ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ತ ಹುಡುಗಿಯೇ ದೂರು ಕೊಡಬೇಕೇ, ಪೊಲೀಸರೇ?

By * ಶಶಿಲತಾ, ಕಾರ್ಕಳ
|
Google Oneindia Kannada News

Student Saritha suicide, Kadri
ಕೆಲವು ದಿನಗಳ ಹಿಂದೆ ಕದ್ರಿ ಸಮೀಪದ ಬಾರೆಬೈಲ್ ಎಂಬಲ್ಲಿ ಪದವಿ ವಿದ್ಯಾರ್ಥಿನಿ ಸರಿತಾ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೂ ಮುಂಚೆ ತಾನು ದಿನನಿತ್ಯ ಸಂಚರಿಸುವ 14 ನಂಬರಿನ ಕಂಡಕ್ಟರ್ ತನಗೆ ಕಿರುಕುಳ ನೀಡುತ್ತಿರುವುದಾಗಿ ತನ್ನ ಗೆಳತಿಯರ ಬಳಿ ಹೇಳಿಕೊಂಡಿದ್ದಳು. ಆದರೆ ಇದೆಲ್ಲಾ ತಿಳಿದರೆ ತನ್ನ ಮನೆಮಂದಿ ಭಯಪಡುತ್ತಾರೆ, ಯಾರಲ್ಲೂ ಹೇಳಬೇಡ ಎಂದು ಹೇಳಿದ್ದರಿಂದ ಗೆಳತಿಯರು ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಆಕೆ ಆತ್ಮಹತ್ಯೆ ಮಾಡಿಕೊಂಡ ನಂತರ ಸಾವಿಗೆ ಕಾರಣ ಕಂಡಕ್ಟರ್‌ನ ಕಿರುಕುಳವೇ ಎನ್ನುವುದು ಬಯಲಾಯಿತು.

ಹಂಪನಕಟ್ಟೆಯಲ್ಲಿ ವಿದ್ಯಾರ್ಥಿ ಸಂಘಟನೆ(ಎಬಿವಿಪಿ)ಗಳು ಕಂಡಕ್ಟರ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾ ಯಿಸಿ ಪ್ರತಿಭಟನೆಯನ್ನೂ ನಡೆಸಿದವು. ಆದರೆ ಫಲಿ ತಾಂಶ ಮಾತ್ರ ಶೂನ್ಯ. ಘಟನೆ ನಡೆದು ಹತ್ತು ದಿನ ದಾಟಿದರೂ ಕಂಡಕ್ಟರ್ ಮೇಲೆ ಕ್ರಮ ಕೈಗೊಳ್ಳ ಲಾಗಿಲ್ಲ. ಆತ ತನ್ನನ್ನು ಯಾರೂ ಏನೂ ಮಾಡಲಾ ರರು ಎಂದುಕೊಂಡು ಆರಾಮವಾಗಿದ್ದಾನೆ. ಇಲ್ಲಿ ಪೊಲೀಸರು ಕೊಡುವ ಉತ್ತರ ಬೇರೆಯೇ ಆಗಿದೆ. ಮೃತ ವಿದ್ಯಾರ್ಥಿನಿಯ ಹೆತ್ತವರು ಬಂದು ದೂರು ನೀಡಲಿಲ್ಲ, ನೀಡಿದ್ದರೆ ಕ್ರಮ ಜರುಗಿಸುತ್ತಿದ್ದೆವು ಎಂದು. ಹಾಗಾದರೆ ಸಮಾಜದಲ್ಲಿ ಅಶಾಂತಿ, ಕುಕೃತ್ಯ ನಡೆ ಯುತ್ತಲೇ ಇದ್ದರೂ ಇಲಾಖೆ ದೂರು ಬಂದಿಲ್ಲ ಎಂದು ಸುಮ್ಮನಿದ್ದು ಬಿಡುವುದೇ?

ಇಂತಹ ಕ್ರಮ ಆರೋಪಿ ಕಂಡಕ್ಟರ್ ತನ್ನ ಬಸ್ ನಲ್ಲಿ ಸಂಚರಿಸುವ ಮತ್ತಷ್ಟು ಹೆಣ್ಣುಮಕ್ಕಳಿಗೆ ಕಿರು ಕುಳ ಕೊಡಲು ಪ್ರೇರೇಪಣೆ ನೀಡುವುದಿಲ್ಲವೇ? ಪೊಲೀಸರಿಗೆ ಆರೋಪಿ ಮೇಲೆ ಸ್ವಯಂಪ್ರೇರಿತ ಕೇಸು ದಾಖಲು ಮಾಡಲು ಯಾಕೆ ಸಾಧ್ಯವಿಲ್ಲ? ಇನ್ನಾದರೂ ಇಂತಹ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ.

English summary
Recently a girl student from Barebail has committed suicide. It is found that she has been harassed by local bus conductor. Hampanakatte student association protested and demand police to take action against conductor but Karkala police yet to file a case and say girl's parents have to give complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X