ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷ ಅಗತ್ಯ

By * ಕೆ.ಇ. ಸುಂದರಪ್ರಕಾಶ್, ಕರಗುಂದ
|
Google Oneindia Kannada News

Karnataka need regional party
ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದು 6 ದಶಕಗಳು ಕಳೆದಿವೆ. ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಅಧಿಕಾರ ನಡೆಸಿದ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿಯವರಿಂದ ಹಿಡಿದು ಬಿ.ಎಸ್. ಯಡಿಯೂರಪ್ಪನವರನ್ನು ನೋಡಿದ್ದು ಆಯಿತು.

1947 ರಿಂದ ಮೊದಲು ಕಾಂಗ್ರೆಸ್ ಸರ್ಕಾರ, ನಂತರ ಸಂಸ್ಥಾ ಕಾಂಗ್ರೆಸ್ ಸರ್ಕಾರ, ಮತ್ತೆ ಕಾಂಗ್ರೆಸ್ ಸರ್ಕಾರ. ನಂತರ 1985ರಲ್ಲಿ ಜನತಾ ಪಕ್ಷದ ಸರ್ಕಾರ, ನಂತರ 1989ರಿಂದ ಮತ್ತೆ ಕಾಂಗ್ರೆಸ್ ಸರ್ಕಾರ, ನಂತರ 1994 ರಿಂದ ಜನತಾದಳ ಸರ್ಕಾರ, ನಂತರ 1999ರಿಂದ ಕಾಂಗೈ ಸರ್ಕಾರ ನಂತರ ೨೦೦೪ರಿಂದ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ.

ನಂತರ 2006ರಿಂದ ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರ್ಕಾರ, ನಂತರ 2008ರಿಂದ ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಈಗ ಅಧಿಕಾರದಲ್ಲಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಶಿಸ್ತಿನ ಪಕ್ಷವೆಂದು ರಾಜ್ಯದ ಜನತೆ ತೀರ್ಮಾನ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಆದರೆ, ಈ ಸರ್ಕಾರದಿಂದ ರೈತರಿಗೇ ಆಗಲೀ, ಕಾರ್ಮಿಕರಿಗೇ ಆಗಲಿ, ಸರ್ಕಾರಿ ನೌಕರರಿಗೇ ಆಗಲಿ ಪ್ರಯೋಜನವಿಲ್ಲ ಎಂದು ಗಮನಿಸಿದ್ದಾರೆ.

ಬರೀ 2 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಳ್ಳಲಿಕ್ಕೆ ಪ್ರಯತ್ನ ಮಾಡಿದರೇ ವಿನಃ ಮತ್ತೇನೂ ಇಲ್ಲ. ಬರೀ ಆಶ್ವಾಸನೆಗಳ ಸುರಿಮಳೆ, ದೊಂಬರ ಆಟ, ಮಂತ್ರಿಗಳಿಗೆ ಮಾತಿನಲ್ಲಿ ಹಿಡಿತವಿಲ್ಲ. ಬರೀ ಸಮಾವೇಶಗಳು, ಸೇಡಿನ ರಾಜಕಾರಣ. ಇವೆಲ್ಲಾ ಕಾರಣಗಳಿಂದ ರಾಜ್ಯದ ಜನತೆ ಭ್ರಮನಿರಸನ ಹೊಂದಿದ್ದಾರೆ. ಬೆಲೆಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಡೊನೇಷನ್ ಹಾವಳಿ ತಡೆಗಟ್ಟಲಿಕ್ಕೆ ಆಗಲಿಲ್ಲ. ಭ್ರಷ್ಟರನ್ನು ಬಲಿ ಹಾಕಲಿಲ್ಲ.

50 ವರ್ಷಗಳ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ. ನಾವೂ ಬರೀ 2 ವರ್ಷಗಳಲ್ಲಿ ಮಾಡಿದ್ದೇವೆ ಎಂಬುದು ಬಿಜೆಪಿಯ ಪೌರುಷದ ಮಾತುಗಳು. ಇವೆಲ್ಲಾ ನೋಡಿದರೆ ಪ್ರಸ್ತುತ ರಾಜ್ಯಕ್ಕೆ ಒಂದು ಪ್ರಾದೇಶಿಕ ಪಕ್ಷ ಅನಿವಾರ್ಯವಾಗಿದೆ ಎನಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X