ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ದೇಶಗಳಿಗೂ ಚಂದ್ರನ ಮೇಲೇಕೆ ಕಣ್ಣು?

By Staff
|
Google Oneindia Kannada News

ಚಂದ್ರನ ಅಂಗಳಕ್ಕೆ ಉಪಗ್ರಹವನ್ನು ಕಳುಹಿಸುವ ಭಾರತದ ಮಹತ್ವಾಕಾಂಕ್ಷಿ ಯೋಜನೆ ಎಂದೇ ಬಿಂಬಿಸಲಾದ ಚಂದ್ರಯಾನ-1 ನನ್ನ ಪ್ರಕಾರ ಒಂದು ನಿಷ್ಪ್ರಯೋಜಕ, ಲಾಭರಹಿತ ಯೋಜನೆ. ಸುಖಾಸುಮ್ಮನೆ ಸಾರ್ವಜನಿಕ ಸಂಪತ್ತಾದ 400 ಕೋಟಿ ರು.ಗಳನ್ನು ಈ ಯೋಜನೆಗಾಗಿ ಖರ್ಚು ಮಾಡಿ ಚಂದ್ರನನ್ನು ಸುತ್ತಲು ಉಪಗ್ರಹ ಉಡಾಯಿಸಲಾಯಿತು. ಮತ್ತೊಂದು ಮುಖ್ಯ ವಿಚಾರವೆಂದರೆ ಈ ಉಪಗ್ರಹಕ್ಕೆ ವಿಮೆ ಮಾಡಿಸಿರಲಿಲ್ಲ. ಒಂದು ವೇಳೆ ಅನಾಹುತ ಸಂಭವಿಸಿದ್ದರೆ, ಅಷ್ಟೂ ಹಣ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುತ್ತಿತ್ತು.

ಚಂದ್ರನ ಬಗ್ಗೆ ಈ ವಿಜ್ಞಾನಿಗಳಿಗೆ ಅದು ಏನು ಮೋಹವೋ ವ್ಯಾಮೋಹವೋ? ಚಂದ್ರನ ಅನ್ವೇಷಣೆಗಾಗಿ ಇದುವರೆಗೂ ಸಾರ್ವಜನಿಕರ ಅಪಾರ ಹಣ ಬಳಸಿಕೊಂಡಿದ್ದಾರೆ. ಬರೀ ಆಕಾಶದ ಕಡೆಗೆ ದೃಷ್ಟಿ ನೆಡುವ ವಿಜ್ಞಾನಿಗಳು ಭೂಮಿ ಕಡೆಗೂ ಒಂಚೂರು ಕಣ್ಣಾಡಿಸಿದ್ದರೆ ಬಡತನ ರೇಖೆಗಿಂತಲೂ ಕೆಳಗಿರುವ, ಹೊಟ್ಟೆಗೆ ಹಿಟ್ಟಿಲ್ಲದೆ ನರಳುತ್ತಿರುವ ಲಕ್ಷಾಂತರ ಅನಾಥರು ಕಾಣುತ್ತಿದ್ದರು. ಹೊಸ ಹೊಸ ಶೋಧನೆಗಳನ್ನು ನಾನು ವಿರೋಧಿಸುತ್ತಿಲ್ಲ. ವಿಜ್ಞಾನಿಗಳು ಸಮಾಜದೊಂದಿಗೂ ಉತ್ತಮ ಬಾಂಧವ್ಯ ಹೊಂದಿರಬೇಕಾಗುತ್ತದೆ, ಅಂದರೆ ಭೂಮ್ಯ ಮೇಲಿನ ಆಗುಹೋಗುಗಳಿಗೆ ಸ್ಪಂದಿಸಬೇಕಾಗುತ್ತದೆ.

ವಿಜ್ಞಾನಿಗಳು ಹೇಳುವ ಪ್ರಕಾರ ಚಂದ್ರನಲ್ಲಿರು ಗುಟ್ಟುಗಳನ್ನು ಶೋಧಿಸುವ ಸಲುವಾಗಿ ಚಂದ್ರಯಾನವನ್ನು ಕೈಗೊಳ್ಳಲಾಗಿದೆ. ಅಲ್ಲಿನ ಖನಿಜ ಸಂಪತ್ತನ್ನು ಶೋಧಿಸಲು ನೆರವಾಗುತ್ತದೆ ಎನ್ನುತ್ತಿದ್ದಾರೆ. ಅಲ್ಲಿ ಖನಿಜಗಳಿದ್ದರೆ ನಮಗೇನು ಪ್ರಯೋಜನ. ಆ ಖನಿಜ ಸಂಪತ್ತನ್ನು ಇಲ್ಲಿಗೆ ತರಲು ಸಾಧ್ಯವೆ? ಹೊಟ್ಟೆ ತುಂಬಿದ ರಷ್ಯ, ಅಮೆರಿಕಾಗಳೇ ಚಂದ್ರನ ಕುರಿತ ಅನ್ವೇಷಣೆಗಳನ್ನು ಕೈಬಿಟ್ಟು ದಶಕಗಳೇ ಕಳೆದು ಹೋಗಿವೆ. ಭಾರತ ಈಗ ಚಂದ್ರಯಾನ ಕೈಗೊಳ್ಳುವುದರಲ್ಲಿ ಯಾವ ಅರ್ಥವಿದೆ? ಮಾನವನ ಏಳಿಗೆಗೆ ಶ್ರಮಿಸದೆ ವಿಜ್ಞಾನಿಗಳು ಅಸಂಬದ್ಧ ಪ್ರಯೋಗಗಳನ್ನು ಮಾಡುತ್ತಿರುವುದು ಶೋಚನೀಯ.

ಮತ್ತೊಂದು ವಿಚಾರ. ಎಲ್ಲ ದೇಶಗಳೂ ಚಂದ್ರನ ಮೇಲೆಯೇ ಯಾಕೆ ಕಣ್ಣಿಟ್ಟಿದ್ದಾರೆ. ಬೇರೆ ಗ್ರಹಗಳೇ ಇಲ್ಲವಾ !

ರಮೇಶ್ , ಬಾಳೆಹೊನ್ನೂರು.

ನನಸಾದ ಭಾರತದ ಚಂದ್ರಯಾನದ ಕನಸು
ಚಂದ್ರಯಾನ ಯೋಜನೆಯಲ್ಲಿ ಕನ್ನಡಿಗರ ಪಾತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X