ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಥವರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯೇ ದುರ್ಬಲ

By Prasad
|
Google Oneindia Kannada News

Aruna Patil Revoor
ಗುಲ್ಬಬರ್ಗಾ ಕ್ಷೇತ್ರದ ಓರ್ವ ಅಮಾಯಕ ಮಹಿಳೆ ತನ್ನ ಅಡುಗೆ ಮನೆಯಿಂದ ಸೀದಾ ವಿಧಾನಸಭೆಗೆ ರವಾನೆಯಾಗಿರುವುದು ಈಗಾಗಲೇ ಸುದ್ದಿಯಾಗಿದೆ.

ಓರ್ವ ಶಾಸಕ/ಶಾಸಕಿಯ ಅಥವಾ ಸಂಸದ/ಸಂಸದೆಯ ಮರಣವಾದಾಗ ಆತನ/ಆಕೆಯ ತೆರವಾದ ಸ್ಥಾನಕ್ಕೆ, ಆತನ/ಆಕೆಯ ಅಮಾಯಕ ಸಂಬಂಧಿಕರನ್ನು ಚುನಾವಣಾ ಕಣಕ್ಕಿಳಿಸಿ, ಅನುಕಂಪದ ಅಲೆಯನ್ನು ಹುಟ್ಟುಹಾಕಿಸುವ ಮತ್ತು ಮರುಳಾದ ಮತದಾರರು ಅಂಥವರನ್ನು ವಿಜಯಿಯನ್ನಾಗಿಸುವ ಚಾಳಿ ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆರೋಗ್ಯಕರವೇ?

ಈಗ ಗುಲ್ಬರ್ಗಾದಲ್ಲಿ ವಿಜಯಿಯಾಗಿರುವ ಅರುಣಾ ರೇವೂರರವರು, ಮಾಧ್ಯಮದವರ ಮುಂದೆ ಬಂದು ನಿಂತಾಗ, ಪಂಜರದಿಂದ ಹೊರಬಂದ ಸಾಕುಪ್ರಾಣಿಗಳಂತೆ ಕಂಡುಬರುತ್ತಾರೆ. ಅಲ್ಲದೇ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಲಾಗದೇ, ಅಳಿದ ತಮ್ಮ ಪತಿಯನ್ನು ನೆನಪಿಸಿಕೊಳ್ಳುತ್ತಾ, ನಮ್ಮ ಗೌಡರು... ನಮ್ಮ ಗೌಡರು ಅನ್ನುತ್ತಾ, ಅಳುವಿನ ಮೊರೆ ಹೋಗುತ್ತಾರೆ. ಇಂಥವರಿಂದ ಆ ಕ್ಷೇತ್ರಕ್ಕೆ ಯಾವ ಪ್ರಯೋಜನವಾದೀತು?

ಕ್ಯಾಪ್ಟನ್ ಗೋಪೀನಾಥರಂಥವರನ್ನು, ರಾಜಕೀಯದಲ್ಲಿ ಅನನುಭವಿಗಳೆಂದು ಹೀಗಳೆದು, ತಿರಸ್ಕರಿಸುವ ನಾವು ಇಂಥವರಿಗೆ ಮಣೆಹಾಕುವುದೇಕೆ?

ಸಮರ್ಥ ನಾಯಕರುಗಳ ಕೊರತೆ ಇರುವ ಈ ನಾಡಿನಲ್ಲಿ, ಇಂಥವರ ಸೇರ್ಪಡೆ ಆಗುತ್ತಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನೂ ದುರ್ಬಲಗೊಳಿಸಿದಂತೆ ಕಾಣಿಸುತ್ತಿಲ್ಲವೇ?

ಓದುಗರೇ ಏನಂತೀರಿ?

-ಆತ್ರಾಡಿ ಸುರೇಶ ಹೆಗ್ಡೆ, ಬೆಂಗಳೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X