ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನೆಬೆಲ್ಲದಂಥ ಮಿತ್ರರಿಗೆ ಮಾತ್ರ!

By Staff
|
Google Oneindia Kannada News

Greeting Cards as sweet as Bellary jaggeryಡಿಯರ್‌ ದಟ್ಸ್‌ಕನ್ನಡ,

ಇಲ್ಲಿರುವ ಇಮೇಜ್‌ಗಳು ಯಾವುದರದ್ದು ಹೇಳ್ತೀರಾ? ಛೇ, ಪಾಪ ಸದಾ ಬಿಜಿಯಾಗಿರುವ ಪತ್ರಕರ್ತರಿಗೆ ನಾನು ಈ ರೀತಿ ತೊಂದರೆ ಕೊಡುವುದು ಸರಿಯಲ್ಲ. ಶೀರ್ಷಿಕೆಗಳನ್ನು ಓದಿ ಬಿಡಿ ಸಾಕು!

ಗಾಣದಲ್ಲಿ ಕಬ್ಬಿನ ರಸ ತೆಗೆಯುತ್ತಿರುವುದು

ಕಬ್ಬಿನ ರಸದ ಪಾಕ ತಯಾರಿಸುತ್ತಿರುವುದು

ಹದವಾದ ಬಿಸಿ ಪಾಕವನ್ನು ತಟ್ಟೆಯಾಕಾರದ ಅಚ್ಚಿಗೆ ಹುಯ್ಯುತ್ತಿರುವುದು

ಸಿಹಿಯಾದ ಸವಿಯಾದ ಬೆಲ್ಲ ತಯಾರು!

ಇಲ್ಲಿ ನೀವು ನೋಡುತ್ತಿರುವ ಬೆಲ್ಲದಷ್ಟು ಹೊಸತಾಗಿ, ಸಿಹಿಯಾಗಿ, ಮೃದುವಾಗಿ, ಮಧುರವಾಗಿರಲಿ ನಿಮ್ಮ ಮತ್ತು ನಿಮ್ಮ ಟೀಮ್‌ನ ಹಾಗು ನಿಮ್ಮ ಓದುಗರ 2007!

ಅಂದಹಾಗೆ, ಈ ದೃಶ್ಯ ನನ್ನ ಕ್ಯಾಮೆರಾ ಕಣ್ಣಿಗೆ ಬಿದ್ದದ್ದು ಎಲ್ಲಿ ಗೊತ್ತಾ? ಚಿತ್ರದುರ್ಗದಿಂದ ಹಂಪೆ ಕಡೆಗೆ ಹೋಗುವಾಗ ಕೂಡ್ಲಿಗಿ ಎನ್ನುವ ಗ್ರಾಮದ ಬಳಿ. ನಾವು ಕೂತಲ್ಲೇ ನೀವು ಸುದ್ದಿ ನೀಡುತ್ತೀರ ಹೈ-ಟೆಕ್‌ ಸುದ್ದಿಮನೆಯಿಂದ! ಆದರೆ, ಯಾವ ತಾಂತ್ರಿಕತೆಯ ಅರಿವೂ ಇಲ್ಲದೆ ಸವಿಯಾದ ಬೆಲ್ಲ ನೀಡುತ್ತಿದ್ದಾರೆ ಆಲೆಮನೆಯಲ್ಲಿ ಈ ಜನ.

ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳು.

-ಅಂಜಲಿ ರಾಮಣ್ಣ

01/ಜನವರಿ/2007

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X