ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆಗೆ ಓದುಗರ ಪ್ರತಿಕ್ರಿಯೆ

By Prasad
|
Google Oneindia Kannada News

What readers think about petrol price hike
ತೈಲೋತ್ಪನ್ನಗಳ ಬೆಲೆ ಏರಿಸಿದ್ದರಿಂದ ಬಡಜನತೆ ಮತ್ತು ಮಧ್ಯಮವರ್ಗದ ಜನ ಕಂಗಾಲಾಗಿರುವುದಂತೂ ಸತ್ಯ. ಹಣದುಬ್ಬರ ಮೇಲ್ಮುಖವಾಗಿರುವ ಕಾಲದಲ್ಲಿ ಪೆಟ್ರೋಲ್, ಡೀಸೆಲ್, ಎಲ್ ಪಿ ಜಿ ಬೆಲೆ ಏರಿಸಿರುವುದು ಜನರನ್ನು ಮತ್ತಷ್ಟು ಕಂಗಾಲಾಗಿಸಿದೆ. ಗಾಯದ ಮೇಲೆ ಬರೆ ಎಳೆದಂತೆ ಪ್ರಯಾಣ ದರವನ್ನು ಕೂಡ ರಾಜ್ಯ ಸರಕಾರ ಏರಿಸಿ. ಮತದಾನದ ಮುಖಾಂತರ ಕೇಳಿದ ಪ್ರಶ್ನಗೆ 'ಏನ್ಮಾಡೋ ಒಪ್ಪಿಕೊಳ್ಳಲೇಬೇಕು' ಎಂಬ ನಿರಾಶಾವಾದ ನಡುವೆಯೂ ಆಶಾವಾದಿ ಕಾಮೆಂಟಿಗರು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಮಂಡಿಸಿದ್ದಾರೆ. ಈ ಸರಪಳಿಗೆ ನಿಮ್ಮ ಅಭಿಪ್ರಾಯಗಳೂ ಸೇರಲಿ.

ನಾಲ್ಕಾರು ದಿನ ಬೆಲೆ ಏರಿಕೆ ಅಂತ ಗೊಣಗಿ ನಂತರ ಸುಮ್ಮನಿರುವುದು ನಮ್ಮ ಜನರ ಜಾಯಮಾನ. ಪೆಟ್ರೋಲ್ ಬೆಲೆ ಏರಿಕೆ ತಡೆಯಬೇಕೆಂದರೆ ಅದರ ಉಪಯೋಗವನ್ನು ಕಡಿತಗೊಳಿಸಬೇಕು. ಸಾಮೂಹಿಕ ಸಾರಿಗೆಯನ್ನು ಹೆಚ್ಚು ಉಪಯೋಗಿಸಬಹುದು. ಹತ್ತಿರದ ಓಡಾಟಕ್ಕೆ ಸೈಕಲ್ಲನು ಉಪಯೋಗಿಸಬಹುದು. ಜಾಲಿ ರೈಡನ್ನು ನಿಲ್ಲಿಸಬೇಕು. ಎಲ್ಲಿಯವರೆಗೆ ಡಿಮ್ಯಾಂಡ್ ಹೆಚ್ಚುತ್ತ ಹೋಗುತ್ತದೆಯೋ ಅಲ್ಲಿಯವರೆಗೆ ಪೆಟ್ರೋಲ್ ಬೆಲೆ ಏರುತ್ತ ಹೋಗುತ್ತದೆ.

ಗೊಗ್ಗ

***

ರಾಜಕಿಯದವರು ದುಡ್ಡು ಮಾಡಿಕೊಳ್ಳಲು ಪೆಟ್ರೋಲ್ ದರ ಹೆಚ್ಟು ಮಾಡಿದ್ದಾರೆ. ರಾಜಕೀಯ ಇದ್ದು ನಮಗೆ ಏನಾದ್ರು ಪ್ರಯೋಜನ ಇಲ್ಲವೇ ಇಲ್ಲ. ಇವರೆಲ್ಲ ನಮಗೆ ಎನ್ಕೆ ಬೇಕು? ನಾವೆಲ್ಲ ಬೇಗನೆ ಎಚ್ಚೆತ್ತು ಕೊಳ್ಳಬೇಕು.

ಗಿರೀಶ್, ಬೆಂಗಳೂರು

***

ಸರಕಾರಿ ಅಧಿಕಾರಿಗಳಿಗೆ ಮತ್ತು ರಾಜಕೀಯದವರಿಗೆ ಫ್ರೀ ಸಾರಿಗೆ ಸೌಲಭ್ಯ ನಿಲ್ಲಿಸಬೇಕು. ಅವರು ಕೂಡ ಒಂದು ಡ್ರಾಪ್ ಪೆಟ್ರೋಲ್ ಮತ್ತು ಇತರೆ ವಸ್ತುಗಳನ್ನು ಅವರ ಕಿಸೆ ಇಂದ ಕೊಂಡುಕೊಳ್ಳುವ ಹಾಗೆ ನಿಯಮಗಳನ್ನು ತಿದ್ದುಪಡಿಸಬೇಕು. ಆವಾಗ ಬೆಲೆ ಏರುವ ಪರಿಸ್ಥಿತಿ ಬರುವುದಿಲ್ಲ.

