ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಟ್ಕಾ ಪ್ಲಾಸ್ಟಿಕ್ ಸ್ಯಾಚೆ ನಿಷೇಧ ಎಷ್ಟು ಸರಿ?

By * ಶಂಭು ಹೆಗ್ಡೆ, ಶಿರಸಿ
|
Google Oneindia Kannada News

Gutka Ban big blow to Areca Farmers
ಮಾನವನ ಆರೋಗ್ಯದ ಮೇಲೆ ವಿವಿಧ ರೀತಿಯ ಗಂಭೀರ ದುಷ್ಪರಿಣಾಮ ಬೀರುತ್ತಿವೆ ಎಂಬ ಕಾರಣ ನೀಡಿ, ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಗಳಂಥ ತಂಬಾಕು ಉತ್ಪನ್ನಗಳ ಮಾರಾಟವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ದೇಶದಲ್ಲಿ ಶೇಕಡ 90 ರಷ್ಟು ಬಾಯಿಯ ಕ್ಯಾನ್ಸರ್ ಪ್ರಕರಣಗಳು ತಂಬಾಕು ಜಗಿಯುವುದರಿಂದ ಕಾಣಿಸಿಕೊಳ್ಳುತಿವೆ ಎಂಬುದಾಗಿ ಕೇಂದ್ರ ಸರ್ಕಾರ ಮಾಡಿದ ವರದಿ ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇದೇನೂ ಸರಿ ಇರಬಹುದು.

ಆದರೆ ಪ್ಲಾಸಿಕ್ ಸ್ಯಾಚೆಟ್ / ಪೌಚ್‌ಗಳನ್ನು ತಂಬಾಕು ಉತ್ಪನ್ನ ಮಾರಾಟ ಇಲ್ಲ ಎಂಬುದರ ಅರ್ಥ ಅಥವಾ ಮರ್ಮವೇನಿರಬಹುದು ? ಅಡಿಕೆ ಉತ್ಪನ್ನಗಳಂಥ ಗುಟ್ಕಾ ಮಾರಾಟವಿಲ್ಲದಿದ್ದರೆ ನಮ್ಮ ಅಡಿಗೆ ಬೆಳೆಗಾರರ ಗತಿ ಏನು ? ಅಡಿಕೆ ಬೆಳೆಗಾರರಿಗೆ ಕೊಡಲಿ ಏಟು ಕೊಟ್ಟಂತಾಗಲಿಲ್ಲವೇ ? ಈ ಸುಗ್ರಿವಾಜ್ಞೆ ಜಾರಿಯಾದರೆ ಅಡಿಕೆ ಬೆಳೆಗಾರರು ಮತ್ತು ವ್ಯಾಪಾರಿಗಳು ಕಷ್ಟ ನಷ್ಟಗಳನ್ನು ಅನುಭವಿಸುವುದಿಲ್ಲವೇನು ? ಅವರ ಗೋಳು ಕೇಳುವವರಾರು ?. ಇದಲ್ಲದೆ ಕಾಳಸಂತೆಯಲ್ಲಿ ಗುಟ್ಕಾ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಸಣ್ಣ ಉದ್ಯಮಿಗಳು, ಪೆಟ್ಟಿ ಅಂಗಡಿ ಇಟ್ಟಿಕೊಂಡಿರುವವರಿಗೂ ಈ ನಿಷೇಧದಿಂದ ಭಾರಿ ಹೊಡೆತ ಬಿದ್ದಿದೆ.

ನಮ್ಮ ಮಾಲ್‌ಗಳಿಗೆ ಸ್ವೀಟ್ ಸ್ಟಾಲ್‌ಗಳಿಗೆ ಅಥವಾ ಇನ್ಯಾವ ಆಹಾರ ವಸ್ತುಗಳನ್ನು ಕೊಂಡುಕೊಳ್ಳುವ ಶಾಫಿಗೆ ಅಂಗಡಿಗಳಿಗೆ ಹೋದರೆ ಪ್ಲಾಸಿಕ್ ಚೀಲ, ಬ್ಯಾಗ್, ಬಾಟಲಿಗಳಲ್ಲದೆ ಇನ್ಯಾವುದರಲ್ಲಿ ಸಿಗುತ್ತದೆ ? ಸಾರಾಯಿ ಸಹ ಪ್ಲಾಸಿಕ್ ಬಾಟಲಿಗಳಲ್ಲಿ ಮಾರಾಟವಾಗುತ್ತದೆ. ಖನಿಜಯುಕ್ತ ನೀರು ಬಾಟಲಿಗಳಲ್ಲಿ, ಹಾಲು ಪ್ಲಾಸಿಕ್ ಗಳಲ್ಲಿ ಇತರ ಹೋಟೆಲ್ ತಿಂಡಿ ತಿನಿಸುಗಳು ಕಟ್ಟಿ ಕೊಡುವುದಾದರೂ ಯಾವುದರಲ್ಲಿ? ಪ್ಲಾಸ್ಟಿಕ್‌ಗಳಲ್ಲಿ ಅಲ್ಲವೇನು ? ಹಾಗಾದರೆ ಈ ನಿಯಮ ನಿಷೇಧ ಗುಟ್ಕಾಕ್ಕೆ ಮಾತ್ರ ಏನು ? ಈ ತಾರತಮ್ಯ ಯಾಕಾಗಿ ?

ಪುನರ್ಬಳಕೆ ಮಾಡಲಾಗದ ಪ್ಲಾಸ್ಟಿಕ್ ಗೆ ನಿಷೇಧ ಹೇರುವುದಾದರೆ ಎಲ್ಲೆಡೆ ಅದನ್ನು ಕಡ್ಡಾಯವಾಗಿ ಜಾರಿಗೊಳಿಸಿದರೆ ಉತ್ತಮ. ಕರ್ನಾಟಕ ಅಡಿಕೆ ಬೆಳೆಗಾರರ ನೋವನ್ನು ಅರಿತ ಕ್ಯಾಂಪ್ಕೋ ಸಂಸ್ಥೆ ಈ ನಿಷೇಧವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ. ಸರ್ಕಾರ ಕೂಡಾ ಭರವಸೆ ನೀಡಿದೆ. ಕರ್ನಾಟಕದಲ್ಲಿ ವಾರ್ಷಿಕವಾಗಿ 572,000 ಎಕರೆಗಳಿಂದ 600,000 ಮೆಟ್ರಿಕ್ ಟನ್ ಗಳಷ್ಟು ಅಡಿಕೆ ಉತ್ಪಾದನೆ ಮಾಡಲಾಗುತ್ತದೆ. ದೇಶದ ಅಡಿಕೆ ಉತ್ಪಾದನೆಯಲ್ಲಿ ಇಂದು ಕರ್ನಾಟಕ ಅಗ್ರಸ್ಥಾನದಲ್ಲಿದೆ. ಸರ್ಕಾರ ತಾರತಮ್ಯ ಮಾಡದೆ ಈ ಬಗ್ಗೆ ಗಮನ ಹರಿಸುವುದು ಒಳಿತು.

English summary
Supreme Court order on banning sale of Gutka in plastic sachets has come as big blow to millions families of Arecanut growers across Karnataka. But Gutkha is being sold in black markets at double rate. Small shop keepers and traders are worried by SC order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X