ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧವೆಯರಿಗೆ ಕುಂಕುಮ ಕೊಟ್ರೆ ಉದ್ಧಾರ ಸಾಧ್ಯನಾ?

By * ಎಂ ಸುಕುಮಾರ ಶೆಟ್ಟಿ, ಮಂಗಳೂರು
|
Google Oneindia Kannada News

Poojary kudroli widows act
ವೈಧ್ಯವ್ಯದ ಕಾರಣದಿಂದ ಮಹಿಳೆಯರು ಅನುಭವಿಸುವ ಅಮಾನುಷ ಸಾಮಾಜಿಕ ಬಹಿಷ್ಕಾರದ ನೋವಿಗೆ ಜನಾರ್ದನ ಪೂಜಾರಿಯವರು ಸ್ಪಂದಿಸಿರುವುದು ಮೆಚ್ಚುವಂಥದ್ದು. ಆದರೆ ಸಾಮಾಜಿಕ ಸಮಸ್ಯೆಗೆ ಧಾರ್ಮಿಕ ಪರಿಹಾರ ಹುಡುಕಿರುವುದು ಬಾಣಲೆಯಿಂದ ಬೆಂಕಿಗೆ ಬೀಳುವಂತಿದೆ.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಮಾತ್ರವಲ್ಲದೆ ಇತರ ಧರ್ಮೀಯ ಮಹಿಳೆಯರೂ ಭಾಗವಹಿಸಿರುವುದು ಸಮಸ್ಯೆಯ ವ್ಯಾಪಕತೆಯನ್ನೂ ಸೂಚಿಸಿದಂತೆ ಮಾರ್ಮಿಕವಲ್ಲ ಪರಿಹಾರದ ಅಗತ್ಯಕ್ಕೆ ಒತ್ತು ನೀಡಿದೆ.

ಪತಿಯನ್ನು ಕಳೆದುಕೊಂಡವರನ್ನು ಕೆಲವು ಸಮುದಾಯಗಳಲ್ಲಿ ಸಹಗಮನ ಮಾಡಿಸಿ, ತಲೆಬೋಳಿಸಿ, ಅಲಂಕಾರ ಅಳಿಸಿ, ಬಹಿಷ್ಕರಿಸಿ ನೋಯಿಸುತ್ತಿರುವ ಪದ್ಧತಿಗಳಿಂದ ಇಂದು ಸಾಕಷ್ಟು ಮುಕ್ತಿ ದೊರೆತಿದ್ದು ಅವರ ವೈಧವ್ಯದ ದುಃಖ, ವಿರೂಪ, ಬಹಿಷ್ಕಾರಗಳ ನೋವು,
ಅವಮಾನಗಳಿಂದ ಬಿಡುಗಡೆ ಪಡೆದು ಬಾಳಲು ಸಾಧ್ಯವಾಗಿದೆ.

ಅವರಿಗೆ ಶಿಕ್ಷಣ, ಉದ್ಯೋಗಗಳ ಸಬಿಲೀಕರಣದ ಅಗತ್ಯವಿದೆ. ಬಳೆ, ಕುಂಕುಮಗಳದಲ್ಲ.
ಅವನ್ನು ಪಡೆಯಲು ಸಮಾಜ, ಸರಕಾರಗಳು ನೆರವಾಗಬೇಕು.

ಧಾರ್ಮಿಕತೆಯ ಮೌಢ್ಯದ ತೇರನ್ನು ಎಳೆಯಲು ವಿಧವೆಯರ ಅಸಹಾಯಕತೆಯನ್ನು ಬಳಸುವುದು ಅವರ ಶೋಷಣೆಯೇ ಆಗುತ್ತದೆ.

ಕೆಲವು ಸಮುದಾಯಗಳಲ್ಲಿರುವಂತೆ ಅರಿಶಿನ ಕುಂಕುಮ ಬಳೆ ಸರ ಮೊದಲಾದವುಗಳನ್ನು ಮುತ್ತೈದೆತನ, ಧಾರ್ಮಿಕತೆಗಳ ಪವಿತ್ರ ಸಂಕೇತಗಳೆಂದು ಭಾವಿಸದೆ ಸಾಮಾನ್ಯ ಅಲಂಕಾರ
ಪರಿಕರಗಳೆಂದು ಕಾಣುವ ಮನೋಭಾವ ಬೆಳೆಸಬೇಕು.

ಮದುವೆಯಾದಾಗ ಧಾರ್ಮಿಕವಾಗಿ ಧರಿಸುವ ಮಾಂಗಲ್ಯದಂಥ ಕುರುಹನ್ನು ಪತಿಯ ನೆನಪಿನಲ್ಲಿ
ಉಳಿಸಿಕೊಳ್ಳುವ ಭಾವನಾತ್ಮಕ ಆಯ್ಕೆಯನ್ನು ಆಕೆಗೇ ಬಿಡಬೇಕು. ಅದಿಲ್ಲದೆ ಹೊಸ ಜೀವನದ ಬಗ್ಗೆ ಯೋಚಿಸುವ ಅವಕಾಶವೂ ಮುಕ್ತವಾಗಿರಬೇಕು.


ಮದುವೆಯಂಥ ವೈಯಕ್ತಿಕ, ಕೌಟುಂಬಿಕ, ಮಾನವೀಯ ಸಂಬಂಧ ಯಾವ ಕಾರಣಕ್ಕೂ
ಧಾರ್ಮಿಕತೆಯ ಮೌಢ್ಯಕ್ಕೆ ಒತ್ತೆಯಾಗಕೂಡದು.

English summary
Kudroli Gokarnanath temple witnessed 2500 widows participate in Kudroli Dasara festival and receive kumkum, bangles, sari and also tow the chariot. Is this social revolution is justifiable religous act is the solution to social problem Janardhana Poojary have to answer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X