ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನೂನಿನಿಂದ ಲೈಂಗಿಕ ಕಿರುಕುಳವನ್ನು ತಡೆಯಬಹುದೇ?

By * ಎಂ. ವಿ. ಭಟ್, ಬೆಂಗಳೂರು
|
Google Oneindia Kannada News

Preventing Sexual Harassment in the Workplace
ಕೇಂದ್ರ ಸರ್ಕಾರವು ಮುಂಬರುವ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ವಿರುದ್ಧ ಮಹಿಳೆಯರಿಗೆ ರಕ್ಷಣೆ ನೀಡುವ ಮಸೂದೆಯನ್ನು ಮಂಡಿಸಲಿದೆ. ಆದರೆ ಇಲ್ಲಿ ಮೂಡಿಬರುವ ಕೆಲವು ಸಂಶಯಗಳಿಗೆ ಪರಿಹಾರ ಅವಶ್ಯ ಬೇಕಾಗಿದೆ.

ಪ್ರಭಾವಶಾಲಿ ಅಧಿಕಾರಿಗಳಿರುವ ಸಂಸ್ಥೆಗಳಲ್ಲಿ ಲೈಂಗಿಕ ಕಿರುಕುಳದ ಘಟನೆಗಳು ಬಯಲಿಗೆ ಬರುವುದೇ ಇಲ್ಲ. ಮನೆ ಕೆಲಸಕ್ಕೆ ಬರುವ ಮಹಿಳೆಯರನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲು ಕಾರಣವೇನು? ಇದು ಎರಡನೆಯ ಸಂಶಯ. ಸುಮಾರು ಶೇ.50 ಲೈಂಗಿಕ ಕಿರುಕುಳಗಳು ಮನೆ ಕೆಲಸಕ್ಕೆ ಬರುವ ಹೆಂಗಸರ ಮೇಲೆಯೇ ನಡೆಯುತ್ತದೆ.

ಹಿಂದೆ ಒಮ್ಮೆ, ಲೈಂಗಿಕ ಕುರಿತಾದ ಮಾತು, ತಮಾಷೆ, ಚೇಷ್ಟೆ, ನೋಟ ಹಿಂಬಾಲಿಸುವಿಕೆ, ಮೈಸ್ಪರ್ಶ ಇತ್ಯಾದಿ ಅನಾಚಾರ ಎಸಗಿದರೆ ಬಲವಾದ ಶಿಕ್ಷೆಗೆ ಗುರಿಪಡಿಸುವ ಕಾನೂನು ಪಾಸಾಗಿತ್ತು. ಅದೇನಾಯಿತು? ಈಗ ಮತ್ತೆ ಇನ್ನೊಂದು ಮಸೂದೆ ಮಂಡಿಸುವ ಅವಶ್ಯಕತೆ ಇದೆಯೇ? ಲೈಂಗಿಕ ಕಿರುಕುಳಗಳ ಅಪರಾಧಿಗಳನ್ನು ದಂಡಿಸಲು ಕಾನೂನುಗಳ ಕೊರತೆ ಇಲ್ಲ. ಸಂಬಂಧಪಟ್ಟವರಲ್ಲಿ ಇಚ್ಛಾಶಕ್ತಿಯ ಕೊರತೆಯೇ ಎದ್ದು ಕಾಣುತ್ತಿದೆ. ಇನ್ನು ಕುಲೀನ ಮನೆತನದಿಂದ ಬಂದ ಅನೇಕ ಮಹಿಳೆಯರು ಇಂತಹ ಪ್ರಕರಣಗಳನ್ನು ಬೆಳಕಿಗೆ ತಾರದೆ ಕುಲಗೌರವಕ್ಕಾಗಿ ಮೌನವಾಗಿದ್ದು ಬಿಡುತ್ತಾರೆ.

