ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ತಿ-ಮನೆ ಖರೀದಿಸುವ ಮುನ್ನ ಯೋಜಿಸಿರಿ

By * ದಿನೇಶ್ ಕೆ ಭಟ್, ಪುತ್ತೂರು
|
Google Oneindia Kannada News

Land purchase tips
ಸ್ಥಿರಾಸ್ತಿ ಖರೀದಿದಾರರು ತಪ್ಪು, ಸುಳ್ಳು ಮತ್ತು ಅಪೂರ್ಣ ಮಾಹಿತಿಯಿಂದ ಮೋಸ ಹೋಗಿ ವಿವಾದಗಳಿಗೆ, ಕಷ್ಟ ನಷ್ಟಕ್ಕೆ ಒಳಗಾಗುವುದನ್ನು ತಡೆಯಲು ಕೇಂದ್ರ ಸರಕಾರದ ಬಳಕೆದಾರರ ವ್ಯವಹಾರಗಳ ಸಚಿವಾಲಯವು ಉಪಯುಕ್ತ ಮಾಹಿತಿಯನ್ನು ಆಗಾಗ ಪ್ರಕಟಿಸುತ್ತದೆ. ಅಲ್ಲದೆ ಸ್ಥಿರಾಸ್ತಿಯ ಕ್ರಯ ವಿಕ್ರಯ ಪ್ರಕಿಯೆಯನ್ನು ವ್ಯವಸ್ಥಿತವಾಗಿರುವಂತೆ ಉಸ್ತುವಾರಿ ಮಾಡುವುದಕ್ಕೆ ನಿಯಂತ್ರಣಾ ಪ್ರಾಧಿಕಾರವನ್ನು ರಚಿಸಲೂ ಯೋಜಿಸುತ್ತಿದೆ. ಆದರೆ, ಸರಿಯಾದ ಮಾಹಿತಿ ದೊರೆಯದೆ ಗ್ರಾಹಕರು ಕಂಗಾಲಾಗುವ ಸಂಭವಗಳೇ ಹೆಚ್ಚು.

ಖರೀದಿದಾರರು ಪ್ರಮುಖವಾಗಿ ಈ ಕೆಳಗಿನ ಅಂಶಗಳ ಪೂರ್ಣ, ನಿಖರ ಮತ್ತು ಸ್ಫಷ್ಟ ಮಾಹಿತಿಯನ್ನು ಪಡೆದು ಅವಶ್ಯವಿದ್ದಲ್ಲಿ ಸಂಬಂಧಿಸಿದ ಇಲಾಖೆಯೊಂದಿಗೆ ದಾಖಲೆಗಳ ಸಾಚಾತನದ ಬಗ್ಗೆ ಅಡ್ಡಪರಿಶೀಲನೆ (Cross Verification) ಮಾಡಬೇಕು. ಜಮೀನಿನ ಜಂಟಿ ಅಳತೆಯ ನಂತರವೇ ಖರೀದಿ ಮಾಡುವುದು ಉತ್ತಮವಾಗಿದೆ. ಆಸ್ತಿ ಖರೀದಿ ಮಾಡುವ ಮುನ್ನ ನೀವು ಗಮನಿಸಬೇಕಾದ ದಾಖಲೆಗಳು ಈ ಕೆಳಕಂಡಂತಿವೆ.