ದೀಪು

***

ಇಡೀ ದೇಶದ ಜನ ಒಂದೇ ಒಂದು ದಿನ ತಮ್ಮ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಹಾಕಿಸೋದು ನಿಲ್ಲಿಸಿದರೆ ಸಾಕು .. ಆಗ ಈ ಪೆಟ್ರೋಲ್ ಡೀಸೆಲ್ ಮಾಲೀಕರಿಗೆ ಬುದ್ಧಿ ಬರುತ್ತೆ!

ಸೆನ್ಸಿಬಲ್

***

First politicians should stop using luxury cars. They can use cars like alto and Indica which give more milage. They ride all the luxury cars which drink fuel like water. First they should set standards then talk about others. These jack asses won't learn.

Vijay

***

ದೇಶದ ಮಹಾನ್ ನಾಯಕರೇ ನಿಮಗಿದೋ ಧೀರ್ಘದ೦ಡ ನಮಸ್ಕಾರ. ಬಡವರನ್ನ ನೀವು ಈ ಶತಮಾನದಲ್ಲಿ ಮೇಲೆ ಬರೋಕೆ ಬಿಡೋಲ್ಲ. ಪ್ರತಿ ಪ್ರಯಾಣಕ್ಕೂ ಸರ್ಕಾರದ ಹಣಾನ ನಿಮ್ಮಪ್ಪನ ಮನೆಯ ಆಸ್ತಿಯತರ ಖರ್ಚು ಮಾಡೋ ನಿಮಗೆ ಬಡವರ ಕಿಸೆಯ ಬೆಲೆಯೇನಾದರೂ ತಿಳಿದಿದೆಯೇ? ಈ ದೇಶಕ್ಕೆ ಮಿಲಿಟ್ರಿ ಸರಕಾರವೇ ಉತ್ತಮ.

ಪೂರ್ಣಿಮ ವಿನಯ್

***

ತುಂಬಾ ಸಂತೋಷದ ವಿಷಯ. ದೇಶ ಮುಂದೆ ಹೋಗ್ತೈದೆ ಅಂತ ಕಾಣ್ತದೆ. ಕಾಂಗಿಗೆ ವೋಟು ಹಾಕಿದ್ದಕ್ಕೆ ನನಗೆ ಅವರು ಕೊಟ್ಟ ದೊಡ್ಡ ಕೊಡುಗೆ. ಸೋನಿಯಾಗೆ ಅಭಿನಂದನೆಗಳು. ಕೇವಲ 2 ವರ್ಷದಲ್ಲಿ 3 ಸಲ ಪೆಟ್ರೋಲ್ ಬೆಲೆ ಏರ್ಸಿ ದಾಖಲೆ ಮಾಡಿದ್ದಕ್ಕೆ.

ಕಾಂಗಿಗೆ ವೋಟು ಹಾಕಿದ್ದವ

***

ಕಡಿಮೆ ಆಗೋದು ಬುದ್ದಿ ಒಂದೇ, ಅದು ಇದ್ದರೆ ತಾನೆ!

ಪರಿಮಳ ರಾವ್

***

ಎಷ್ಟಾದರೂ ನಮ್ಮದು ಶ್ರೀಮಂತ ಪಕ್ಷ ಅಲ್ಲವೇ ಅದಕ್ಕೆ ರೇಟ್ ಜಾಸ್ತಿ ಮಾಡಿದ್ದು. ಸಹಕರಿಸಿ. ಇನ್ನು ಎಲೆಕ್ಷನ್ 4 ವರ್ಷ ಇದೆ. ಆಮೇಲೆ ಮತ್ತೆ ಕಡಿಮೆ ಮಾಡ್ತಿವಿ.

ಕಾಂಗ್ರೆಸ್

***

ಯಾಕಾದ್ರು ವೋಟು ಹಾಕಿದೆನೋ ಇಂಥ ಪಾರ್ಟಿಗೆ ಅಂತ ಅನ್ನಿಸ್ತಿದೆ. ಈಗಾಗಲೇ ಫುಡ್ ಇನಫ್ಲೇಶನ್ ಆಕಾಶ ಮುಟ್ಟಿದೆ. ಬಡವರು ಏನ್ ತಿನ್ಬೇಕು. ಇವಾಗ ಬಸ್ ಫೇರ್ ಕೂಡ ಜಾಸ್ತಿ ಆಗುತ್ತೆ. ಒಟ್ನಲ್ಲಿ ಬಡವರಿಗೆ ಕಾಲ ಅಲ್ಲ ಇದು ಅನ್ಸಿದೆ.

ಭಾಸ್ಕರ

***

ಆತ್ಮಹತ್ಯೆ ಮಾಡ್ಕೊಳ್ಳೋಣ ಅಂದ್ರೆ ಸೀಮೆ ಎಣ್ಣೆ ರೇಟ್ ಜಾಸ್ತಿ ಆಗಯ್ತೆ, ರೈಲ್ವೆ ಕಂಬಿ ಮೇಲೆ ಮಲಗೋದೆ ವಾಸಿ!

ಶಿವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X