ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನದು ಎನ್ನುವವರು ಇನ್ನೂ ಅಪಾಯಕಾರಿ!

By * ಜಯಶ್ರೀ
|
Google Oneindia Kannada News

Response to article on I trouble
ಶ್ಯಾಮ್ ಅವರೇ ನಿಮ್ಮ ಲೇಖನ ಬಹಳ ಚೆನ್ನಾಗಿದೆ. 'ನಾನು' ಎನ್ನುವವರ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದೀರಿ. ಈ 'ನಾನು' ಎನ್ನುವರಿಗಿಂತ ನನ್ನ ಅಭಿಪ್ರಾಯದಲ್ಲಿ 'ನನ್ನದು' ಎಂದು ಹೇಳಿಕೊಂಡು ಬರುವವರು ಬಹಳ ಅಪಾಯಕಾರಿಗಳು. 'ನಾನು' ಎಂಬುವರು ನೀವು ಹೇಳಿದಂತೆ ಅವರ ಕುರ್ಚಿ ಅವರೇ ಆದರು ತೆಗೆದುಕೊಂಡು ಹೋಗಿ ಇಟ್ಟುಕೊಂಡು ಕೂತುಕೊಳ್ಳುತ್ತಾರಲ್ಲ ಅವರೇ ಪರವಾಗಿಲ್ಲ. 'ನನ್ನದು' ಎನ್ನುವರ ಸಂಖ್ಯಾ ಪಟ್ಟಿಯಲ್ಲಿ ಇರುವವರು - ಕಂಡವರದನ್ನು ದೋಚುವ ಆಶಾವಾದಿಗಳು.

ಈ 'ನನ್ನದು' ಎನ್ನುವರ ಗುಂಪು ಹೇಗೆ ಅಪಾಯಕಾರಿಯೋ, ಹಾಗೆಯೇ ಸಹಾಯಕ ಕೂಡ. ಇದರಲ್ಲಿ ನಮ್ಮ ಎಂ.ಕೆ.ಇಂದಿರಾ ಅವರು ಬರೆದಿರುವ 'ಫಣಿಯಮ್ಮ'ನವರ ಹಾಗೆ, ಸೇವಾ ಸಂಸ್ಥೆಗಳಲ್ಲಿ ಅನಾಥರ ಸಂಸ್ಕಾರ ಕರ್ಮಗಳನ್ನು ಮಾಡುವ ಹೃದಯವಂತರು. ಇದಕ್ಕೆ ನಮ್ಮವರೇ ಆದ ಹೆಮ್ಮೆಯ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸಾಮೂಹಿಕ ವಿವಾಹಗಳು ಸಾಕ್ಷಿ. ಇವರುಗಳು ಆತ್ಮಾರ್ಥತೆ ಉಳ್ಳವರು, ಮಾನವೀಯತೆಯ ಮೇರುಗಳು. ಸಮಾಜದ ಬುನಾದಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ನಡೆಯುವವರು.

