ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಮೀಸಲಾತಿ ನಿರರ್ಥಕವೇ?

By * ಎಚ್. ಆನಂದರಾಮ ಶಾಸ್ತ್ರೀ
|
Google Oneindia Kannada News

H. Anandaram Shastry
ಇಂದಲ್ಲ ನಾಳೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ದೊರಕುವುದು ನಿಶ್ಚಿತ. ಆದರೆ ಈ ಮೀಸಲಾತಿಯು ನ್ಯಾಯಬದ್ಧವಾಗಿ ಬಳಕೆಯಾಗುತ್ತದೆಯೆಂಬ ಗ್ಯಾರಂಟಿ ಮಾತ್ರ ಇಲ್ಲ.

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಸೀಟುಗಳ ಪುನರ್ವರ್ಗೀಕರಣದಿಂದಾಗಿ ಸಾಮಾನ್ಯ ವರ್ಗದ ಕೆಲವು ಸೀಟುಗಳು ಮಹಿಳೆಯರಿಗೆ ಮೀಸಲಾದವಷ್ಟೆ. ಆ ಸೀಟುಗಳಿಗೆ ವಿವಿಧ ಪಕ್ಷಗಳಿಂದ ಈ ಮೊದಲು ಸ್ಪರ್ಧಿಸಲಿದ್ದ ಪುರುಷರೇನಿದ್ದರಲ್ಲಾ, ಅವರ ಪತ್ನಿಯರೇ ಇದೀಗ ಆಯಾ ಪಕ್ಷಗಳ ಮಹಿಳಾ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ! ಬಹುತೇಕ ಸ್ಥಾನಗಳ ಕಥೆ ಇದೇ ಆಗಿದೆ. ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲಾತಿ ಜಾರಿಗೆ ಬಂದಮೇಲೆ ಲೋಕಸಭಾ ಚುನಾವಣೆಯಲ್ಲಿ ಆಗುವುದೂ ಇದೇ ಕಥೆ.

ಹೀಗಾದರೆ ಮಹಿಳಾ ಮೀಸಲಾತಿ ಜಾರಿಗೆ ಬಂದೂ ಏನು ಪ್ರಯೋಜನ? ರಾಜಕೀಯ ಪಕ್ಷಗಳು ಅರ್ಹ ಮಹಿಳೆಯರಿಗೆ ಟಿಕೆಟ್ ನೀಡುವುದನ್ನು ಬಿಟ್ಟು ಉದ್ದೇಶಿತ ಪುರುಷರ ಪತ್ನಿ, ಪುತ್ರಿಯರಿಗೇ ಟಿಕೆಟ್ ನೀಡಿ ಗೆಲ್ಲಿಸಿ, ಮಹಿಳೆಯ ಹೆಸರಿನಲ್ಲಿ ಆ ಪುರುಷರೇ ಆಡಳಿತ ನಡೆಸುವಂತಾದರೆ ಆಗ ಪರಿಸ್ಥಿತಿ ಈಗಿನದಕ್ಕಿಂತ ಅನರ್ಥಕರವಲ್ಲವೆ? ಜೊತೆಗೆ, ಅರ್ಹ ಮಹಿಳೆಯರನ್ನು ಅವಕಾಶದಿಂದ ವಂಚಿಸಿದಂತಲ್ಲವೆ? ಮಹಾನಗರಪಾಲಿಕೆ ಚುನಾವಣೆ ವಿಷಯದಲ್ಲಿ ಬೆಂಗಳೂರಿನಲ್ಲೀಗಾಗಲೇ ಈ ರೀತಿ ಆಗುತ್ತಿರುವುದರಿಂದ ಪ್ರಾಜ್ಞರೆಲ್ಲರೂ, ಮುಖ್ಯವಾಗಿ ಮಹಿಳಾ ಸಂಘಟನೆಗಳು ರಾಜಕೀಯ ಪಕ್ಷಗಳ ಈ ಅನ್ಯಾಯವನ್ನು ಪ್ರತಿಭಟಿಸಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X