ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳ್ಳ ಮಳ್ಳಿಗೆ ಮೈಸೂರು ಪಾಕ್

By * ಎಸ್ ಎನ್ ವಿ ಪ್ರಸಾದ್
|
Google Oneindia Kannada News

Illegal immigrations and international laws
ಮಳ್ಳ ಮಳ್ಳಿ ತರಹ ಗಡಿಯೊಳಗೆ ನುಸುಳಿ ಇನ್ನೊಂದು ದೇಶಕ್ಕೆ ನುಗ್ಗುವುದು ಮಹಾಪರಾಧ. ಅಪರಾಧಕ್ಕೆ ತಕ್ಕ ಶಿಕ್ಷೆ ಕಾಲಕಾಲಕ್ಕೆ ತಕ್ಕಂತೆ ಇದ್ದೇ ಇರುತ್ತದೆ. ಅದು ಒಂದೊಂದು ದೇಶದಲ್ಲಿ ಒಂದೊಂದು ಟೈಪ್. ಹಲವು ದೇಶಗಳಲ್ಲಿ ಈ ಬಗೆಗೆ ಇರುವ ಕಾನೂನು ಮತ್ತು ಅದಕ್ಕೊಪ್ಪುವ ಶಿಕ್ಷೆಯ ಪ್ರಮಾಣಗಳನ್ನು ಇಲ್ಲಿ ಸ್ಥೂಲವಾಗಿ ಪಟ್ಟಿಮಾಡಲಾಗಿದೆ. ಓದಿ.

1) ಉತ್ತರ ಕೊರಿಯಾ ಗಡಿಯೊಳಗೆ ನುಸುಳಿಹೋದರೆ 12 ವರ್ಷ ಕಠಿಣ ಶಿಕ್ಷೆ.

2) ಇರಾನ್ ಗಡಿಯೊಳಗೆ ಅಪ್ಪಿತಪ್ಪಿ ಕಾಲಿಟ್ಟರೆ ಅನಿರ್ದಿಷ್ಟಕಾಲದವರೆಗೆ ಸೆರೆಮನೆ ವಾಸ.

3) ಆಫ್ಗಾನಿಸ್ಥಾನದೊಳಗೆ ಹೇಳದೇ ಕೇಳದೇ ಪ್ರವೇಶ ಮಾಡಿದಿರೋ, ಅಲ್ಲೇ ನಿಮ್ಮನ್ನು ಗುಂಡಿಟ್ಟು ಫಿನಿಷ್.

4) ಆದರೆ ಸೌದಿ ಅರೇಬಿಯಾದಲ್ಲಿ ಈ ತರಹದ ತಪ್ಪೆಸಗಿದರೆ ಜಸ್ಟ್ ಜೈಲು.

5) ಆಕಸ್ಮಾತ್ ಚೀನಾದ ಗಡಿಯೊಳಗೆ ನೀವು ಅಕ್ರಮ ಪ್ರವೇಶ ಮಾಡಿದರೆ ನಿಮ್ಮ ಬಗ್ಗೆ ಆಮೇಲೆ ನಮಗೆ ಏನೂ ವಿಷಯ ಗೊತ್ತಾಗುವುದೇ ಇಲ್ಲ. ನಿಮ್ಮನ್ನು ನೋಡುವುದು, ಎಲ್ಲಿದ್ದೀರಾ ಹೇಗಿದ್ದೀರಾ ಬ್ರಹ್ಮನಿಗೂ ಗೊತ್ತಾಗಲ್ಲ.

6) ವೆನಿಜುವೆಲಾ ಗಡಿಯೊಳಗೆ ನುಗ್ಗಿದಿರಿ ಎಂದಿಟ್ಟುಕೊಳ್ಳಿ. ನೀವೊಬ್ಬ ಪತ್ತೇದಾರಿ ಆಸಾಮಿ ಎಂದು ಪರಿಗಣಿಸಲಾಗುವುದು. ಮತ್ತು ನಿಮ್ಮ ಹಣೆಬರಹ ಅಲ್ಲಿಗೆ ಕೊನೆ ಎಂದು ತಿಳಿಯಬೇಕು.

7) ಕ್ಯೂಬಾದಲ್ಲೂ ಹೆಚ್ಚೂಕಡಿಮೆ ಇದೇ ತರಹ. ನಿಮ್ಮನ್ನು ರಾಜಕೀಯ ಬಂದೀಖಾನೆಯಲ್ಲಿ ಕೊಳೆಹಾಕಲಾಗುತ್ತದೆ.

