ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕ ಶೌಚ ಕೂಪದ ಬಗ್ಗೆ ಕಾರ್ಕಳದ ವಿದ್ಯಾರ್ಥಿನಿಯರು

By * ಸ್ವಾತಿ, ವೀಣಾ, ಶ್ವೇತ, ಶೋಭಾ, ವತ್ಸಲಾ, ಕಾರ್ಕಳ
|
Google Oneindia Kannada News

Worst Public Toilet Experiences
ನಾವುಗಳು ಕಾಲೋಜೊಂದರ ವಿದ್ಯಾರ್ಥಿನಿಯರು. ದಿನನಿತ್ಯ ಬಸ್ಸಿನಲ್ಲಿ ಕಾರ್ಕಳದ ಕಾಲೇಜಿಗೆ ಬರುತ್ತೇವೆ. ಸಂಜೆ ಪುನಃ ಬೆಳುವಾಯಿಗೆ ಹೋಗುತ್ತೇವೆ. ಇತ್ತೀಚೆಗೆ ಸಂಜೆ ಕಾಲೇಜು ಮುಗಿಸಿ ಬಸ್ ನಿಲ್ದಾಣಕ್ಕೆ ಬಂದಾಗ ಗೆಳತಿಯೋರ್ವಳಿಗೆ ಅನಿವಾರ್ಯವಾಗಿ ಬರ್ಹಿದೆಸೆಗೆ ಹೋಗಬೇಕಾಯಿತು. ಸಮೀಪದಲ್ಲೇ ಇದ್ದ ಸುಲಭ ಶೌಚಾಲಯಕ್ಕೆ ಹೋದಳು.

ಶೌಚಾಲಯದತ್ತ ಹೋದಾಗ ಅಲ್ಲಿಯೇ ಇದ್ದ ಸುಲಭ ಶೌಚಾಲಯದ ನೌಕರ ಒಳಗೆ ಹೋಗಬೇಕಾದರೆ ಎರಡು ರೂಪಾಯಿ ಕೊಡಬೇಕೆಂದು ತಾಕೀತು ಮಾಡಿದ. ಯಾಕೆ ಮೂತ್ರ ವಿಸರ್ಜನೆ ಉಚಿತವಲ್ಲವೆ ಎಂದು ಪ್ರಶ್ನಿಸಿ ಗೆಳತಿಯಲ್ಲರೆಲ್ಲರೂ ಆತನನ್ನು ತರಾಟೆಗೆ ತೆಗೆದುಕೊಂಡೆವು.

ನಮ್ಮ ತರಾಟೆಗೆ ಅವನು ಉತ್ತರಿಸಿದ ರೀತಿ ಹೀಗಿತ್ತು. 1 ರೂಪಾಯಿ, 4 ರೂಪಾಯಿ, 10 ರೂಪಾಯಿ ಎಂದು ನಗರಸಭೆಯ ಅಧಿಕಾರಿಗಳಿಗೆ ನಾವು ದಿನಾಲೂ ಮಾಮೂಲಿ ನೀಡಬೇಕು ಎಂದು ಸಾರ್ವಜನಿಕರ ಎದುರೇ ರಾಜಾರೋಷವಾಗಿ ನಮ್ಮನ್ನೇ ತರಾಟೆಗೆ ತೆಗೆದುಕೊಂಡ ರೀತಿ ಮಾತ್ರ ಅಸಹನೀಯ.

ಎರಡು ರೂಪಾಯಿ ಕೊಟ್ಟು ಒಳ ಹೋದ ನನ್ನ ಗೆಳತಿ ಹೊರ ಬಂದು ವಾಂತಿ ಮಾಡಿ, ಶೌಚಾಲಯದ ಒಳಗಿನ ಬಗ್ಗೆ ವರ್ಣಿಸಿದಳು. ಮೂಗು ಮುಚ್ಚಿಕೊಂಡೇ ಒಳಗೆ ಹೋಗಬೇಕಾದ ಪರಿಸ್ಥಿತಿ ಅಲ್ಲಿತ್ತು ಎಂದಳು. ಗೋಡೆಯ ತುಂಬಾ ಅಸಹ್ಯ ಶಬ್ದಗಳು, ಚಿತ್ರಗಳು, ಅಲ್ಲಲ್ಲಿ ಉಪಯೋಗಿಸಿ ಬಿದ್ದುಕೊಂಡಿರುವ ಕಾಂಡೋಮ್‌ಗಳ ರಾಶಿ, ಸ್ತ್ರೀಯರಂತೂ ಶೌಚಾಲಯ ಪ್ರವೇಶಿಸದ ದುಃಸ್ಥಿತಿ. ಶರಾಬಿನ ಬಾಟ್ಲಿಗಳು ಅಲ್ಲಲ್ಲಿ ಬಿದ್ದುಕೊಂಡಿದ್ದವು ಎಂದು ವಿವರಿಸಿದಳು.

ಸ್ತ್ರೀಯರ ಶೌಚಾಲಯಕ್ಕೆ ಸ್ತ್ರೀಯರಿಗೆ ಮಾತ್ರ ಪ್ರವೇಶ ಎಂದು ನಿಯಮವಿದ್ದರೆ ಹೀಗಾಗುತ್ತಿರಲಿಲ್ಲ. ಸ್ತ್ರೀಯರು ಉಪಯೋಗಿಸುವ ಶೌಚಾಲಯದ ಕೋಣೆಗೆ ಪುರುಷರನ್ನು ಬಿಡುವುದು ಸರಿಯೇ? ಹಾಗೆ ಇಲ್ಲಿ ಹೆಚ್ಚು ಹಣವನ್ನು ವಸೂಲು ಮಾಡುವುದು ಸರಿಯೇ? ಸಚ್ಛತೆ ಸರಿಯಾಗಿ ನಿರ್ವಹಿಸದೆ ಸಾರ್ವಜನಿಕರನ್ನು ಹಗಲು ದರೋಡೆ ಮಾಡುವುದು ಯಾವ ನ್ಯಾಯ? ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಯಾರೇ?

English summary
Belvai Karkala College Girls who faced Worst Public Toilet Experience recently. The public toilet near Bus stand is not maintain properly one can see dirty slogans on walls, used condoms around, untidy atmosphere in public restroom. The care taker is also charging heavily to allow inside toilets
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X