ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಸಿಎಲ್ ವಿವಾದ: ಪೇಜಾವರ ಶ್ರೀಗಳ ನಿಂದಿಸಬೇಡಿ

By * ಕೆ. ಸೋಮನಾಥ ನಾಯಕ್, ಗುರುವಾಯನಕರೆ
|
Google Oneindia Kannada News

Pejawar Seer UPCL Protest
ಪೇಜಾವರ ಶ್ರೀಗಳು ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಕುರಿತು ಏರ್ಪಡಿಸಿದ ಸಭೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ಶ್ರೀಗಳನ್ನು ಅವಮಾನಿಸಿ, ನೋಯಿಸಿರುವುದು ಖಂಡನೀಯ. ಯಾರೇ ಆದರೂ ಸ್ಥಾವರದ ವಿರುದ್ಧ ಹೋರಾಟವನ್ನು ತಮ್ಮದೇ ರೀತಿಯಲ್ಲಿ ಮಾಡಲು ಸ್ವತಂತ್ರವಾಗಿದ್ದಾರೆ. ಹೋರಾಟಗಳು ಅಹಿಂಸಾತ್ಮಕವಾಗಿ, ಪ್ರಜಾಸತ್ತಾತ್ಮಕವಾಗಿ, ರಾಜಕೀಯ ಉದ್ದೇಶರಹಿತವಾಗಿರ ಬೇಕೆಂದು ನಮ್ಮ ನಿಲುವು.

ಸರ್ವಪಕ್ಷಗಳ, ಸರ್ವಸಂಘಟನೆಗಳ, ಸರ್ವಧಾರ್ಮಿಕ ಮುಖ್ಯಸ್ಥರನ್ನೊಳಗೊಂಡ ಯುಪಿಸಿಎಲ್ ಹಠಾವೋ ಆಂದೋಲನ ಸಮಿತಿಗೆ ಈ ದೃಷ್ಟಿಯಿಂದಲೇ ನಾವು ಬೆಂಬಲಿಸುತ್ತಿದ್ದೇವೆ ಮತ್ತು ಅದರಲ್ಲಿ ಸಹಭಾಗಿಗಳಾಗಿದ್ದೇವೆ. ಪೇಜಾವರ ಶ್ರೀಗಳು ಎಂಎಸ್‌ಇಝಡ್ ಮತ್ತು ಉಷ್ಣ ವಿದುತ್ ಸ್ಥಾವರ ವಿರುದ್ಧ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ.

ಅವರ ಈ ಕಾಳಜಿಯನ್ನು ನಾವು ಅರ್ಥಮಾಡಿಕೊಂಡು ಗೌರವಿಸಬೇಕು. ಕಾರ್ಯಸಾಧನೆಯಲ್ಲಿ ಅವರ ದಾರಿ ನಮಗೆ ಹಿತವಾಗುವುದಿಲ್ಲ ಮತ್ತು ಒಪ್ಪಿಗೆ ಇಲ್ಲ ಎಂದಾದಲ್ಲಿ ಅದನ್ನು ವಿನಯಪೂರ್ವಕವಾಗಿ ಅವರಿಗೆ ತಿಳಿಸಬಹುದು. ಇಂತಹ ಸಂದರ್ಭ ನಮಗೆ ಈ ಹಿಂದೆ ಬಂದಿತ್ತು. ಚಳವಳಿಗಳ ನೇತೃತ್ವವನ್ನು ಸ್ವಾಮೀಜಿಯವರಿಗೆ ನಾವು ಒಪ್ಪಿಸಿಲ್ಲ. ನಮ್ಮ ದಾರಿಯನ್ನು ಅವರ ಮೇಲೆ ನಾವು ಹೇರುವುದು ಸರಿಯಲ್ಲ.

ಕರ್ನಾಟಕ ರಾಜ್ಯ ರೈತ ಸಂಘಕ್ಕೆ ರೈತಪರ ಹೋರಾಟದ ಖ್ಯಾತಿ ಇದೆ. ಈ ಜಿಲ್ಲೆಯಲ್ಲಿ ಅದನ್ನು ಉಳಿಸಿ ಬೆಳೆಸಬೇಕೆಂದೂ ಆದರೆ ಹಿಂಸಾತ್ಮಕ ದಾರಿ ಬೇಡವೆಂದೂ ನಾವು ವಿನಂತಿಸುತ್ತೇವೆ. ಸುಧಾರಣಾ ಸಾಮರ್ಥ್ಯ ಅಧ್ಯಯನ ಪೂರ್ಣಗೊಳ್ಳುವ ತನಕ ಈ ವಿದ್ಯುತ್ ಸ್ಥಾವರ ಬಂದ್ ಮಾಡಬೇಕೆಂದು ನಾವು ಒತ್ತಾಸುತ್ತಾ ಬಂದಿದ್ದೇವೆ ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡುವುದಕ್ಕಿಂತ ಜಿಲ್ಲೆಯ ನೆಲ, ಜಲ, ಕಾಡು, ಕಡಲು ಹಾಗೂ ಕೃಷಿಕರ, ಮೀನುಗಾರರ ಹಿತರಕ್ಷಣೆಗೆ ಒಂದಾಗಬೇಕೆಂದೂ ಈ ಪರಿಸರ ಸೂಕ್ಷ ಪ್ರದೇ ಶವನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂದೂ ಆಗ್ರಹಿಸುತ್ತೇವೆ.

English summary
Pejawar Seer VishweshaThirtha Swamiji can't be blamed in fight against Udupi Power Corporation Ltd(UPCL, Nagarjuna Plant) fly ash row. Whether it is Raitha sangha(farmers organization) or the group can opt their own way of protest but shouting slogans in singular words against Swamiji is tolerable and not acceptable says Udupi Math devotees and Guruvayanakere citizen trust.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X