ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಜಡಾಗಳ ಕೊರಳಿಗೆ ಗಂಟೆ ಕಟ್ಟುವವರಾರು?

By * ಎಂ.ಶಿವಸ್ವಾಮಿ, ಲಿಂಗರಾಜಪುರ
|
Google Oneindia Kannada News

Hijdas create nuisance at traffic
ಬೆಂಗಳೂರಿನಲ್ಲಿ ಇತ್ತೀಚೆಗೆ ಹಿಜಡಾಗಳ ಹಾವಳಿ ಹೆಚ್ಚಾಗುತ್ತಿದೆ. ಯಾವಾಲೋ ಒಮ್ಮೆ ಅಲ್ಲಲ್ಲಿ ಕಣ್ಣಿಗೆ ಬೀಳುತ್ತಿದ್ದ ಇವರ ದರ್ಶನ ಇತ್ತೀಚಿನ ದಿನಗಳಲ್ಲಿ ತುಂಬಾ ಜಾಸ್ತಿಯಾಗಿದೆ. ಇವರ ದರ್ಶನ ಬೇಡವೆಂದರೂ ನನಗೆ ದಿನನಿತ್ಯ ಲಭ್ಯವಾಗುತ್ತಿದೆ. ಲಿಂಗರಾಜಪುರದಿಂದ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವ ಹಾದಿಯುದ್ದಕ್ಕೂ ಪ್ರತಿನಿತ್ಯ ಇವರನ್ನು ನೋಡುವುದು ಮತ್ತು ಅವರ ಕೊಡುವ ಕಾಟ ತಡೆಯಲು ಅಸಾಧ್ಯವಾಗುತ್ತಿದೆ. ಇಷ್ಟು ಸಂಖ್ಯೆಯಲ್ಲಿ ಹಿಜಡಾಗಳು ಬೆಂಗಳೂರಿನಲ್ಲಿ ಹೇಗೆ ಪ್ರತ್ಯಕ್ಷವಾದರು ಎಂದು ಬೆರಗಾಗಿದ್ದೇನೆ.

ನಾನು ಕೆಲಸಕ್ಕೆ ಹೋಗಿ ಬರುವ ದಾರಿಯುದ್ದಕ್ಕೂ ಸುಮಾರು 20 ಸಿಗ್ನಲ್ ಲೈಟುಗಳನ್ನು ದಾಟಬೇಕು. ಪ್ರತಿಯೊಂದು ಸಿಗ್ನಲ್ ಲೈಟಿನಲ್ಲೂ ಇವರು ಹಿಂಡುಹಿಂಡಾಗಿ ದಂಡೆತ್ತಿಬಂದು ಕಾಸು ಕೀಳುತ್ತಾರೆ. ಒಬ್ಬರಿಗೋ ಇಬ್ಬರಿಗೋ ರೂಪಾಯಿ ಎರಡು ರೂಪಾಯಿ ಕೊಟ್ಟು ಸಾಗಹಾಕಬಹುದು, ಆದರೆ ಹತ್ತು ಸಿಗ್ನಲ್ ಲೈಟಿನ ಸ್ಟಾಪುಗಳಲ್ಲಿ ಪ್ರತಿದಿನ ಅಟಕಾಯಿಸಿಕೊಳ್ಳು ಇವರ ಕಾಟದಿಂದ ಬೇಸತ್ತಿದ್ದೇನೆ. ಕೆಲವರಿಗೆ ಕಾಯಿನ್ ಕೊಟ್ಟರೆ ಆಗದು. ಹತ್ತು ರೂಪಾಯಿ ಕೊಡು ರಾಜಾ ಎಂದು ಕೆನ್ನೆ ಸವರಿ ದೃಷ್ಟಿ ತೆಗೆಯುತ್ತಾರೆ.

ಸಾರ್ವಜನಿಕ ಸ್ಥಳದಲ್ಲಿ ವಾಹನ ಚಾಲಕರ ತಲೆ ಹಾಳು ಮಾಡುತ್ತಿರುವ ಇವರ ಉಪಟಳ ತಡೆಯುವವರಿಲ್ಲವೇ ಎಂದು ಕೇಳುತ್ತಿದ್ದೇನೆ. ಬೈಕಿನಲ್ಲಿ ನಿಂತಾಗ ಬಂದು ಕೆನ್ನೆ ಮುಟ್ಟುವುದು, ತಲೆ ಸವರುವುದು, ಸೊಂಟಕ್ಕೆ ಕಚಗುಳಿ ಇಡುವುದು, ಗಾಡಿ ಆಫ್ ಮಾಡಿ ಕೀ ತೆಗೆದುಕೊಳ್ಳುವುದು ಮುಂತಾದ ಕಪಿಚೇಷ್ಟೆಗಳನ್ನು ಮಾಡುವವರ ವಿರುದ್ಧ ನೊಂದವರು ದನಿ ಎತ್ತಲೇ ಬೇಕಾಗಿದೆ.

