ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ಡೇಗಳಲ್ಲಿ 'ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು' !

By * ಉಮಾ ರಾವ್, ಬೆಂಗಳೂರು
|
Google Oneindia Kannada News

Coffee Day Shop
ಶಬರಿಮಲೆ ದೇವಸ್ಥಾನದಲ್ಲಿ ಕನ್ನಡ ಭಕ್ತಿ ಗೀತೆಗಳನ್ನು ಕೇಳಿಸುವ ಸುದ್ದಿ ಕೇಳಿ ಸಿಹಿ ಪೊಂಗಲ್ಲು ತಿಂದಷ್ಟೇ ಖುಷಿ ಆಯಿತು. ಅನೇಕ ವರ್ಷಗಳಿಂದ ಸಂಸ್ಕೃತ ಮತ್ತು ಮಲೆಯಾಳಂ ಭಾಷಾ ಗೀತೆಗಳನ್ನೇ ಕೇಳಿ ಸಾಕಾಗಿತ್ತು. ಪ್ರತೀವರ್ಷ ನಾವೆಲ್ಲ ದರ್ಶನಕ್ಕೆ ಹೋದಾಗ ಇದು ಅನುಭವಕ್ಕೆ ಬಂದಿದೆ.

ಸಂಸ್ಕೃತ ಓಕೆ. ಅರ್ಥವಾಗದಿದ್ದರೂ ಆಲಿಸುತ್ತಿದ್ದರೆ ಮಂತ್ರಮುಗ್ಧವಾಗುವುದು ಖಂಡಿತ. ವೇದ ಉಪನಿಷತ್ತುಗಳ ಸಂದೇಶವನ್ನು ಹೊತ್ತು ತರುವ ಸಂಸ್ಕೃತ ಎಲ್ಲಿ? ಭಗವಂತನಿಗೂ ಅರ್ಥವಾಗದ ಮಲ್ಲುಗಳ ಹಾಡುಗಳೆಲ್ಲಿ?

ಶಬರಿಮಲೆಯಲ್ಲಿ ಇವತ್ತು, ಬುಧವಾರದಿಂದ ಉಕ್ಕಿ ಬರುವ ಕನ್ನಡ ಕಲರವ ನಮಗೆಲ್ಲ ತುಂಬಾ ತುಂಬಾನೇ ಸಂತೋಷದ ಸಮಾಚಾರವಾಗಿದೆ. ಈ ಸುದ್ದಿಯನ್ನು ನಮಗೆ ತಲುಪಿಸಿದ ದಟ್ಸ್ ಕನ್ನಡ ಸಂಪಾದಕೀಯ ಸಿಬ್ಬಂದಿಗೆ ಅನಂತಾನಂತ ಧನ್ಯವಾದಗಳು.

ಆದರೆ ನಾವುಗಳು ಕನ್ನಡಿಗರ ಇಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳುವ ಅವಶ್ಯಕತೆ ಬೇಡ. ನಮ್ಮದೇ ಆದ ಬೆಂಗಳೂರಿನಲ್ಲಿರುವ ಕೆಫೆ ಕಾಫಿ ಡೇಗಳಿಗೆ ಕನ್ನಡ ಹಾಡು ಹಾಕಲು ಏನು ಧಾಡಿಯಾಗಿದೆ ಎನ್ನುವ ಪ್ರಶ್ನೆಯನ್ನು ನಾವೆಲ್ಲ ಕೇಳಿಕೊಳ್ಳಬೇಕು. ನಾನಂತೂ ಅಲ್ಲಿ ಕಾಫಿ ಕುಡಿಯೋದೇ ಇಲ್ಲ. ಆದರೆ ಮಗಳನ್ನು ಕರೆದುಕೊಂಡು ಬರಲು ಅಲ್ಲಿಗೆ ಹೋದಾಗ ಕಾಯಬೇಕಾದ ಸಂದರ್ಭ ಎದುರಾಗತ್ತೆ.

ದಬ ದಬಾ ಎನ್ನುವ ಇಂಗ್ಲಿಷ್ ಹಾಡಿನ ಬದಲು ಯಾವುದೋ ಒಂದು ಕನ್ನಡ ಗೀತೆ ಹಾಡಿದರೆ ಅಷ್ಟರಮಟ್ಟಿಗೆ ಸಂತಸವಾಗುತ್ತದೆ. ಕಪುಸಿನೋ ಕಾಫಿ ಹೀರಿದರೂ ಕೂಡ ಎಲ್ಲೋ ಒಂದು ಕಡೆ ನಮ್ಮೂರು ಚಿಕ್ಕಮಗಳೂರು ಕಾಫಿ ಕುಡಿದ ನೆನಪಾದರೂ ಬರುತ್ತದೆ. ಇನ್ನಾದರೂ ಕಾಫಿ ಡೇಗಳಲ್ಲಿ ನಮ್ಮ ಹಾಡು, ನಮ್ಮ ಸಂಗೀತ ಕೇಳಿಬರಲಿ.

ನನ್ನ ಅಚ್ಚುಮೆಚ್ಚಿನ ಗೀತೆ ಇದಾಗಿದೆ:
ರೆಕ್ಕೆ ಇದ್ದರೆ ಸಾಕೆ
ಹಕ್ಕಿಗೆ ಬೇಕು ಬಾನು ಹಾರುತ ಏರಲು ತಾನು
ಕಾಲೊಂದಿದ್ದರೆ ಸಾಕೆ
ಜಿಂಕೆಗೆ ಬೇಕು ಕಾಲು ಆಡುತ್ತ ಕುಣಿಯೋಕೆ

English summary
Taking a cue from Sabarimala Ayyappa temple which has started playing Kannada songs from today (June15) Coffee Day Shops in Bangalore should also ply Kannada Songs, pleads Uma Rao from Tata Silk Farm, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X