ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಶಾಲೆಗಳಿಗೇಕೆ ಅನುದಾನ ?

By * ಎನ್.ಪಿ. ರಾಘವೇಂದ್ರರಾವ್, ಬೆಂಗಳೂರು
|
Google Oneindia Kannada News

RTE utilization by Private institutions
RIGHT TO EDUCATION (RTE) ಇದು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಕಹಿಯಾಗಿದೆ. ಕಾರಣಗಳು ಅವರಿಗೇ ಗೊತ್ತು. ಆ ಕಾರಣಗಳು RTEಗೆ ಮಾರಕವಾಗಿಲ್ಲ. ಇದನ್ನು ಪರಿಗಣಿಸಿದರೆ ಒಂದು ಪ್ರಶ್ನೆ ಏಳುತ್ತದೆ. ಸರ್ಕಾರ ಈ ಖಾಸಗಿ ಸಂಸ್ಥೆಗಳಿಗೆ ಏಕಿಷ್ಟು ಹಣ ನೀಡಬೇಕು?

ಖಾಸಗಿ ಸಂಸ್ಥೆಗಳಿಗೆ ನೀಡುವ ಹಣದ ಬದಲು ರಾಜ್ಯ ಸರ್ಕಾರ ತನ್ನದೇ ಆದ ರೀತಿಯಲ್ಲಿ ತನ್ನದೇ ಆದ ಮಾದರಿ ಶಾಲೆಗಳನ್ನು ಸ್ಥಾಪಿಸಬಹುದಲ್ಲವೇ ? ಈ ಮಾದರಿ ಶಾಲೆಗಳು ನವೋದಯ ಮತ್ತು ಕೇಂದ್ರಿಯ ಶಾಲೆಗಳ ಮಾದರಿಯಲ್ಲಿರಬಹುದಾಗಿದೆ.

ಖಾಸಗಿ ಶಾಲೆಗಳಿಗೆ ನೀಡುತ್ತಿರುವ ಅನುದಾನ ಒಂದು ರೀತಿಯಲ್ಲಿ ತೆರಿಗೆದಾರರ ಹಣವನ್ನು ವ್ಯಯ ಮಾಡುತ್ತಿದೆಯೆಂದು ಹೇಳಿದರೆ ತಪ್ಪಾಗಲಾರದು. ಈ ಖಾಸಗಿ ಶಾಲೆಗಳಲ್ಲಿ ಕೇವಲ ಶೇ. 25 ರಷ್ಟು ಬಡ ಮಕ್ಕಳು ಪ್ರಯೋಜನ ಪಡೆಯುತ್ತಿರುವುದು ಸರಿಯೇ? ಕಾರಣ ಸರ್ಕಾರ 1,71,000ಕೋಟಿ ರೂ. ಖರ್ಚು ಮಾಡುತ್ತಿದ್ದರೂ ದೇಶದ ಶೇ.25ರಷ್ಟು ಬಡ ಮಕ್ಕಳು ಮಾತ್ರ ಪ್ರಯೋಜನ ಪಡೆಯುತ್ತಿರುವುದು ವಿಪರ್ಯಾಸ.

ಹಾಗಾಗಿ ಸರ್ಕಾರ ಮೇಲೆ ತಿಳಿಸಿದಂತೆ ನವೋದಯ ಹಾಗೂ ಕೇಂದ್ರೀಯ ವಿದ್ಯಾಲಯಗಳ ಮಾದರಿಯಲ್ಲಿ ತನ್ನದೇ ಆದ ರೀತಿಯಲ್ಲಿ ಶಾಲೆಗಳನ್ನು ಸ್ಥಾಪಿಸಬಹುದಾಗಿದೆ.

ಖಾಸಗಿ ಸಂಸ್ಥೆಗಳಿಗೆ ನೀಡುವ ಹಣದಲ್ಲಿ ಸರ್ಕಾರವೇ ಅತಿ ಸುಲಭವಾಗಿ ಮಾದರಿ ಶಾಲೆಗಳನ್ನು ಸ್ಥಾಪಿಸಿದಲ್ಲಿ ನೂರಕ್ಕೆ ನೂರರಷ್ಟು ಬಡ ಮಕ್ಕಳು ಪ್ರಯೋಜನ ಪಡೆಯುವುದರಲ್ಲಿ ಯಾವ ಸಂದೇಹವೂ ಇಲ್ಲ. ಖಾಸಗಿ ಶಾಲೆಗಳು ವ್ಯಾಪಾರಿ ಸಂಸ್ಥೆಗಳಾಗಿರುವುದು ಗುಟ್ಟಾಗಿ ಉಳಿದಿಲ್ಲ.

ಹಾಗಾಗಿ ಈ ವ್ಯಾಪಾರೀ ಸಂಸ್ಥೆಗಳಿಗೆ ಮತ್ತಷ್ಟು ಸರ್ಕಾರ ತೆರಿಗೆದಾರರ ಹಣವನ್ನು ನೀಡುವುದರಲ್ಲಿ ಏನರ್ಥವಿದೆ ? ಇದನ್ನು ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸರ್ಕಾರ ಯೋಚಿಸುವುದು ಒಳಿತು.

ಸರ್ಕಾರ ಏನೇ ಕಾನೂನುಗಳನ್ನು ರೂಪಿಸಿದರೂ ಪ್ರಯೋಜನವಿಲ್ಲ. ಕಾರಣ ಈ ಖಾಸಗಿ ಸಂಸ್ಥೆಗಳ ಮಾಲೀಕರು ಯಾವ ರೀತಿ ನಿಭಾಯಿಸಬಹುದೆಂಬುದನ್ನು ಕರಗತ ಮಾಡಿಕೊಂಡಿರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X