ಅನಪೇಕ್ಷಿತ ಲೈಂಗಿಕಾಸಕ್ತಿ ಹಾಗೂ ಕಿರುಕುಳ ನಡೆಯಲು ಮುಖ್ಯ ಕಾರಣ ಪತ್ರಿಕೆಗಳಲ್ಲಿ, ಚಲನಚಿತ್ರಗಳಲ್ಲಿ, ವೈಬ್ ಸೈಟುಗಳಲ್ಲಿ ಅಶ್ಲೀಲ ಚಿತ್ರಗಳನ್ನು ತೋರಿಸುವುದು. ಅಶ್ಲೀಲ ಚಿತ್ರಗಳುಳ್ಳ ಪುಸ್ತಕಗಳನ್ನು ಪ್ರಕಟಪಡಿಸುವುದು, ಯುವತಿಯರು ಭಾರತೀಯ ಸಂಸ್ಕೃತಿಗೊಪ್ಪುವ ಉಡುಪುಗಳನ್ನು ತೊಡದೆ, ಎದೆಯ ಮೇಲು ಭಾಗವನ್ನು ಮುಚ್ಚದೆ ತೆರೆದಿಡುವುದು, ಹೊಕ್ಕುಳ ಕಾಣುವಂತೆ ಬಟ್ಟೆ ಧರಿಸಿ ಅದರ ಮಧ್ಯದಲ್ಲಿ ಶೃಂಗಾರದ ಒಂದು ವಸ್ತುವನ್ನು ತಾಗಿಸಿಡುವುದು. ಅರ್ಧ ಬ್ರಾ, ಪ್ಯಾಂಟಿ, ಬಿಕಿನಿ, ಯುವಕರೊಂದಿಗೆ ಅಸಭ್ಯ ನೃತ್ಯ, ಸಾರ್ವಜನಿಕ ಸ್ಥಳಗಳಲ್ಲೂ ಚುಂಬನ ಆಲಿಂಗನ ಇತ್ಯಾದಿ ಅನೇಕ ಕಾರಣಗಳಿರುತ್ತವೆ. ಇವುಗಳನ್ನು ತಡೆಯಲು ಸಾಧ್ಯವಿದೆಯೇ?

ಹಿಂದೊಮ್ಮೆ ಪ್ರಸಾರ ಭಾರತಿ ಸಂಸ್ಥೆಯ ಮುಖ್ಯಸ್ಥೆ ರಾತ್ರಿ 11 ಗಂಟೆಯ ನಂತರ ದೂರದರ್ಶನದಲ್ಲಿ ಅಶ್ಲೀಲ ಚಿತ್ರಗಳುಳ್ಳ ದೃಶ್ಯಗಳನ್ನು ತೋರಿಸಬಹುದು ಅಂದಿದ್ದರು. ನಮ್ಮ ಇಂದಿನ ಯುವಕ ಯುವತಿಯರು ಬೆಳಿಗ್ಗೆ 10 ಗಂಟೆಯವರೆಗೆ ಮಲಗಿ ರಾತ್ರಿ 11 ಗಂಟೆಯ ನಂತರವೇ ಚಟುವಟಿಕೆಗಳಲ್ಲಿ ತೊಡಗುತ್ತಾರೆಂಬುದು ಅವರಿಗೆ ಗೊತ್ತಿಲ್ಲದೇ ಹೋಗಿತ್ತು. ಮಹಿಳೆಯರು ಭಾರತೀಯ ಸಂಸ್ಕೃತಿಗೆ ಒಪ್ಪುವ ಉಡುಪನ್ನು ಧರಿಸುವಂತಾಗಬೇಕು.

ಕಾನೂನಿನಿಂದ ಇದನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲದಿದ್ದರೂ ಸಮಾಜ ಪ್ರೋತ್ಸಾಹವನ್ನು ಕೊಡಬೇಕು. ಮುಸ್ಲಿಮ್ ರಾಷ್ಟ್ರಗಳಲ್ಲಿರುವಂತೆ ನಮ್ಮಲ್ಲಿ ಹೆಂಗಸರಿಗೆ 'ಡ್ರೆಸ್‌ಕೋಡ್ " ಇಲ್ಲದಿರುವುದು ಒಂದು ಕೊರತೆ. ಪಾಶ್ಚಿಮಾತ್ಯ ಪ್ರಭಾವ ಇನ್ನೊಂದು ಕಾರಣ. ಮಸೂದೆ ತಯಾರಿಸುವವರು ಇದನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕಾದುದು ತೀರಾ ಅವಶ್ಯ. ಕೇವಲ ಕಾನೂನುಗಳಿಂದ ಲೈಂಗಿಕ ಕಿರುಕುಳಗಳನ್ನು ತಡೆಯಲು ಸಾಧ್ಯವಾಗದು. ರಾಜಾರೋಷವಾಗಿ ನಡೆಯುವುದನ್ನು ತಡೆಯಬಹುದಷ್ಟೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X