ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ನಿಲ್ದಾಣಗಳಿಗೆ ಯಾರ ಹೆಸರು ಸೂಕ್ತ?

By Prasad
|
Google Oneindia Kannada News

Bangalore Metro
ಮಾನ್ಯರೇ,

ಕೆಲವು ದಿನಗಳ ಹಿಂದೆ BMRCL ವ್ಯವಸ್ಥಾಪಕ ನಿರ್ದೇಶಕರಾದ ಶಿವಶೈಲಂರವರು ಬೆಂಗಳೂರು ಮೆಟ್ರೊ ನಿಲುಗಡೆಗಳಿಗೆ ಸಾಧಕರ ಹೆಸರಿಡುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಾಧಕರ ಹೆಸರುಗಳಲ್ಲಿ ಮಾಹಾತ್ಮ ಗಾಂಧೀ, ಸ್ವಾಮಿ ವಿವೇಕಾನಂದ, ಕೆಂಪೇಗೌಡ, ಬಸವಣ್ಣ ಮುಂತಾದ ಮಹಾಮಹಿಮರ ಹೆಸರುಗಳನ್ನು ನಿಲ್ದಾಣಗಳಿಗೆ ಇಡುವ ಪ್ರಸ್ತಾಪ ಮಾಡಿದ್ದಾರೆ.

ಆದರೆ ಈ ಸಾಧಕರ ಹೆಸರುಗಳು ಈಗಾಗಲೇ ಸಾಕು ಬೇಕಾದಷ್ಟು ಜಾಗ, ಸಂಸ್ಥೆ, ವೃತ್ತ, ಶಾಲೆ, ಊರಿನ ರಸ್ತೆ, ಬಡಾವಣೆಗಳಿಗೆ ಇಟ್ಟಾಗಿದೆ. ಅಷ್ಟು ಸಾಕು. ನಮ್ಮ ಕರ್ನಾಟಕದಲ್ಲಿ ಹುಟ್ಟಿ ಕರ್ನಾಟಕಕ್ಕೆ ಹೆಮ್ಮೆ ತಂದಿರುವ ಇತ್ತೀಚಿನ ಅನೇಕರ ಸಾಧಕರ ಹೆಸರುಗಳಿವೆ. ಅಂತೆಯೇ, ಕರ್ನಾಟಕವನ್ನು ಆಳಿದ ಸಾಮ್ರಾಜ್ಯದ ಹೆಸರುಗಳನ್ನು ಸ್ಮರಿಸಿಕೊಳ್ಳಲು ಅವುಗಳ ಹೆಸರುಗಳನ್ನು ಜೀವಂತವಾಗಿಡಬೇಕಾಗಿದೆ.

ಉದಾಹರಣೆಗೆ ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳು, ಸಾಹಿತಿಗಳಲ್ಲಿ ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ರನ್ನ, ಪಂಪ, ಭೈರಪ್ಪ, ವಿಜ್ಞಾನಿಗಳಾದ ರಾಜಾರಾಮಣ್ಣ, ಸಿ.ಎನ್.ಆರ್.ರಾವ್, ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪು, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಾಡುಗಾರರಾದ ಸಿ.ಅಶ್ವಥ್, ಕಾಳಿಂಗ್ ರಾವ್, ನಟರಾದ ಡಾ ರಾಜ್ ಕುಮಾರ್, ವಿಷ್ಣುವರ್ಧನ, ಎಂಜನಿಯರಿಂಗ್ ಕ್ಷೇತ್ರದ ದಿಗ್ಗಜ ಸರ್ ಎಂ ವಿಶ್ವೇಶ್ವರಯ್ಯ, ಐ.ಟಿನಲ್ಲಿ ನಾರಾಯಣ ಮೂರ್ತಿ ಮುಂತಾದವರ ಹೆರುಗಳನ್ನು ಪರಿಶೀಲಿಸುವುದು ಸೂಕ್ತ.

ಇಂತ ಸಾಧಕರ ಹೆಸರುಗಳ ಹೆಸರುಗಳನ್ನು ಮೆಟ್ರೋ ನಿಲ್ದಾಣಗಳಿಗೆ ಇಡಲಿ. ಗಾಂಧಿಗಳು, ನೆಹರುಗಳು ಸಾಕು.

* ವಿವೇಕ್ ಶಂಕರ್, ರಾಜಾಮಹಲ್ ವಿಲಾಸ್ ಬಡಾವಣೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X