* ಜಮೀನಿನ ಪಹಣಿ (ಆರ್‌ಟಿಸಿ)
* ಕಂದಾಯ ನಕ್ಷೆ (Revenue Map)
* ಜಮೀನಿನ ಋಣಭಾರ ಪತ್ರ ಸಾಲ (ಅಡಮಾನ ಕುರಿತಾದ ಮಾಹಿತಿ) (Mortgage Deeds)
* ಜಮೀನಿನ ಮಾಲಕತ್ವದ ಹಳೇ ದಾಖಲೆಗಳು (ಕನಿಷ್ಟ 30 ವರ್ಷದ್ದು, ಮತ್ತು ವಿದ್ಯುತ್, ನೀರು, ಆಸ್ತಿ ತೆರಿಗೆ ಪಾವತಿ ದಾಖಲೆಗಳು)
* ನೂತನ ನಿವೇಶನಗಳಾಗಿದ್ದಲ್ಲಿ ಅನುಮೋದಿತ ಮಾಸ್ಟರ್ ಪ್ಲಾನ್ (Approved Master Plan)
* ರಚನೆಯಾದ/ರಚನೆಯಾಗುವ ಕಟ್ಟಡವಾದಲ್ಲಿ ಅನುಮೋದಿತ ಬಿಲ್ಡಿಂಗ್ ನಕ್ಷೆ (Floor Plan) ಕಾರ್ಪೆಟ್ ಏರಿಯಾ, ಬಿಲ್ಟ್ ಅಪ್ ಏರಿಯಾ ಹಾಗೂ ಸೂಪರ್ ಬಿಲ್ಟ್ ಏರಿಯಾದ ವಿವರಗಳು.
* ಬಿಲ್ಡರ್ ಸಾಗಿ ಬಂದ ರೀತಿ (ಹಿನ್ನೆಲೆ) ಸ್ವಾಧೀನತೆಯ ಹಸ್ತಾಂತರ, ವಿಳಂಬವಾದ ಸಂದರ್ಭದಲ್ಲಿ ಪರಿಹಾರಗಳು, ಒಟ್ಟು ಮೌಲ್ಯದ ಸಂಯೋಜನೆ, ಮೌಲ್ಯ ವರ್ಧನೆಯ (ವೆಚ್ಚ ಏರಿಕೆಯ) ಮುನ್ನೇರ್ಪಾಡು ಇತ್ಯಾದಿ ಕುರಿತಾಗಿ ಒಡಂಬಡಿಕೆ, ಶರ್ತಗಳು. (Builders Background and Value Assessment)
* ವಿದ್ಯುತ್, ನೀರು, ಮೋರಿ/ಗಟಾರದ ವ್ಯವಸ್ಥೆ, ಸಮರ್ಪಕ ರಸ್ತೆಗಳ ಬಗ್ಗೆ ನಿಖರ ಮತ್ತು ಸ್ಪಷ್ಟ ಮಾಹಿತಿ ಮತ್ತು ದಾಖಲೆಗಳು, ಪಾರ್ಕಿಂಗ್ ಸೇವೆ ಒದಗಣೆ ಕುರಿತಾದ ವಿವರಗಳು ನಿರ್ವಹಣಾ ಸೇವೆಯ ವೆಚ್ಚ ವಿವರಗಳು ಕೆಲಸ ಪೂರೈಸಿದ ಬಗ್ಗೆ ತಪಶೀಲು, ಸ್ವಾಧೀನತೆ ದಿನಾಂಕ, ಇಲಾಖೆ ನೀಡಿದ ಬಳಕೆ ಪ್ರಮಾಣಪತ್ರ ನಿರ್ಮಾಣೋತ್ತರ ವಾರಂಟಿಗಳು (Basic Amenities, and post construction warranties)

ವಂಚನೆಗೆ ಗುರಿಯಾಗದಿರಿ : ಒಂದೇ ಸ್ಥಿರಾಸ್ತಿಯನ್ನು ಹಲವರಿಗೆ ಮಾರಾಟ ಮಾಡುವ ಕರಾರು ಮಾಡಿ ವಂಚನೆ ಮಾಡುವುದನ್ನು ತಪ್ಪಿಸಲು ಮತ್ತು ಖರೀದಿದಾರರ ಹಿತಾಸಕ್ತಿ ರಕ್ಷಣೆಗಾಗಿ ಮಾರಾಟ ಕರಪತ್ರ ಕಡ್ಡಾಯ ನೊಂದಾವಣೆಯನ್ನು ಜಾರಿಗೆ ತರಲು ಗ್ರಾಹಕ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದು, ಸರಕಾರ ಇನ್ನೂ ಸ್ಪಂದಿಸಬೇಕಾಗಿದೆ. ಅದು ಒಂದು ಕಡೆ. ಮುಖ್ಯವಾದ ಸಂಗತಿ ಎಂದರೆ ಒಂದು ಆಸ್ತಿ ಕೊಳ್ಳುವ ಮುನ್ನ ಮೈಯೆಲ್ಲಾ ಕಣ್ಣಾಗಿರಬೇಕು. ಪ್ರತಿಯೊಂದು ದಾಖಲೆ ಪತ್ರವನ್ನು ಕಣ್ಣಲ್ಲಿ ಕಣ್ಣಿಟ್ಟು ಪರೀಶೀಲಿಸಬೇಕು. ತಜ್ಞರಿಗೆ ತೋರಿಸಿ ಸರಿ ತಪ್ಪುಗಳತ್ತ ಗಮನವಿಡಬೇಕು. ನಿಮಗೊಂದು ಮನೆ ಇರಲಿ. ಅದು ವ್ಯಾಜ್ಯ ಮತ್ತು ಮೋಸಗಳಿಂದ ಮುಕ್ತವಾಗಿರಲಿ. [ಮನೆ]

English summary
Here are list of basic documents one should go through before purchasing or making deal in buying residential land. Karnataka govt laws and property's deeds need to be studied in before buying land
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X