8) ಬ್ರಿಟನ್ನಿನಲ್ಲಿ ಹಾಗಲ್ಲ. ಮೊದಲು ನಿಮ್ಮನ್ನು ಬಂಧಿಸಲಾಗುತ್ತದೆ. ಆನಂತರ ವಿಚಾರಣೆ ನಡೆಸಲಾಗುತ್ತದೆ. ಅಂತಿಮವಾಗಿ ಸೆರೆಮನೆಗೆ ಕಳಿಸಿ ಅಲ್ಲಿಂದ ಗಡೀಪಾರು ಮಾಡಲಾಗುತ್ತದೆ.

ಆದರೆ,

ನೀವು ಮುಸ್ಲಿಂ ಆಗಿದ್ದು ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದರೆ ಏನೇನು ಅನುಭವಿಸಬೇಕಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿರಿ.

ನಿಮಗೆ ಮೊದಲು ಪಡಿತರ ಚೀಟಿ ಕೊಡಲಾಗುತ್ತದೆ. ಆನಂತರ ಮತದಾರನ ಗುರುತು ಚೀಟಿ ಮತ್ತು ಪಾಸ್ ಪೋರ್ಟ್ ನೀಡಲಾಗುತ್ತದೆ. ಹಜ್ ಯಾತ್ರೆಗೆ ಹೋಗಬೇಕೆನಿಸಿರೆ ಅದಕ್ಕೆ ಸಬ್ಸಿಡಿ ಇದೆ. ಉದ್ಯೋಗ ಸಿಗತ್ತೆ. ವಾಹನ ಚಾಲನೆ ಪರವಾನಗಿ ಸಿಗತ್ತೆ, ಉದ್ಯೋಗದಲ್ಲಿ ಮೀಸಲಾತಿ ಸಿಗತ್ತೆ, ಜತೆಗೆ ಅನೇಕಾನೇಕ ವಿಶೇಷ ಸವಲತ್ತುಗಳು, ಕ್ರೆಡಿಟ್ ಕಾರ್ಡು, ಮನೆ ಕಟ್ಟುವುದಕ್ಕೆ ರಿಯಾಯಿತಿ ದರದಲ್ಲಿ ಸಾಲ, ಉಚಿತ ಶಿಕ್ಷಣ, ಉಚಿತ ಆರೋಗ್ಯ ತಪಾಸಣೆ, ಮತ್ತು ನಿಮ್ಮ ಆಯುರಾರೋಗ್ಯ ಕ್ಷೇಮ ಸಮಾಚಾರ ನೋಡಿಕೊಳ್ಳುವ ಸಲುವಾಗಿ ನವದೆಹಲಿಯಲ್ಲಿ ನಿಮಗಾಗಿಯೇ ಸಮಾಜ ಸೇವಕರ ತಂಡ ಕಚ್ಚೆಕಟ್ಟಿ ನಿಂತಿರುತ್ತದೆ.

ಯಾವುದೇ ಚುನಾವಣೆ ಇರಲಿ, ನಿಮ್ಮ ಮತದಾನದ ಹಕ್ಕಿಗೆ ಯಾವುದೇ ಕಾರಣಕ್ಕೂ ಚ್ಯುತಿಯಾಗದಂತೆ ಅವರು ಎಚ್ಚರ ವಹಿಸುತ್ತಾರೆ. ನಿಮ್ಮ ಹೆಂಡಂದಿರಿಗೆ ಎಷ್ಟೇ ಮಕ್ಕಳಾಗಲಿ, ಅವರಿಗೇನೂ ಭಾರ ಎನಿಸುವುದಿಲ್ಲ. ಜನಗಣತಿ ಅಧಿಕಾರಿಗಳು ಮನೆಬಾಗಿಲಿಗೆ ಬಂದು ಕುಟುಂಬ ವಿವರಗಳನ್ನು ಬರೆದುಕೊಂಡು ಹೋಗುತ್ತಾರೆ. ಹಬ್ಬಇರಲಿ, ಹುಣ್ಣಿಮೆಯೇ ಇರಲಿ, ಕಷ್ಟಸುಖಕ್ಕೆ ಆಗುವ ಬಂಧುಬಾಂಧವರು ನಿಮಗೆ ಇಲ್ಲಿ ಸಿಗುತ್ತಾರೆ. ಚಿತ್ರಾನ್ನ ಇಲ್ಲದಿದ್ದರೂ ಪರವಾಗಿಲ್ಲ, ಕಡೇ ಪಕ್ಷ ಬಿರಿಯಾನಿಗೆ ವ್ಯವಸ್ಥೆ ಮಾಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X