ಎಲ್ಲರಿಗೂ ಬದುಕುವ ಹಕ್ಕಿದೆ. ಹಾಗೆ ಇವರಿಗೂ ಕೂಡ ಇರಲಿ. ಆದರೆ ಜನರನ್ನು ಸುಲಿಗೆ ಮಾಡಿಕೊಂಡು ಹಿಂಸೆ ಕೊಡುವುದು ಯಾವ ನ್ಯಾಯ? ಕೆಲವು ಬಾರಿ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿರುವ ಪೊಲೀಸರ ಗಮನಕ್ಕೆ ಈ ವಿಚಾರ ತಂದಿದ್ದೇನೆ. ಅವರು ಏನೂ ಆಗಿಲ್ಲವೇನೋ, ಅಥವಾ ರಸ್ತೆಯಲ್ಲಿ ಹಿಜಡಾಗಳು ಉಪದ್ರವ ಕೊಡುವುದನ್ನು ಪೊಲೀಸ್ ಕಮಿಷನರ್ ಅಧಿಕೃತ ಮಾಡಿದ್ದಾರೋ ಎನ್ನುವಂತೆ ವರ್ತಿಸುತ್ತಾರೆ. ಕೋರಮಂಗಲದ ಸೋನಿ ಮಳಿಗೆಯ ಸಮೀಪವಿರುವ ಸಿಗ್ನಲ್ ನಲ್ಲಿ ನಿಂತಿದ್ದ ಒಬ್ಬ ಕಾನ್ ಸ್ಟೇಬಲ್ ಗೆ ಒಮ್ಮೆ ಈ ವಿಷಯ ಹೇಳಿ ತಕರಾರು ಎತ್ತಿದೆ. ಅಯ್ಯೋ ಹೋಗಿ ಸ್ವಾಮಿ. ಇವು ನಮ್ಮನ್ನೇ ಬಿಡಲ್ಲ. ನಮ್ಮ ಹತ್ತಿರಾನೇ ಕಾಸು ಕೀಳುತ್ತವೆ ಎಂದು ಕೈಚೆಲ್ಲಿದ. ಬೈಕಲ್ಲಿ ಮಾತ್ರವಲ್ಲ, ಎಸಿ ಕಾರಿನಲ್ಲಿ ಗ್ಲಾಸ್ ಹಾಕಿಕೊಂಡು ಕುಳಿತಿದ್ದರೆ, ಗಾಜು ಖಟ್ ಖಟ್ ಎಂದು ಕುಟ್ಟಿ ಹಿಂಸೆ ಮಾಡುತ್ತಾರೆ.

ಶೇಕಡಾ 90ರಷ್ಟು ಹಿಜಡಾಗಳು ತಮಿಳಿನಲ್ಲಿ ಮಾತನಾಡುತ್ತಾರೆ. ಇವರೆಲ್ಲ ತಮಿಳುನಾಡಿನಿಂದ ಬೆಂಗಳೂರಿಗೆ ವಲಸೆ ಬಂದಿರಲಿಕ್ಕೂ ಸಾಕು. ಕಾವೇರಿ ನೀರು ಜಗಳ, ಹೊಗೇನಕಲ್ ವಿವಾದಗಳು ಕನ್ನಡ ನಾಡಿನಲ್ಲಿ ಬಹಿರಂಗವಾಗಿ ನಡೆಯುತ್ತವೆ. ಆದರೆ, ತಮಿಳು ಹಿಜಡಾಗಳ ಈ ಬಗೆಯ ನಿತ್ಯ ಕಿರಿಕಿರಿಗಳನ್ನು ಸಹಿಸಿಕೊಳ್ಳುವವರಾರು. ನಮಗೇನು ಕರ್ಮ? ನನ್ನಂತೆ ಅನೇಕರನ್ನು ಈ ಸಮಸ್ಯೆ ಬಾಧಿಸುತ್ತಿದೆ. ಆದರೆ ಎಲ್ಲರೂ ಸಹಿಸಿಕೊಂಡು ಸುಮ್ಮನಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರಿನ ಆಡಳಿತ, ಅಂದರೆ, ಬಿಬಿಎಂಪಿ, ಪೊಲೀಸರು, ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಗುಂಪುಗಳು ಕಲೆತು ಚರ್ಚಿಬೇಕಾಗಿದೆ.

ಸಮಸ್ಯೆಯನ್ನು ಹೀಗೇ ಬೆಳೆಯಲು ಬಿಟ್ಟರೆ, ಒಂದು ದಿನ ಹಿಜಡಾಗಳ ಸಂಖ್ಯೆ ಲಕ್ಷಾಂತರವಾಗಿ ಬೆಂಗಳೂರಿನಲ್ಲಿ ಅವರೇ ಒಂದು ಕಾಲೋನಿ ಕಟ್ಟಿಕೊಳ್ಳುತ್ತಾರೆ. ಅಲ್ಲಿಂದ ಚುನಾವಣೆಗೆ ನಿಂತು ಗೆದ್ದು ಬಂದರೂ ಆಶ್ಚರ್ಯವಿರುವುದಿಲ್ಲ. ಬೆಂಗಳೂರು ದೇವರೇ ಗತಿ ಆಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X