ. ಆ ಕೆಲಸ ಯಾರಾದರೂ ಮಾಡಲಿ ನಾನು ಮಾಡೋಲ್ಲ. ಎಂದು ಸುಮ್ಮನಾದರು.

* ಇತರರ ಬಗ್ಗೆ ಏನು ಹೇಳಲಾರೆ ನಾನು ಸಚ್ಚಾರಿತ್ರ್ಯವಂತ ಎಂದು ನಿರೂಪಿಸಲು ವಕೀಲರುಗಳು ರಚಿಸಿರುವ ಪುಸ್ತಕ ಇದೆ ಅದನ್ನು ಎಲ್ಲಾ ಬುದ್ಧಿಜೀವಿಗಳಿಗೂ, ಮಾಧ್ಯಮದವರಿಗೂ ನೀಡುತ್ತೇನೆ ಆಮೇಲೆ ನನ್ನ ತಪ್ಪು ನಿರ್ಧಾರವಾಗಲಿ ಎಂದರು.

[ಸುವರ್ಣ ವಾಹಿನಿ ಸಂದರ್ಶನದ ವಿಡಿಯೋ ನೋಡಿ: ಭಾಗ 1 | ಭಾಗ 2 | ಭಾಗ 3 | ಭಾಗ 4 | ಭಾಗ 5 | ಭಾಗ 6]

ಜೈಲಿಗೆ ಕಳಿಸಿದ್ದು ಯಾರು?: ಲೋಕಾಯುಕ್ತರು ರಾಜೀನಾಮೆಗೆ ಸೂಚಿಸಬಹುದು ಅಷ್ಟೇ. ಪ್ರೇರಣಾ ಟ್ರಸ್ಟ್ 10 ಕೋಟಿ ರು ಕೊಟ್ಟಿರೋದು ಸತ್ಯ. ಅದರಲ್ಲಿ ಅಕ್ರಮ ಇಲ್ಲ. ಊಹೆಯ ಆಧಾರದ ಮೇಲೆ ವರದಿ ರಚಿಸಿ ನನ್ನ ಹೆಸರು ಸೇರಿಸಿದ್ದಾರೆ ಎಂದರು. ಆದರೆ, ಪಕ್ಷಕ್ಕೆ ಮುಜುಗರವಾಗ ಬಾರದು ಎಂದು ನಾನು ರಾಜೀನಾಮೆ ನೀಡಿದೆ.

ಸಾಮಾನ್ಯ ವ್ಯಕ್ತಿಗೆ ನೋಟಿಸ್ ನೀಡಿ ಏಕೆ ಹೀಗೆ ಆಗಿದೆ ಎಂದು ಕೇಳುತ್ತಾರೆ. ಆದರೆ ನನ್ನ ವಿಷಯದಲ್ಲಿ ಅವರು(ಸಂತೋಷ್ ಹೆಗ್ಡೆ) ಅಧಿಕಾರದಿಂದ ಕೆಳಗಿಳಿಯಲು ಎರಡು ದಿನ ಮುಂಚಿತವಾಗಿ ರಾಜ್ಯಪಾಲರ ಅನುಮತಿ ಪಡೆದುಕೊಂಡಿದ್ದು ಏಕೆ? ಎಂದು ಪ್ರಶ್ನಿಸಿದರು.

ಜಿಂದಾಲ್ ಕಂಪನಿ ಗಣಿಗಾರಿಕೆ ಮಾಡ್ತಾ ಇಲ್ಲ, ಎಕ್ಸ್ ಪೋರ್ಟ್ ಮಾಡ್ತಾ ಇಲ್ಲ. ಆದರೂ ನನ್ನ ಹೆಸರು ಪ್ರಸ್ತಾಪಿಸಿದ್ದು ಏಕೆ ಎಂದು ಮತ್ತೊಮ್ಮೆ ಪ್ರಶ್ನಿಸಿದರು. ಆದರೆ, ಜೈಲಿಗೆ ಸೇರಿದ್ದು ಸಿರಾಜಿನ್ ಬಾಷಾ ಅವರ ಖಾಸಗಿ ದೂರಿನ ಮೇಲೆ ಎಂಬುದನ್ನು ಒಪ್ಪಿಕೊಂಡ ಯಡಿಯೂರಪ್ಪ, ಗಣಿ ವರದಿ ಕೂಡಾ ಜೈಲಿಗೆ ಕಳಿಸಲು ಸ್ಫೂರ್ತಿ ಆಗಿದೆ ಎಂದರು.

ವರದಿಯ ಬಗ್ಗೆ ನಾನು ಲೋಪ ಹುಡುಕ್ತಾ ಇಲ್ಲ. ನನ್ನ ಹೆಸರು ತಂದಿದ್ದು ಏಕೆ. ಕುಟುಂಬದವರು ನಾನು ಬೇರ್ಪಟ್ಟು 12 ವರ್ಷ ಆಯ್ತು. ಟೆಲಿಫೋನ್ ಟ್ಯಾಪಿಂಗ್ ಆರೋಪ ಮಾಡುವ ಹೆಗ್ಡೆ ಅದರ ಬಗ್ಗೆ ತನಿಖೆ ನಡೆಸಲು ಯಾಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದರು. ಸಂದರ್ಶನ ತುಂಬಾ ಹೆಗ್ಡೆ ಅವರನ್ನು ಹೊಗಳುತ್ತಲೆ ಅವರು ಕೈಗೊಂಡ ಕ್ರಮವನ್ನು ಪ್ರಶ್ನಿಸಿದ ಯಡಿಯೂರಪ್ಪ ಅಸಲಿಗೆ ಜೈಲಿಗೆ ಹೋಗಿದ್ದು ಖಾಸಗಿ ದೂರಿನ ಮೇಲೆ ಎಂಬುದನ್ನು ಮರೆಸಿಬಿಟ್ಟರು.

English summary
Suvarna news Channel carried a former CM BS Yeddyurappa's interview with an intend to reveal his political future. Though Yeddyurappa admitted BJP internal crisis, refused to reveal his future plans but said he is clean and remain in BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X