ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಂಧತಿ ರಾಯ್ ಹೇಳಿದ್ದು ರೈಟ್!

By * ಎಚ್. ಆನಂದರಾಮ ಶಾಸ್ತ್ರೀ
|
Google Oneindia Kannada News

Barack Obama, President of America
ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಲೇಖಕಿ ಅರುಂಧತಿ ರಾಯ್ ಹೇಳಿದ್ದು ಸರಿಯಾಗಿದೆ. ಪರದೇಶದ ಓರ್ವ (ಪ್ರಥಮ)ಪ್ರಜೆ ಭಾರತಕ್ಕೆ ಬಂದನೆಂದರೆ, ಆಗ ಭಾರತದಲ್ಲಿ ಆತ ಬಂದಿಳಿದು ಹರಿದಾಡುವ ಜಾಗಗಳಲ್ಲಿ ಪ್ರಜೆಗಳಿಗೆ ಬೀಡಾಡಿ ನಾಯಿಗಳಿಗಿರುವ ಸ್ವಾತಂತ್ರ್ಯವೂ ಇರುವುದಿಲ್ಲ.

* 23 ನಿಮಿಷ ಕಾಲ ವಿಮಾನ ನಿಲ್ದಾಣವನ್ನು ಪ್ರಯಾಣಿಕರೂ ಸೇರಿದಂತೆ ಸಾರ್ವಜನಿಕರಿಗೆ ಬಂದ್ ಮಾಡಲಾಗುತ್ತದೆ.

* ರಸ್ತೆಗಳಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತದೆ.

* ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳ ಉಪಸ್ಥಿತಿಗಳನ್ನು ನಿರ್ಬಂಧಿಸಲಾಗುತ್ತದೆ.

* ಆತನ ಭದ್ರತಾಧಿಕಾರಿಗಳ ಮತ್ತು ಭಾರತದ ಪೋಲೀಸರ ಕೆಂಗಣ್ಣುಗಳು ಸುತ್ತಲೂ ಮನೆಮಾರುಗೂಡುಗಳೊಳಗಿರುವ ಪ್ರಜೆಗಳಮೇಲೆಲ್ಲ ಬಿದ್ದಿರುತ್ತದೆ.

* ಆತ ಸಂಚರಿಸುವ ಪ್ರದೇಶಗಳ ಸುತ್ತಮುತ್ತೆಲ್ಲ ಅಘೋಷಿತ ಕರ್ಫ್ಯೂ ಜಾರಿಯಲ್ಲಿರುತ್ತದೆ.

* ಬೃಹತ್ ಕಟ್ಟಡಗಳ ಮೇಲೆ ಬಂದೂಕು ಹಿಡಿದ ಗುರಿಕಾರರು ಪ್ರಜೆಗಳ ಎದೆಗೆ ಭಯದ ಬಾಂಬ್ ಹಾಕುತ್ತಿರುತ್ತಾರೆ.

* ಭದ್ರತಾ ಪಡೆ, ಪೋಲೀಸ್ ಪಡೆ, ಅರೆಸೇನಾಪಡೆ, ಎನ್‌ಎಸ್‌ಜಿ ಕಮಾಂಡೊ ಪಡೆ ಮೊದಲಾದ ಯಮದೂತರೆಲ್ಲ ಸೇರಿ ಪ್ರಜೆಗಳ ಬಾಳನ್ನು ನರಕ ಮಾಡಿಡುತ್ತಾರೆ.

* ಆ ಪರದೇಸಿಯ ಭಾಷಣ ಆಲಿಸಿ ಅನಂತರ ಆತನ ಸಾಮೀಪ್ಯ ಬಯಸುವ ಗಣ್ಯರನ್ನೂ ಕೂಡ ಮುಲಾಜಿಲ್ಲದೆ ದೂರ ಇಡಲಾಗುತ್ತದೆ.

* ಸುದ್ದಿಮಾಧ್ಯಮಗಳಲ್ಲಿ ಆತನ ಸುದ್ದಿಯು ದೇಶದ ಪ್ರಜೆಗಳ ಸುದ್ದಿಗಳನ್ನು ಬದಿಗೊತ್ತಿ ವಿಜೃಂಭಿಸುತ್ತದೆ.

* ಅರುಂಧತಿ ರಾಯ್ ಭಾರತವನ್ನು ಬಿಟ್ಟು ತೊಲಗುವುದೊಳ್ಳೆಯದು.

* ಪಾಕಿಸ್ಥಾನದಲ್ಲಿ ಆಕೆಗೆ ಪ್ರಜಾಪ್ರಭುತ್ವ ಗೋಚರಿಸಬಹುದೇನೋ. ಹೋಗಿ ನೋಡಲಿ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X