ಆದರೆ ನಾನು ಹೇಳುತ್ತಿರುವುದು ಈ 'ನನ್ನದು' ಎನ್ನುವ ಗುಂಪಿನ ದ್ವೈತ ರೂಪಿಗಳು. ನಮ್ಮ ಮಹಾಭಾರತದಲ್ಲಿ ಬರುವ ನಾನಾ ವಿಧದ shades of characters. ನಮ್ಮೆಲ್ಲರ ಬಂಧುಗಳಲ್ಲಿಯು ಇಂಥವರು ಕಾಣ ಸಿಗುವವರು. ಇವರುಗಳು ಸಂಬಂಧವಿಲ್ಲದೇನೆ ಅಧಿಪತ್ಯ ಕೊಂಡು ನಡೆಯುವವರು. ತಾವೇ ಉತ್ತರವಾದಿಗಳೆಂದು ತಿಳಿದುಕೊಂಡು ಸಾಂಕೇತಿಕ ಯಜಮಾನಿಕೆಯನ್ನು ಹೊರುವವರು. ಅಥವಾ ಆಫೀಸ್ review ಮೀಟಿಂಗುಗಳಲ್ಲಿ ತಮ್ಮ contribution ಎಂದು ಸುಳ್ಳು ಸುಳ್ಳೇ ಹೇಳುವವರು. ಆಸ್ತಿಯಲ್ಲಿ ದಾಯಾದಿಗಳ ತರಹ ಭಾಗ ಕೇಳುವವರು, ಅತ್ತೆ ಸೊಸೆಯರ ಮಧ್ಯೆ ಜಗಳ ತಂದು ಉಂಡು ಹೋಗುವವರು. ಹಾಗೆ ಸುಮ್ಮಗೆ ಬಾಯಿ ತೀಟೆಗಾಗಿ ತಲೆಗೆ ಮೆಂತ್ಯ ಅರೆಯುವವರು. ದಾಸರೇ ಹೇಳಿದ ಹಾಗೆ ಆಚಾರವಿಲ್ಲದ ನಾಲಿಗೆಯವರು ಆಗಬಹುದು. ಇದೆಲ್ಲ ಒಟ್ಟು ಕುಟುಂಬದಲ್ಲಿ ಜೀವಿಸುವಾಗ ಬಹಳ ಸಹಜವಾದ ದಿನ ನಿತ್ಯದ ಆಗುಹೋಗುಗಳಲ್ಲಿ ಒಂದಾಗಿಬಿಡುತ್ತದೆ. ಇಲ್ಲಿ ಕುಟುಂಬದ ಸದಸ್ಯರೆಲ್ಲರಿಗೂ ಅನುಸರಿಕೆಯ ಪಾಠ ಕಲಿಕೆಯಾಗುತ್ತದೆ. ಒಂದು ವಿಧದಲ್ಲಿ prepares you for handling various situations in life ಅಂತ ಹೇಳಬಹುದು.

ಹಾಗೆಯೇ on the flip side ಈ ಒಟ್ಟು ಸಂಸಾರ ಬಿಟ್ಟು ಒಬ್ಬಂಟಿಗರಾಗಿ ಹೊರ ದೇಶದಲ್ಲಿ ಸಂಸಾರ ಮಾಡುವಾಗ initially ಒಂದು ಅನಾಥೆ ಪ್ರಜ್ಞೆ ಕಾಡುತ್ತದೆ. 'ಫಣಿಯಮ್ಮ'ತರಹ ಯಾರಾದರು ಸಿಕ್ಕಬಾರದೆ, ಯಕಶ್ಚಿತ್ ಮಾತಾದರು ಆಡಿಸಬರದೆ ಎಂದು ಅನ್ನಿಸುತ್ತದೆ. ಕಾಲಕ್ರಮೇಣ ಅದೇ ರೂಢಿಯಾಗಿ ಬಿಡುತ್ತದೆ. ಉದಾಹರಣೆಗಾಗಿ 'ಫಣಿಯಮ್ಮ' ಅವರನ್ನೇ ತೆಗೆದುಕೊಳ್ಳಿ. ಮುಂದೆ ಬಹಳ ವರ್ಷ ಕಳೆದು ಭಾರತಕ್ಕೆ ಹೋದಾಗ, ಈಕೆ 'gossip monger' ಎಂದು ಹೇಳುವಷ್ಟು ಉದ್ದಟತನ ತೋರುತ್ತೇವೆ. Encroachment of private space ಎಂಬ ಮಾನ್ಯತೆಗೆ ಅಡಿಯಾಳಾಗಿಬಿಡುತ್ತೇವೆ.

'ನನ್ನದು' ಎನ್ನುವಿಕೆಯ ಜನ ಭಂಡ ಗೋತ್ರದವರು ಎಂದು ಹೇಳಬಹುದು. ಏನು ಹೇಳಿದರು ಒರೆಸಿಕೊಂಡು ಹೋಗುವವರು. No matter what, I should win, you lose ಎನ್ನುವ ವಿಷಯಾಸಕ್ತರು.

ನಾನು ನಾನು ನಾನು ನಾನು ನಾನು ನಾನು<br>ನಾನು ನಾನು ನಾನು ನಾನು ನಾನು ನಾನು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X