ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಮ್ಮಪ್ಪನ ನೋಡಕ್ಕೆ ಡ್ರೆಸ್ ಕೋಡ್ ಸ್ವಾಗತಾರ್ಹ

By * ‎ಎನ್.ಪಿ. ರಾಘವೇಂದ್ರರಾವ್, ಬೆಂಗಳೂರು
|
Google Oneindia Kannada News

ತಿರುಪತಿ ತಿಮ್ಮಪ್ಪನನ್ನು ನೋಡಲು ಭಕ್ತಾದಿಗಳಿಗೆ ಡ್ರೆಸ್‌ಕೋಡ್ ನಿಯಮ ಸ್ವಾಗತಿಸಬಹುದಾಗಿದೆ. ಹೆಂಗಸರು ಸೀರೆಯಲ್ಲಿಯೂ, ಹೆಣ್ಣು ಮಕ್ಕಳು ಚೂಡಿದಾರದಲ್ಲಿಯೂ ಬರಬೇಕೆಂಬುದು ದೇವಸ್ಥಾನದ ಅಧಿಕಾರಿಗಳ ಇಚ್ಛೆ. ಇದು ಸರಿಯಾಗಿಯೂ ಇದೆ.

ಗಂಡಸರಿಗೆ ಪಂಚೆ. ಇದು ಭಕ್ತಾದಿಗಳು ದೇವಸ್ಥಾನಕ್ಕೆ ಹೋಗುವ ರೀತಿ ನೀತಿ. ಪ್ಯಾಂಟ್ಸ್, ಜೀನ್ಸ್, ಟೀ ಷರ್ಟ್ ಹಾಗೆಯೇ ತುಂಡು ಲಂಗಗಳನ್ನು, ಬಿಗಿಯಾದ ವಸ್ತ್ರಗಳನ್ನು ನಿಷೇಧಿಸಿರುವುದು ಸಂತಸದ ಸಂಗತಿ. ರೆಸ್ಟೋರೆಂಟ್ ಗೆ ಔಟಿಂಗ್ ಹೋಗುವಾಗ ತೊಡುವ ಡ್ರೆಸ್ ಅನ್ನು ಧರಿಸಿ ದೇವಸ್ಥಾನದ ಪವಿತ್ರತೆ ಹಾಳುಗೆಡುವುದು, ಭಕ್ತಾದಿಗಳ ಗಮನ ಸೆಳೆಯುವುದು ಸರಿಯಲ್ಲ.

ತಿರುಪತಿ ದೇವಾಲಯದ ಆವರಣದಲ್ಲಿ ಕುಡಿಯುವ ನೀರಿನ ಬಾಟಲ್ ಅನ್ನು ಹಿಡಿದುಕೊಂಡು ಓಡಾಡುವಂತಿಲ್ಲ ಹಾಗೂ ತೆಗೆದುಕೊಂಡು ಹೋಗುವಂತೆಯೂ ಇಲ್ಲ. ಇದಕ್ಕೆ ಕಾರಣವೂ ಉಂಟು.

ದೇವಾಲಯದ ಮೇಲೆ ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆಯಿದೆಯೆಂದು ಆಡಳಿತ ಮಂಡಳಿಗೆ ಗುಪ್ತದಳ ಇಲಾಖೆ ಎಚ್ಚರಿಸಿದೆ. ಆದರೆ, ತಿಮ್ಮಪ್ಪನ ದರ್ಶನ ಬೇಗ ಆಗುವುದಿಲ್ಲ. ತಾಸುಗಟ್ಟಲೆ ಮಕ್ಕಳು, ಮಹಿಳೆಯರು, ವಯಸ್ಸಾದವರು ಕಾಯಲೇ ಬೇಕು. ಅಲ್ಲದೇ ಸಾಲಿನಲ್ಲಿ ನಿಂತು ಸಾಗ ಬೇಕಾಗಿದೆ.

ಆ ಸಮಯದಲ್ಲಿ ಬಾಯಾರಿಕೆಯಾದರೆ ನೀರು ಕುಡಿಯಲು ಎಲ್ಲಿಗೆ ಹೋಗಬೇಕು. ಮಕ್ಕಳ, ವಯಸ್ಸಾದವರ ಗತಿ ಏನು? ಇದರ ಬಗ್ಗೆ ಟಿಟಿಡಿ ಯೋಚಿಸಬೇಕಲ್ಲವೇ? ಹೀಗಾಗಿ ಪ್ರತಿ 60 ಅಡಿಗೂ ನೀರು ದೊರೆಯುವಂತೆ ನಲ್ಲಿಗಳನ್ನು ಸ್ಥಾಪಿಸಬೇಕು. ಹೇಗೂ ಭಕ್ತಾದಿಗಳಿಂದ ಕೋಟಿ ಕೋಟಿ ಹಣ ಬಂದು ಬೀಳುತ್ತಿದೆ.

ಹಾಗಾಗಿ ಭಕ್ತಿಗಾಗಿ ಭಕ್ತರ ಪರವಾಗಿ ಅನುಕೂಲವನ್ನು ಮಾಡಬಹುದಲ್ಲವೆ. ಈ ವಿಐಪಿಗಳಿಂದ ಲಕ್ಷಾಂತರ ಭಕ್ತಾದಿಗಳು ತಾಸುಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇವರನ್ನೂ ಕೂಡ ಸಾಮಾನ್ಯ ಜನರಂತೆ ನೋಡುವುದು ಒಳಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X