ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಡಿಟಿವಿ ಅಣಕು ಷೋಗೆ ಹಿಂದೂ ಸಂಸ್ಕೃತಿ ಬಲಿ

By * ಎಸ್.ಆನಂದ್, ಬೆಳಗಾವಿ
|
Google Oneindia Kannada News

ಎನ್‌ಡಿಟಿವಿ ವಾಹಿನಿಯಲ್ಲಿ The Great Indian Tamasha ರಾಜಕಾರಣಿಗಳನ್ನು ಪಪೆಟ್ ಮೂಲಕ ವ್ಯಂಗ್ಯ ಮಾಡುವ ಕಾರ್ಯಕ್ರಮ. 21/08/2010 ರಂದು ಈ ಕಾರ್ಯಕ್ರಮದಲ್ಲಿ ರಾಮದೇವ್ ಜಿ ಬಾಬಾರವರನ್ನು ಅವಹೇಳನ ಮಾಡುವ ರೀತಿಯಲ್ಲಿ ತೋರಿಸಲಾಯಿತು.

ಮಹಿಳೆಯೊಬ್ಬಳು ಅವರ ಜೊತೆಗೆ ಅಸಭ್ಯ ರೀತಿಯಲ್ಲಿ ವರ್ತಿಸಿದಂತೆ ತೋರಿಸಿದ ದೃಶ್ಯವು ಅವರ ಲಕ್ಷಾಂತರ ಅನುಯಾಯಿಗಳ ಮನಸ್ಸಿಗೆ ಘಾಸಿ ಮಾಡಿತು. ಇದು ಇಡೀ ಹಿಂದೂ ಸಮಾಜಕ್ಕೆ ಮಾಡಿರುವ ಅಪಮಾನ ಅಲ್ಲವೇ?

ರಾಜಕಾರಣಿಗಳನ್ನು ಮತ್ತು ರಾಜಕಾರಣದ ಒಳಸುಳಿಗಳನ್ನು ಮೊನಚು ಮಾತುಗಳ ಮತ್ತು ಪರಿಣಾಮಕಾರಿ ದೃಶ್ಯಗಳ ಮೂಲಕ ತೋರಿಸಿ ಜನತೆಯಲ್ಲಿ ಅರಿವು ಮೂಡಿಸುವ ಈ ವ್ಯಂಗ್ಯ ಕಾರ್ಯಕ್ರಮ ಮೆಚ್ಚುವಂತಹುದೇ ಆಗಿದೆ.

ಆದರೆ ಹಿಂದು ಸಮಾಜದ ಧಾರ್ಮಿಕ ಮುಖಂಡರ ವಿನಾಕಾರಣ ಅವಹೇಳನ ಎಷ್ಟು ಮಾತ್ರಕ್ಕೂ ಸಲ್ಲದು. ಇದರಿಂದ ಲಕ್ಷಾಂತರ ಹಿಂದುಗಳ ಮನಸ್ಸಿಗೆ ಆಘಾತ ಉಂಟಾಗುತ್ತಿದೆ. ವಿದೇಶಿ ಪ್ರೇರಿತ ಟಿ.ವಿ. ವಾಹಿನಿಗಳ ಮೂಲಕ ಕೆಲವು ವರ್ಷಗಳಿಂದ ಹಿಂದು ಸಮಾಜದ ಆಶ್ರಮ ಕೇಂದ್ರಗಳನ್ನು ಅವಹೇಳನ ಮಾಡುವ ಕೃತ್ಯ ನಿರಂತರವಾಗಿ ನಡೆಯುತ್ತಲೇ ಇದೆ.

ಕಂಚಿ ಕಾಮ ಕೋಟಿ ಪೀಠದ ಶಂಕರಚಾರ್ಯ ಪೂಜ್ಯ ಜಯೇಂದ್ರ ಸರಸ್ವತಿಯವರ ಮೇಲಿನ ಕೊಲೆಯ ಆರೋಪವನ್ನು ಸಾಬೀತುಪಡಿಸಲಾಗದ ಪೋಲಿಸ್ ಇಲಾಖೆ ಅವರನ್ನು ಬಂಧಿಸುವ ಮೂಲಕ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಮಾಡಿತ್ತು. ಸಾದ್ವಿ ಪ್ರಜ್ಞಾಸಿಂಗ್-ಹಿಂದು ಧಾರ್ಮಿಕ ಮುಖಂಡರ ಮೇಲಾಗುತ್ತಿರುವ ಮಿಥ್ಯಾರೋಪಗಳಿಗೆ ಇತ್ತೀಚಿನ ಉದಾಹರಣೆ.

ಅಯ್ಯಪ್ಪ ಸ್ವಾಮಿಯ ಪ್ರತಿಮೆಯನ್ನು ಮಹಿಳೆಯೊಬ್ಬಳು ಸ್ಪರ್ಶಿಸಿ ಅಪವಿತ್ರಗೊಳಿಸಿದಳು ಎಂಬ ಸುದ್ದಿಯನ್ನು ಅತಿಯಾಗಿ ಪ್ರಸಾರ ಮಾಡಲಾಯಿತು. ಇದು ಶಬರಿಮಲೈಗೆ ಹೋಗುವ ಭಕ್ತಾದಿಗಳ ಶ್ರದ್ಧೆಯನ್ನು ಭಂಗ ಮಾಡುವ ಷಡ್ಯಂತ್ರವಾಗಿತ್ತು ಎಂಬ ಸತ್ಯ ತಡವಾಗಿ ಜನತೆಗೆ ಅರಿವಾಯಿತು.

ಈ ಎಲ್ಲಾ ಘಟನೆಗಳನ್ನು ಅತಿಯಾದಮಹತ್ವ ಕೊಟ್ಟು ಪ್ರಸಾರ ಮಾಡುವ ವಿದೇಶಿ ಪ್ರೇರಿತ ಟಿ.ವಿ. ವಾಹಿನಿಗಳ ನೀತಿ ಅವರ ವೃತ್ತಿಯ ನೈತಿಕ ಮೌಲ್ಯಗಳನ್ನು ಪ್ರಶ್ನಿಸುವಂತೆ ಮಾಡಿದೆ. ಹಿಂದು ಮುಖಂಡರ ಅವಹೇಳನವನ್ನು ನಿರಂತರ ಮಾಡುತ್ತಿರುವ ಈ ಟಿ.ವಿ.ವಾಹಿನಿಗಳು ತಮ್ಮ ಸೆಕ್ಯೂಲರ್ ಮುಖವಾಡವನ್ನು ಉಳಿಸಿಕೊಳ್ಳಲು ಇದೇ ರೀತಿ ಉಳಿದ ಧರ್ಮಗಳ ಧಾರ್ಮಿಕ ಮುಖಂಡರ ಅವಹೇಳನವನ್ನೂ ಮಾಡಲು ಮುಂದಾಗುವರು ಎಂದು ವಿಶ್ವಾಸ ಇಡೋಣವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X