ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವಳ್ಳುವರ್ ಜಯಂತಿ ಬೇಡ: ಚಿಮೂ

By Mahesh
|
Google Oneindia Kannada News

Writers oppose Tiruvalluvar day in Bengaluru
ಮಾನ್ಯರೆ,

ಬೆಂಗಳೂರು 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿರುವಾಗಲೇ ಬೆಂಗಳೂರು ಮಹಾನಗರ ಪಾಲಿಕೆಯು ತನ್ನದೇ ವಿಶಿಷ್ಟ ಕೊಡುಗೆಯನ್ನು ನೀಡಲು ಸಜ್ಜಾಗಿರುವಂತೆ ಕಾಣುತ್ತದೆ. ತಮಿಳು ಕವಿ ತಿರುವಳ್ಳುವರ್ ಅವರ ಜಯಂತಿಯನ್ನು ಆಚರಿಸಲು ಯೋಚಿಸಿದೆಯಂತೆ!

ಕೆಂಪೇಗೌಡರ ಜಯಂತಿ, ಕುಮಾರವ್ಯಾಸ ಜಯಂತಿ, ಕನಕದಾಸ ಜಯಂತಿ ಎಲ್ಲವನ್ನೂ ಕಡೆಗಣಿಸಿದ ಮಹಾನಗರ ಪಾಲಿಕೆಯು ತಿರುವಳ್ಳುವರ್ ಜಯಂತಿಯನ್ನು ಆಚರಿಸಲು ಹೊರಟಿರುವುದು ಅದರ ಒಲವನ್ನು ತೋರಿಸುತ್ತದೆ. ಮಹಾನಗರ ಪಾಲಿಕೆಯ ಸದಸ್ಯರು ಈ ಸಲಹೆಯನ್ನು ಮಾಡಿದರೆಂದು ಅದನ್ನು ಕಾರ್ಯಗತ ಮಾಡಲು ಮಹಾನಗರಪಾಲಿಕೆಯು ಹೊರಟಿದೆ.

ಯಾವುದೇ ಸದಸ್ಯರು ಸೂಚಿಸಿದ ಸಾಹಿತಿಯ ಜಯಂತಿಯನ್ನು ಆಚರಿಸುವುದು ಈಗ ಮಹಾನಗರಪಾಲಿಕೆಯು ಅಧಿಕೃತವಾಗಿ ಸ್ವೀಕರಿಸಿರುವ ನೀತಿಯೇ? ಮಹಾನಗರ ಪಾಲಿಕೆಯು ಕೆಂಪೇಗೌಡರನ್ನು, ಕನ್ನಡ ಸಾಹಿತಿಗಳನ್ನು ಕಡೆಗಣಿಸುವುದಾದರೆ ತನ್ನ ಕನ್ನಡ ನಾಡು-ನುಡಿಗಳ ಸೇವೆಯನ್ನು ಅಷ್ಟಕ್ಕೇ ಸೀಮಿತಗೊಳಿಸಲಿ, ಕನ್ನಡಿಗರಿಗೆ
ಅಪಮಾನವನ್ನಾದರೂ ಮಾಡದಿರಲಿ. [ಬಿಬಿಎಂಪಿ]

English summary
Kannada Writer M Chidananda Murthy, Prof LS Sheshagiri Rao, RN Chandrashekar have opposed BBMP circular on Celebrating Thiruvalluvar Day(Jayanti) in Bengaluru. when whole city is preparing for 78th Kannada Sahitya Sammelana It is not the time to take such decisions that to neglecting kannada writers said Chidananda Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X