ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಡಿಯುವ ಕನ್ನಡ ಕೈಗಳಿಗೆ ಕೆಲ್ಸ ಕೊಡಿ

By Shami
|
Google Oneindia Kannada News

GIM 2010 should provide jobs for Kannadigas
ಜಿಮ್ 2010ರ ಮೂಲಕ ಕೈಗಾರಿಕಾ ಕ್ರಾಂತಿಗೆ ಕಂಕಣ ತೊಟ್ಟಿರುವ ಕರ್ನಾಟಕ ಸರಕಾರಕ್ಕೆ ಶುಭಾಶಯಗಳು. ಈ ಕ್ರಾಂತಿಯ ಫಲ ನಾಡಿಗೆ ದೊರಕಬೇಕಾದರೆ ಸ್ಥಳೀಯರಿಗೆ ಉದ್ಯೋಗ ಲಭ್ಯವಾಗಬೇಕು. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವುದಕ್ಕೆ ಇದು ಸಕಾಲ ಎಂದು ಎಚ್ಚರಿಸುವ ಒಬ್ಬ ಕನ್ನಡ ಯುವಕನ ಪತ್ರ ಇಲ್ಲಿದೆ. ಇದು ಬನವಾಸಿ ಬಳಗದ ಗೂಗಲ್ ಗುಂಪಿನಲ್ಲಿ ನಮ್ಮ ಕಣ್ಣಿಗೆ ಕಂಡ ಪತ್ರ. ಕೇಂದ್ರ ಮತ್ತು ರಾಜ್ಯ ಸರಕಾರದ ಹಾಗೂ ಕರ್ನಾಟಕದಲ್ಲಿ ಬಂಡವಾಳ ಹೂಡುತ್ತಿರುವ ಧಣಿಗಳಿಗೆ ಈ ಹುಡುಗನ ಮೊರೆ ಕೇಳಿಸುತ್ತದಾ?- ದಟ್ಸ್ ಕನ್ನಡ.

---------- Forwarded message ----------
From: Amarnath Shivashankar
Date: 2010/6/4
Subject: ಕರ್ನಾಟಕದಲ್ಲಿ ಬಂಡವಾಳ + ಉದ್ದಿಮೆ ===> ಕನ್ನಡಿಗರಿಗೆ ಕೆಲಸ
To: [email protected]

ಗೌರವಾನ್ವಿತರೇ,

ನಮಗೆಲ್ಲರಿಗೂ ತಿಳಿದಿರುವ ಹಾಗೆ ಜೂನ್ 3 ಮತ್ತು 4ರಂದು ಬೆಂಗಳೂರಿನಲ್ಲಿ "ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ" ನಡೀತು. ನಾನಾ ಕಂಪನಿಗಳು ಒಟ್ಟಾರೆಯಾಗಿ ಸುಮಾರು 5 ಲಕ್ಷ ಕೋಟಿ ರುಪಾಯಿಗಳಷ್ಟು ಬಂಡವಾಳ ಹಾಕ್ತಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ಇದು ಅತ್ಯುತ್ತಮ ಬೆಳವಣಿಗೆ. ಇದಕ್ಕಾಗಿ ತುಂಬು ಹೃದಯದ ಅಭಿನಂದನೆಗಳು.

ಪ್ರತಿಯೊಬ್ಬ ಹೂಡಿಕೆದಾರನೂ ಸಾವಿರಾರು ಕೋಟಿಯಷ್ಟು ಬಂಡವಾಳ ಕರ್ನಾಟಕದಲ್ಲಿ ಹಾಕ್ತಿದ್ದಾರೆ ಅಂದರೆ ಅದರ ಅರ್ಥ, ನಮ್ಮ ಊರು, ನಮ್ಮ ಜನ, ನಮ್ಮ ನಿಸರ್ಗ, ನಮ್ಮ ವಾತಾವರಣ ಅತ್ಯಂತ ಶ್ರೇಷ್ಠ ಅಂತ ತಾನೆ?

ಇದು ಬೆಂಗಳೂರಿನ ಜೊತೆ ನಮ್ಮ ಇತರೆ ಜಿಲ್ಲೆಗಳನ್ನು, ಸಮಗ್ರ ಕರ್ನಾಟಕವನ್ನೂ ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಉದ್ದಿಮೆಗಳು ಕರ್ನಾಟಕದಲ್ಲಿ ಸ್ಥಾಪನೆ ಆಗುತ್ತಿರುವುದರಿಂದ ಕನ್ನಡಿಗರಿಗೆ, ಈ ಮಣ್ಣಿನ ಮಕ್ಕಳಿಗೆ ಅನುಕೂಲವಾಗಬೇಕು ಅನ್ನೋದು ಸಹಜ ಧರ್ಮವಲ್ವಾ?

ಹಾಗಾಗಿ ನಮ್ಮ ಸರ್ಕಾರಕ್ಕೆ ಇರುವ ದೊಡ್ಡ ಜವಾಬ್ದಾರಿ ಅಂದ್ರೆ "ಸರೋಜಿನಿ ಮಹಿಷಿ" ವರದೀನಾ ಅನುಷ್ಠಾನ ಮಾಡೋದು. ಕನ್ನಡಿಗರಿಗೆ ಕೆಲಸ, ಕರ್ನಾಟಕ ಸರ್ಕಾರಕ್ಕೆ ಆದಾಯ ಬರುವುದಿಂದ ಕನ್ನಡ-ಕನ್ನಡಿಗ-ಕರ್ನಾಟಕದ ಸಮಗ್ರ ಏಳಿಗೆ ಆಗುತ್ತದೆ.

ಇದು ಕನ್ನಡಪರ ಸರ್ಕಾರವಾಗಿರುವುದರಿಂದ ಕನ್ನಡಿಗರಿಗೆ ಆದ್ಯತೆ ಸಿಗುತ್ತದೆ ಎನ್ನುವ ಭರವಸೆ ನಮ್ಮಲ್ಲಿದೆ. ಇಲ್ಲದಿದ್ದರೆ ಸದ್ಯದ ಐ.ಟಿ ಕ್ಷೇತ್ರದಲ್ಲಿ ಆಗಿರೋ ತರಹ ವಲಸಿಗರ ಸಂಖ್ಯೆ ವಿಪರೀತ ಆಗುತ್ತದೆ. ಒಂದೊಳ್ಳೆ ವಲಸೆ ಕಾಯಿದೆನ ರೂಪಿಸೋದು ಹಾಗು ಸರೋಜಿನಿ ಮಹಿಷಿ ವರದಿಯ ಅನುಷ್ಠಾನ ತಕ್ಷಣ ಆಗಬೇಕು ಅನ್ನುವುದು ಪ್ರತಿಯೊಬ್ಬ ಕನ್ನಡಿಗನ ಮನದಾಳದ ಮಾತು.

ಇಂತಿ,
ಅಮರ, ಬೆಂಗಳೂರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X